ಮಣಿಪಾಲ್ ಹಾಸ್ಪಿಟಲ್ಸ್- ಸ್ಕಾಟ್ಲೆಂಡ್‌ನ ಕ್ವೀನ್ ಎಲಿಜಬೆತ್ ವಿ.ವಿ. ಒಪ್ಪಂದ
Team Udayavani, Apr 19, 2023, 6:20 AM IST
ಬೆಂಗಳೂರು: ದೇಶದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲ್ ಹಾಸ್ಪಿಟಲ್ಸ್ ಸ್ಕಾಟ್ಲೆಂಡ್‌ನ ಕ್ವೀನ್ ಎಲಿಜಬೆತ್ ಯೂನಿವರ್ಸಿಟಿ ಆಸ್ಪತ್ರೆನೊಂದಿಗೆ ಪಾಲುದಾರಿಕೆ ಪ್ರಕಟಿಸಿದೆ.
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ| ಎಚ್. ಸುದರ್ಶನ್ ಬಲ್ಲಾಳ್, ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಇಂಟರ್‌ವೆಲ್‌ನ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ| ರೆಡ್ಡಿ ಪ್ರಸಾದ್ ಯಾದವಲಿ, ಕ್ವೀನ್ ಎಲಿಜಬೆತ್ ವಿಶ್ವವಿದ್ಯಾನಿಲಯ ಹಾಸ್ಪಿಟಲ್ ಇಂಟರ್ವೆಲ್‌ನ ರೇಡಿಯಾಲಜಿ ವಿಭಾಗದ ಸಲಹಾತಜ್ಞ ಡಾ| ರಾಮ್ ಸುಂದರ್ ಕಸ್ತೂರಿ ಸಮ್ಮುಖದಲ್ಲಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಕೌಶಲ ವಿಸ್ತರಣೆಗೆ ಸಹಕಾರಿ
ಡಾ| ಸುದರ್ಶನ್ ಬಲ್ಲಾಳ್ ಮಾತನಾಡಿ, ರೋಗನಿರ್ಣಯ, ಹಸ್ತಕ್ಷೇಪಾತ್ಮಕ ಚಿಕಿತ್ಸೆಯಲ್ಲಿ ಕೌಶಲಗಳನ್ನು ವಿಸ್ತರಿಸಿಕೊಳ್ಳಲು ಈ ಪಾಲುದಾರಿಕೆ ಸಹಕಾರಿ. ಜಾಗತಿಕ ಪರಿಣಿತರಿಂದ ಕಲಿತುಕೊಳ್ಳಲು ವಿಕಿರಣಶಾಸ್ತ್ರ ತಜ್ಞರಿಗೆ ಹಿಂದೆಂದೂ ಇಲ್ಲದ ಅವಕಾಶವನ್ನು ಈ ಸಹಭಾಗಿತ್ವ ಪೂರೈಸಲಿದೆ. ಈ ಪಾಲುದಾರಿಕೆ ನಮ್ಮ ವೈದ್ಯರು ಮತ್ತು ರೋಗಿಗಳಿಗೆ ಮಾತ್ರ ಲಾಭದಾಯಕವಾಗಿರುವುದಲ್ಲದೇ, ದೇಶದಲ್ಲಿ ವಿಶೇಷ ವಿಭಾಗವಾಗಿ ಉನ್ನತೀಕರಿಸಲು ಸಹ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮಗಿದೆ. ಕ್ವೀನ್ ಎಲಿಜಬೆತ್ ವಿ.ವಿ. ಆಸ್ಪತ್ರೆಯು ಅತ್ಯಾಧುನಿಕ ಅತ್ಯುನ್ನತ ಮಟ್ಟದ ಆರೈಕೆ ಕೇಂದ್ರವಾಗಿದೆ ಎಂದರು.
ಹೆಚ್ಚಿನ ಶೈಕ್ಷಣಿಕ ಅವಕಾಶ
ಈ ಪಾಲುದಾರಿಕೆಯಿಂದ ವಿಕಿರಣಶಾಸ್ತ್ರ ತಜ್ಞರಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳು ಸಿಗಲಿವೆ. ಇದರಿಂದ ಈ ತಜ್ಞರು ಉನ್ನತ ತಂತ್ರಗಳು ಮತ್ತು ಉನ್ನತ ಹಂತದ ವೈದ್ಯಕೀಯ ಕಾರ್ಯ ವಿಧಾನಗಳ ಬಗ್ಗೆ ಕಲಿಯಲು ಸಹಾಯವಾಗಲಿದೆ. ಇದೇ ರೀತಿಯಲ್ಲಿ ಗ್ಲಾಸ್ಕೋನ ಕ್ಯೂಇಯುಎಚ್‌ನಲ್ಲಿ ತರಬೇತಿ ಪಡೆಯುತ್ತಿರುವವರು ಬೆಂಗಳೂರಿನ ಮಣಿಪಾಲ್‌ಆಸ್ಪತ್ರೆಯಲ್ಲಿ ವೈದ್ಯರು ಅಳವಡಿಸಿಕೊಳ್ಳುವ ನೂತನ ತಂತ್ರಗಳನ್ನು ಕಲಿತುಕೊಳ್ಳಲು ಸಾಧ್ಯವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.