Mangaluru: ಕರಾವಳಿ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕಿದೆ: ಚಂದ್ರಶೇಖರ್
10 ವರ್ಷಗಳ ಬಿಜೆಪಿ ಅಧಿಕಾರವಧಿಯಲ್ಲಿ ಮಂಗಳೂರಿಗೆ ಹೇಳಿಕೊಳ್ಳುವ ಯೋಜನೆಗಳು ಬಂದಿಲ್ಲ
Team Udayavani, Sep 15, 2024, 1:16 AM IST
ಮಂಗಳೂರು: ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಜನತೆಗೆ ಏನು ಬೇಕೋ ಅದನ್ನು ನೀಡಲು ಪಕ್ಷಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ವಿವಿಧ ರೀತಿಯಲ್ಲಿ ಕಸರತ್ತು ನಡೆಸಬಹುದು. ಆದರೆ ಗೆದ್ದ ಬಳಿಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದರು. 10 ವರ್ಷಗಳ ಬಿಜೆಪಿ ಅಧಿಕಾರ ಕಾಲದಲ್ಲಿ ಮಂಗಳೂರಿಗೆ ಹೇಳಿಕೊಳ್ಳುವ ಯೋಜನೆಗಳು ಬಂದಿಲ್ಲ. ಕರಾವಳಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅವ್ಯವಸ್ಥೆಯಲ್ಲಿದೆ. ಮಂಗಳೂರು ರೈಲ್ವೇ ವಿಭಾಗ ಮಾಡಲು ಮುಂದಾಗುತ್ತಿಲ್ಲ. ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಜನಪರ ಕೆಲಸ ಮಾಡುವ ಅಗತ್ಯವಿದೆ ಎಂದರು.
ಅಭಿವೃದ್ಧಿ ರಾಜಕೀಯದಲ್ಲಿ ದಿ| ಅನಂತ್ ಕುಮಾರ್ ಮಾದರಿ ಕೇಂದ್ರದ ಮಾಜಿ ಸಚಿವ ದಿ| ಅನಂತ್ ಕುಮಾರ್ ಅವರು ಅಭಿವೃದ್ಧಿ ರಾಜಕೀಯದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಬೆಂಗಳೂರು ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಿದ್ದರು ಎಂದರು.
ಕರಾವಳಿ ಗೆಲ್ಲಲು ಶ್ರಮ: ವಸಂತಕುಮಾರ್
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಕರಾವಳಿಯಲ್ಲಿ ನಮ್ಮದೇ ಕಾರ್ಯತಂತ್ರದ ಮೂಲಕ ಕಾರ್ಯಕರ್ತರು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಗೆಲುವಿನ ಕಡೆಗೆ ಕೊಂಡೊಯ್ಯಲು ಮುಂದಾಗಿದ್ದೇವೆ ಎಂದರು.
ಸಹಬಾಳ್ವೆ, ಅಭಿವೃದ್ಧಿ ಅಗತ್ಯ: ಭಂಡಾರಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕರಾವಳಿಯಲ್ಲಿ ಧರ್ಮದ ಆಧಾರದಲ್ಲಿ ನಡೆಯುವ ರಾಜಕೀಯವನ್ನು ಬದಿಗಿಟ್ಟು ಅಭಿವೃದ್ಧಿ ರಾಜಕೀಯ ನಡೆಯಬೇಕಿದೆ. ಶಿಕ್ಷಣ ಕಾಶಿಯಾಗಿರುವ ಮಂಗಳೂರಿಗೆ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಐಟಿ ಸಂಸ್ಥೆಗಳು ಕರಾವಳಿಯಲ್ಲಿ ಹೂಡಿಕೆಗೆ ಮುಂದಾಗು ತ್ತಿಲ್ಲ. ಧರ್ಮ ರಾಜಕಾರಣದ ಹೊರತಾಗಿ ಸಹಬಾಳ್ವೆ ಹಾಗೂ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ವಿಜಯ ಮುಳುಗುಂದ, ಬಾಲರಾಜ್, ಸತ್ಯನಾರಾಯಣ, ಇನಾಯತ್ ಅಲಿ, ಎಂ.ಎಸ್. ಮುಹಮ್ಮದ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.