Mangaluru: ನಿವೃತ್ತ ಪಿಡಿಒ ಕೊಲೆ ಆರೋಪಿ ಬಂಧನ
ಮಹಿಳೆಯರ ಗೆಳೆತನ ಬೆಳೆಸಿ ಚಿನ್ನಾಭರಣ ದೋಚುತ್ತಿದ್ದ ಖದೀಮ
Team Udayavani, Sep 17, 2024, 11:58 PM IST
ಮಂಗಳೂರು: ಮಹಿಳೆಯರೊಂದಿಗೆ ಸ್ನೇಹದ ನಾಟಕವಾಡಿ ಅವರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ, ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಬೆಳ್ಮಣ್ಣಿನ ರೋಹಿತ್ ಮಥಾಯಿಸ್ (33) ಬಂಧಿತ ಆರೋಪಿ. ಈತ 2021ರ ಡಿಸೆಂಬರ್ ತಿಂಗಳ ಮೊದಲ ವಾರದಿಂದ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಚಿನ್ನಾಭರಣಕ್ಕಾಗಿ ಕೊಲೆ
ರೋಹಿತ್ ಮಥಾಯಿಸ್ 2019ರಲ್ಲಿ ಬೆಳ್ಮಣ್ಣಿನಲ್ಲಿ ನೆರೆಮನೆಯವರಾದ ನಿವೃತ್ತ ಪಿಡಿಒ ಭರತಲಕ್ಷ್ಮೀ ಅವರನ್ನು ಇತರರೊಂದಿಗೆ ಸೇರಿಕೊಂಡು ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ದೇಹವನ್ನು ಬಾವಿಗೆ ಹಾಕಿದ್ದ. ಜೈಲುವಾಸ ಅನುಭವಿಸಿ ಅನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಜಾಲತಾಣದ ಮೂಲಕ ಗೆಳೆತನ
ಆರೋಪಿ ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ಮಹಿಳೆಯರ ಗೆಳೆತನ ಮಾಡಿ ವಿಶ್ವಾಸಗಳಿಸುತ್ತಿದ್ದ. ಇದೇ ರೀತಿ ಕುಲಶೇಖರದ ಮಹಿಳೆಯ ಸಂಪರ್ಕವೂ ಅಗಿ ಆಕೆಯ ಜತೆ ವಾಸವಿದ್ದು, ಕಳವು ಮಾಡಿಕೊಂಡು ಹೋಗಿದ್ದ.
ಮತ್ತೊಂದು ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದ
ಆರೋಪಿ ರೋಹಿತ್ ಕಳವಿನ ಬಳಿಕ ಮುಂಬಯಿಗೆ ತೆರಳಿದ್ದ. ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಲು ಯೋಜನೆ ರೂಪಿಸಿಕೊಂಡಿದ್ದ. ಓರ್ವ ಮಹಿಳೆ ಈತನ ಬಲೆಗೆ ಬಿದ್ದಿದ್ದಳು. ಅನಂತರ ಆಕೆಗೆ ಸಂಶಯ ಬಂದಿತ್ತು. ಆಕೆಯ ಮೂಲಕವೇ ಉಪಾಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fraud Case ಸೈಬರ್ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ
Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ
Sanctions: ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ಟ್ರಂಪ್ ಬಹಿಷ್ಕಾರ
Karnataka Govt.,: ಕೋವಿಡ್ ಬಳಿಕದ ಹಠಾತ್ ಮರಣಗಳ ತನಿಖೆಗೆ ಸಮಿತಿ
T-20 Champions: 2024ರ ಟಿ20 ವಿಶ್ವಕಪ್ ವಿಜೇತ ವೀರರಿಗೆ ವಜ್ರದುಂಗುರ!