Mangaluru: ಲೋಕೋಪಯೋಗಿ ನಿರೀಕ್ಷಣ ಮಂದಿರದ ಆವರಣದಿಂದ ಮರ ಸಾಗಾಟ: ಪ್ರಕರಣ ದಾಖಲು


Team Udayavani, Oct 24, 2024, 6:30 AM IST

Forest

ಮಂಗಳೂರು: ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣ ಮಂದಿರದ ಆವರಣದಲ್ಲಿ ಬೆಲೆಬಾಳುವ ಸಾಗುವಾನಿ, ದೇವದಾರು ಮರಗಳನ್ನು ಕಡಿದು ಸಾಗಿಸಿರುವ ಕುರಿತು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ(ಎನ್‌ಇಸಿಎಫ್‌) ನೀಡಿದ ದೂರಿನಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ನಿರೀಕ್ಷಣ ಮಂದಿರಕ್ಕೆ ಅಪಾಯವಿದೆ ಎಂದು ಹೇಳಿ ಲೋಕೋಪಯೋಗಿ ಇಲಾಖೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ 3 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರ ಕಡಿಯಲು ಅನುಮತಿ ನೀಡಲಾಗಿತ್ತು. ಆದರೆ ಇಲಾಖೆಯ ಅನುಮತಿ ಇಲ್ಲದೆ ದೇವದಾರು ಮರವನ್ನು ಸ್ಥಳದಿಂದ ಸಾಗಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮರ ಕಡಿಯಲು ಗುತ್ತಿಗೆ ಪಡೆದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್‌ ಲೋಬೋ ತಿಳಿಸಿದ್ದಾರೆ.

ಮರ ಕಡಿಯುತ್ತಿರುವುದು ಎನ್‌ಇಸಿಎಫ್‌ ಸದಸ್ಯರೊಬ್ಬರ ಗಮನಕ್ಕೆ ಬಂದಿದ್ದು, ಮಂಗಳವಾರ ವಾಹನದಲ್ಲಿ ಮರ ಸಾಗಾಟ ಮಾಡುವ ವೇಳೆ ಅರಣ್ಯ ಸಂಚಾರ ದಳಕ್ಕೆ ಮಾಹಿತಿ ನೀಡಿದ್ದಾರೆ. ಮರ ಸಾಗಾಟದ ವಾಹನ ಹೊಯ್ಗೆ ಬಜಾರ್‌ನ ಇಲಾಖಾ ನಾಟ ಸಂಗ್ರಹಾಲಯದಲ್ಲಿರುವುದು ಪತ್ತೆಯಾಗಿದೆ. ವಾಹನವನ್ನು ಪರಿಶೀಲಿ ಸಿದಾಗ ಅದರಲ್ಲಿ ದೇವದಾರು ಜಾತಿಯ ಮರದ ಕಟ್ಟಿಗೆ ಇರುವುದು ಕಂಡು ಬಂದಿದೆ. ಚಾಲಕನಲ್ಲಿ ವಿಚಾರಿಸಿದಾಗ ಮರ ಸಾಗಾಟಕ್ಕೆ ಪರವಾನಿಗೆ ಇಲ್ಲ ಎಂದು ತಿಳಿಸಿದ್ದಾನೆ.

ಬುಧವಾರ ಬೆಳಗ್ಗೆ ಅರಣ್ಯ ಸಂಚಾರಿ ದಳ ಅಧಿಕಾರಿಗಳು ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣ ಮಂದಿರಕ್ಕೆ ಭೇಟಿ ನೀಡಿದಾಗ 4 ಸಾಗುವಾನಿ, 1 ಉಪ್ಪಳಿಗೆ, 1 ಕಂಬ ಅಶೋಕ, ಹಾಗೂ 1 ದೇವದಾರು ಮರಗಳನ್ನು ಕಡಿದಿರುವುದು ಕಂಡು ಬಂದಿದೆ. ವಿವಿಧ ಅಳತೆಯ 24 ಸಾಗುವಾನಿ ದಿಮ್ಮಿಗಳನ್ನು ದಾಸ್ತಾನು ಇರಿಸಿರುವುದು ಕಂಡು ಬಂದಿದೆ.

ಹೊಗೆ ಬಜಾರ್‌ನಲ್ಲಿ ಪತ್ತೆಯಾಗಿರುವ ದೇವದಾರು ಮರದ ಕಟ್ಟಿಗೆ ಮಲ್ಲಿಕಟ್ಟೆಯ ನಿರೀಕ್ಷಣ ಮಂದಿರದಿಂದಲೇ ಸಾಗಿಸಿರು ವುದು ತಿಳಿದು ಬಂದಿದೆ. ಮರಗಳನ್ನು ಕಡಿಯಲು ಮಾತ್ರ ಆದೇಶವಾಗಿದ್ದು, ಸಾಗಾಟಕ್ಕೆ ಅನುಮತಿ ಇಲ್ಲ ಎಂದು ಅರಣ್ಯ ಸಂಚಾರ ದಳದ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಆದೇಶ ಮೀರಿ ಹೆಚ್ಚುವರಿ ಮರ ಕಡಿದಿರುವುದು ದೃಢಪಟ್ಟಲ್ಲಿ ಅದರ ವಿರುದ್ಧವೂ ಪ್ರಕರಣ ದಾಖಲಿಸಲಾಗು ವುದು ಎಂದು ಸಹಾಯಕ ಅರಣ್ಯ ಸಂಕ್ಷರಣಾಧಿಕಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.