Mangaluru Train schedule: ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಪರಿಷ್ಕರಣೆ
ರೈಲಿನ ಸಮಯವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
Team Udayavani, Aug 2, 2024, 12:00 PM IST
ಮಂಗಳೂರು: ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರು ಜಂಕ್ಷನ್- ಯಶವಂತಪುರ ಮಧ್ಯೆ ಸಂಚರಿಸುವ
ನಂ.16576 ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಇದುವರೆಗೆ ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದ ಈ ರೈಲು, ಇನ್ನು ಬೇಗ ಹೊರಟು ಸಂಜೆ ಬೆಂಗಳೂರು ತಲುಪಲಿದೆ. ಈಗ ಪೂರ್ವಾಹ್ನ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತಿರುವ ರೈಲು, ಇನ್ನು ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ರಾತ್ರಿ 8.45ಕ್ಕೆ ಯಶವಂತಪುರ ತಲುಪುತ್ತಿದ್ದ ರೈಲು ಇನ್ನು ಸಂಜೆ 4.30ಕ್ಕೇ ತಲುಪಲಿದೆ.
ಈ ಸಂಬಂಧ ರೈಲ್ವೇ ಸಚಿವರನ್ನು ಒತ್ತಾಯಿಸಲಾಗಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿ ಆದೇಶವೂ ಆಗಿರುವುದು ಖುಷಿ ತಂದಿದೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಎಕ್ಸ್ ತಾಣದಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ
ಮಂಗಳೂರು(ಬೆಳಗ್ಗೆ7), ಪಡೀಲ್ (7.20), ಬಂಟ್ವಾಳ(7.33/7.35), ಕಬಕ ಪುತ್ತೂರು (8.20/8.22), ಸುಬ್ರ ಹ್ಮಣ್ಯ(9.00/9.10), ಸಕಲೇಶ ಪುರ(11.30/11.40), ಹೊಳೆಆಲೂರು (12.14/12/15), ಹಾಸನ (ಮಧ್ಯಾಹ್ನ 1/1/10), ಚನ್ನರಾಯ ಪಟ್ಟಣ (1.21/1.22),
ಶ್ರವಣ ಬೆಳಗೊಳ(1.31/1.32), ಬಿ.ಜಿ. ನಗರ (1.58/1.59), ಯಡಿಯೂರು(2.11/2.12), ಕುಣಿಗಲ್ (2.24/2.25), ನೆಲಮಂಗಲ (2.59/3.00), ಚಿಕ್ಕ ಬಾಣಾವರ(3.44/3.45), ಯಶವಂತಪುರ(4.30).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.