ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ: ಪಿಟ್‌ಲೈನ್ ಕಾಮಗಾರಿ ಬಹುತೇಕ ಪೂರ್ಣ
Team Udayavani, Apr 27, 2022, 7:20 AM IST
ಮಂಗಳೂರು: ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೊಸ ಪಿಟ್‌ಲೈನ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಪೂರಕ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ಮಾಸಾಂತ್ಯಕ್ಕೆ ಪೂರ್ಣಗೊಂಡು ಉಪಯೋಗಕ್ಕೆ ಲಭಿಸುವ ಸಾಧ್ಯತೆಗಳಿವೆ.
ಈ ವರೆಗೆ ಸೆಂಟ್ರಲ್ ನಿಲ್ದಾಣದಲ್ಲಿ 18 ಬೋಗಿಗಳು ನಿಲ್ಲುವ ಪಿಟ್‌ಲೈನ್ ಇತ್ತು. ಹೊಸದಾಗಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಿಸಲು ಹಾಲಿ ಇರುವ ಪಿಟ್‌ಲೈನನ್ನು ಸ್ಥಳಾಂತರಿಸುವ ಅನಿವಾರ್ಯತೆ ಇದ್ದು, ಈ ಹಿನ್ನೆಲೆಯಲ್ಲಿ 24 ಬೋಗಿಗಳು ನಿಲ್ಲುವ ಸಾಮರ್ಥ್ಯವುಳ್ಳ ಹೊಸ ಪಿಟ್‌ಲೆçನನ್ನು 6.76 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಪಿಟ್‌ಲೈನ್ ಉಪಯೋಗ ಏನು?
ಎರಡೂ ಬದಿಗಳಲ್ಲಿರುವ ಕ್ಯಾಟ್‌ವಾಕ್‌ಗಳು ಪಿಟ್‌ಲೆçನ್‌ನಲ್ಲಿ ಬೋಗಿಗಳ ನಿರ್ವಹಣೆ ಮತ್ತು ಸ್ವಚ್ಛತೆ ಕಾರ್ಯ ಸುಲಭ ವಾಗಿ ನಡೆಯಲು ಸಹಾಯ ಮಾಡುತ್ತವೆ. ಪಿಟ್‌ಲೈನ್ ನಲ್ಲಿ ಬೋಗಿಗಳ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತದೆ. ಪ್ರತೀ ಸಂಚಾರದ ಬಳಿಕ ಬೋಗಿಗಳ ಗೇರ್, ಬ್ರೇಕ್ ತಪಾಸಣೆ, ವಿದ್ಯುತ್ ವ್ಯವಸ್ಥೆ, ನೀರು ತುಂಬಿಸುವುದು, ಬೋಗಿ ಸ್ವತ್ಛತೆ ಮತ್ತಿತರ ನಿರ್ವಹಣೆ ಕೆಲಸಗಳನ್ನು ನಡೆಸಲಾಗುತ್ತದೆ.
ಪಿಟ್‌ಲೈನ್ ಬಳಿಕ ನೂತನ ಪ್ಲಾಟ್‌ಫಾರಂ
ಸೆಂಟ್ರಲ್ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಕೊರತೆ ಇದ್ದು ಇದು ಹೊಸ ರೈಲುಗಳ ಆರಂಭಕ್ಕೆ ಅಡ್ಡಿಯಾಗಿದೆ. ಹೆಚ್ಚುವರಿಯಾಗಿ 4 ಮತ್ತು 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಯೋಜಿಸಲಾಗಿದೆ. ಹೊಸ ಪ್ಲಾಟ್‌ಫಾರಂ ಕಾಮಗಾರಿ ಕೈಗೆತ್ತಿಗೊಳ್ಳಲು ಪ್ರಸ್ತುತ ಇರುವ ಪಿಟ್‌ಲೆçನನ್ನು ಸ್ಥಳಾಂತರಿಸುವುದು ಅಗತ್ಯವಾಗಿತ್ತು. ಸ್ಥಳಾಂತರಗೊಂಡ ಕೂಡಲೇ ಹೊಸ ಪ್ಲಾಟ್‌ಫಾರಂ ಕಾಮಗಾರಿ ಪ್ರಾರಂಭವಾಗಲಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನೂತನ ಪಿಟ್‌ಲೈನ್ ಕಾಮಗಾರಿ ಅಂತಿಮ ಹಂತದಲ್ಲಿದೆ. 480 ಮೀಟರ್‌ನಲ್ಲಿ ಕ್ಯಾಟ್‌ವಾಕ್ ಕಾಮಗಾರಿ ಪೂರ್ಣಗೊಂಡಿದೆ. ರೇಲ್ಸ್ ಜೋಡಣೆ, ವಿದ್ಯುತ್ ಸಂಪರ್ಕ ಮುಂತಾದ ಕೆಲಸಗಳು ಪ್ರಗತಿಯಲ್ಲಿದ್ದು ಶೀಘ್ರ ಪೂರ್ಣಗೊಳ್ಳಲಿದೆ.
– ಎಂ.ಕೆ. ಗೋಪಿನಾಥ್,
ಪಿಆರ್‌ಒ, ರೈಲ್ವೇ ಪಾಲಕ್ಕಾಡ್ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.