Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ

9 ತಿಂಗಳಲ್ಲಿ 10 ಸಾವಿರ ಜಾನುವಾರುಗಳಿಗೆ ಚಿಕಿತ್ಸೆ

Team Udayavani, Dec 18, 2024, 7:50 AM IST

Pashu-Sanjevani

ಮಂಗಳೂರು: ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಬೇಕಾಗಿದ್ದರೆ ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕಿಲ್ಲ; ಒಂದು ದೂರವಾಣಿ ಕರೆ ಮಾಡಿದರೆ ಮನೆಬಾಗಿಲಿಗೇ “ಪಶು ಸಂಜೀವಿನಿ’ ವಾಹನ ಬರುತ್ತದೆ. ಅದ ರಲ್ಲಿ ಇರುವ ವೈದ್ಯರ ತಂಡ ಚಿಕಿತ್ಸೆ ನೀಡುತ್ತದೆ.

ಪಶು ಸಂಗೋಪನ ಇಲಾಖೆಯ ಈ ಹೊಸ ಪ್ರಯತ್ನಕ್ಕೆ ಕರಾವಳಿಯಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, 9 ತಿಂಗಳುಗಳಲ್ಲಿ 9,903 ಜಾನುವಾರುಗಳಿಗೆ ಈ ರೀತಿ ಚಿಕಿತ್ಸೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮತ್ತು ಉಡುಪಿ ಜಿಲ್ಲೆಯಲ್ಲಿ 8 ಸಂಚಾರಿ ಪಶು ಸಂಜೀವಿನಿ ಘಟಕಗಳು ಆರಂಭಗೊಂಡಿವೆ.

ತುರ್ತು ಸೇವೆಗೆ 1962ಕ್ಕೆ ಕರೆ ಮಾಡಿ
ಮನೆಯಲ್ಲಿ ಹಸು, ಎಮ್ಮೆ, ಕುರಿ ಸಹಿತ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ, ತುರ್ತು ಸೇವೆಗಾಗಿ ಜಾನುವಾರುಗಳ ಮಾಲಕರು ಸಹಾಯವಾಣಿ 1962ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಕರೆ ಮಾಡಿದ ಸ್ವಲ್ಪವೇ ಸಮಯದಲ್ಲಿ ಸ್ಥಳಕ್ಕೆ ತಂಡ ಆಗಮಿಸಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡುತ್ತದೆ.

ಎಪ್ರಿಲ್‌ನಿಂದ ಈವರೆಗೆ ದ.ಕ. ಜಿಲ್ಲೆಯಲ್ಲಿ 4,964 ಮತ್ತುಉಡುಪಿ ಜಿಲ್ಲೆಯ 4,939 ಪಶುಗಳ ಆರೈಕೆ ಮಾಡಲಾಗಿದೆ. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಯೋಜನೆ ಜಾರಿಯಾಗಿದ್ದು, ಹೈನುಗಾರರ ಮನೆ ಬಾಗಿಲಿಗೆ ತುರ್ತುಅಗತ್ಯ ಪಶು ವೈದ್ಯಕೀಯ ಸೇವೆ ಒದಗಿಸಲು ಪ್ರತೀ ತಾಲೂಕಿ ನಲ್ಲಿ ಚಿಕಿತ್ಸಾ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ.

ಹೇಗೆ ಕಾರ್ಯನಿರ್ವಹಣೆ?
ಸಂಚಾರಿ ಚಿಕಿತ್ಸಾ ಘಟಕದ ಮೂಲಕ ಪ್ರತೀ ದಿನ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಸೇವೆ ಲಭ್ಯ. ಜಾನುವಾರುಗಳ ತುರ್ತು ಚಿಕಿತ್ಸೆ ಅಗತ್ಯವಿರುವವರು1962 ಸಹಾಯವಾಣಿಗೆ ಕರೆ ಮಾಡಿದಾಗ ಪಶುವೈದ್ಯರಿಗೆ ಕರೆ ವರ್ಗಾವಣೆ ಯಾಗುತ್ತದೆ. ಸಂಬಂಧಿಸಿದ ತಾಲೂಕಿಗೆ ಒದಗಿಸಲಾದ ವಾಹನ ದಲ್ಲಿ ಪಶುವೈದ್ಯರು ಲೊಕೇಶನ್‌ ಆಧರಿಸಿ ಕರೆ ಮಾಡಿದ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಇದರಲ್ಲಿ ದನ, ಎಮ್ಮೆ, ಹಂದಿ, ಕುರಿ ಮತ್ತು ಮೇಕೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

“ಪಶು ಸಂಜೀವಿನಿ’ ಘಟ ಕದ ಪ್ರತೀ ವಾಹನಕ್ಕೆ ಒಬ್ಬ ಪಶು ವೈದ್ಯರು, ಒಬ್ಬ ಪಶುವೈದ್ಯಕೀಯ ಸಹಾಯಕ, ಚಾಲಕ ಕಂ ಅಟೆಂ ಡರ್‌ ಇರುವರು. ಸದ್ಯ ಜಿಲ್ಲೆ ಯಲ್ಲಿ ದಿನಕ್ಕೆ 3 ಜಾನುವಾರುಗಳಿಗೆ ಚಿಕಿತ್ಸೆಯ ಗುರಿ ನೀಡಲಾಗಿದೆ.

2 ತಾಲೂಕುಗಳಲ್ಲಿ ವಾಹನ
ಈ ಯೋಜನೆ ಆರಂಭವಾಗುವ ಮೊದಲು ಜಿಲ್ಲೆಯಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನವಿದ್ದು, ಪಶು ವೈದ್ಯರನ್ನು ನಿಯೋಜಿಸಲಾಗಿತ್ತು. ಕಾಲ ಕ್ರಮೇಣ ವೈದ್ಯರ ಲಭ್ಯತೆ ಕಡಿಮೆಯಾದ ಕಾರಣ ಕೆಲವು ತಾಲೂಕುಗಳಿಗೆ ಸೇವೆ ರದ್ದಾಯಿತು. ಸದ್ಯ ಸುಳ್ಯ ಮತ್ತು ಬಂಟ್ವಾಳ ತಾಲೂ ಕಿನಲ್ಲಿ ಈ ವಾಹನವಿದೆ. ವಾರ ದಲ್ಲಿ 4 ದಿನಗಳ ಕಾಲ ಒಂದೊಂದು ಮಾರ್ಗದಲ್ಲಿ ವಾಹನ ಕಾರ್ಯಾ ಚರಣೆ ನಡೆಸುತ್ತಿದೆ. ಆದರೆ ಸಂಚಾರಿ ಪಶು ಚಿಕಿತ್ಸಾ ಘಟಕ ಎಲ್ಲ ತಾಲೂಕುಗಳಲ್ಲಿ ಲಭ್ಯವಿದೆ.

ಒಂದೇ ತಿಂಗಳಲ್ಲಿ 1,308 ಚಿಕಿತ್ಸೆ
ಉಭಯ ಜಿಲ್ಲೆಗಳಲ್ಲಿ ಈ ಘಟಕದ ಮೂಲಕ ನವೆಂಬರ್‌ ತಿಂಗ ಳಲ್ಲಿ 1,308 ಜಾನುವಾರುಗಳಿಗೆಚಿಕಿತ್ಸೆ ನೀಡಲಾಗಿದೆ. ದಕ್ಷಿಣ ಕನ್ನಡದ ಪುತ್ತೂರು-53, ಮೂಡು ಬಿದಿರೆ-118, ಸುಳ್ಯ-102, ಕಡಬ-92, ಬೆಳ್ತಂಗಡಿ-58, ಉಳ್ಳಾಲ-65, ಮೂಲ್ಕಿ-70, ಮಂಗ ಳೂರು-55, ಬಂಟ್ವಾಳ-59; ಉಡುಪಿ ಜಿಲ್ಲೆಯ ಕಾಪು-42, ಉಡುಪಿ-79, ಬೈಂದೂರು-54, ಹೆಬ್ರಿ-38, ಉಡುಪಿ ಪಾಲಿಕ್ಲಿನಿಕ್‌-20, ಕುಂದಾಪುರ-32, ಕಾರ್ಕಳ-155 ಮತ್ತು ಬ್ರಹ್ಮಾವರ ತಾಲೂಕಿನ 216 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.

“ಪಶು ಸಂಜೀವಿನಿ’ ಘಟಕದಡಿ ಉಭಯ ಜಿಲ್ಲೆಗಳಲ್ಲಿ ಎಪ್ರಿಲ್‌ನಿಂದ ನವೆಂಬರ್‌ವರೆಗೆ 9,903 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಗೆಂದು ಪ್ರತ್ಯೇಕ ತಂಡ ಇದ್ದು, ಯಾವುದೇ ತುರ್ತು ಆವಶ್ಯಕತೆ ಇದ್ದಲ್ಲಿ ಸಾರ್ವಜನಿಕರು 1962 ಸಹಾಯ ವಾಣಿಗೆ ಕರೆ ಮಾಡಬಹುದು.
– ಡಾ| ಅರುಣ್‌ ಕುಮಾರ್‌ ಶೆಟ್ಟಿ ಡಾ| ರೆಡ್ಡಪ್ಪ ಎಂ.ಸಿ.-ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಚಿಕಿತ್ಸಾ ಇಲಾಖೆ

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ

BYV-yathnal

BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-aie

Air India; ಮಂಗಳೂರು – ಅಬುಧಾಬಿ ವಿಮಾನ 12 ತಾಸು ವಿಳಂಬ!

hemant Soren

Jharkhand CM ಹೇಮಂತ್‌ ಸೊರೇನ್‌ ಬೇಕಲದಲ್ಲಿ

1-kere

Dharmasthala; ನಮ್ಮೂರು ನಮ್ಮ ಕೆರೆಯಡಿ 800ನೇ ಕೆರೆ ಹಸ್ತಾಂತರ

1-asi

Mangaluru; ಕಾವೂರು ಎಎಸ್ಐ ಜಯರಾಮ್ ನಿಧನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

1-aie

Air India; ಮಂಗಳೂರು – ಅಬುಧಾಬಿ ವಿಮಾನ 12 ತಾಸು ವಿಳಂಬ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.