Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

"ನವರೂಪ' ಅದೃಷ್ಟಶಾಲಿ ಬಂಪರ್‌ ಬಹುಮಾನ ವಿತರಣೆ

Team Udayavani, Nov 17, 2024, 2:41 AM IST

UV-Navaroopa

ಮಣಿಪಾಲ: ಗ್ರಾಮೀಣವೂ ಸೇರಿದಂತೆ ಎಲ್ಲ ಭಾಗಗಳ ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಉದಯವಾಣಿಯದ್ದು. ಹಲವು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳುವಂತೆ ಮಾಡುವ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿದೆ ಎಂದು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ವಿನೋದ್‌ ಕುಮಾರ್‌ ಹೇಳಿದರು.

ನವರಾತ್ರಿ ಸಂದರ್ಭ ನಡೆಸಿದ “ನವರೂಪ’ ಅದೃಷ್ಟಶಾಲಿ ಬಂಪರ್‌ ಬಹುಮಾನ ವಿಜೇತರಿಗೆ ಶನಿವಾರ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಜರಗಿದ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಹೊಸ ಪರಿಕಲ್ಪನೆಯ ಮೂಲಕ ಆಯೋಜಿಸಲ್ಪಟ್ಟ ಈ ಸ್ಪರ್ಧೆಯಿಂದ ನಮ್ಮ ಸಂಸ್ಕೃತಿಯೊಂದಿಗೆ ಮಹಿಳೆಯರಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಕೈಂಕರ್ಯವನ್ನು “ಉದಯವಾಣಿ’ ಮಾಡಿಕೊಂಡು ಬಂದಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಯಶಸ್ಸುಗೊಳಿಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಮಣಿಪಾಲ ಸಮೂಹ ಸಂಸ್ಥೆಯ ವನಿತಾ ಜಿ. ಪೈ ಅವರು ಅದೃಷ್ಟಶಾಲಿ ಬಂಪರ್‌ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

“ಉದಯವಾಣಿ’ ಸಂಪಾದಕ ಅರವಿಂದ ನಾವಡ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಹಮ್ಮಿಕೊಂಡ “ನವರೂಪ’ ಒಂದು ವಿಶಿಷ್ಟವಾದ ಕಾರ್ಯಕ್ರಮ. ಆರಂಭದ ವರ್ಷಗಳಲ್ಲಿ ಕೇವಲ ನಗರ ಭಾಗಗಳಿಂದ ಮಾತ್ರ ಪ್ರತಿಕ್ರಿಯೆ ದೊರಕುತ್ತಿತ್ತು. ಈಗ ಗ್ರಾಮೀಣ ಪ್ರದೇಶದವರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.ಗ್ರಾಮೀಣ ಜನರ ಜ್ಞಾನದ ಹಸಿವು ನೀಗಿಸುವುದರೊಂದಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದೆ. ಮುಂದಿನ ವರ್ಷಗಳಲ್ಲಿ ಈ ಸ್ಪರ್ಧೆ ಯನ್ನು ಇನ್ನಷ್ಟು ವಿಶೇಷ ಹಾಗೂ ಅರ್ಥಪೂರ್ಣವಾಗಿ ನಡೆಸುವ ಯೋಜನೆ ಇದೆ ಎಂದರು.

ಮ್ಯಾಗಸಿನ್ಸ್‌ ಮತ್ತು ಸ್ಪೆಶಲ್‌ ಇನಿಶಿ ಯೇಟಿವ್ಸ್‌ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ನವರೂಪದಲ್ಲಿ ಓದುಗರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಯಶಸ್ಸನ್ನು ತಂದಿರುವ ಎಲ್ಲ ಸ್ಪರ್ಧಾಳುಗಳಿಗೆ ಕೃತಜ್ಞತೆ ಸಲ್ಲಿಸಿ, ಈ ವೇದಿಕೆಯನ್ನು ಮಹಿಳಾ ಸಬಲೀಕರಣದ ಮೆಟ್ಟಿಲುಗಳನ್ನಾಗಿ ಉಪಯೋಗಿಸಬೇಕು ಎಂದು ಹೇಳಿದರು.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಎಚ್‌ಆರ್‌ ವಿಭಾಗದ ಸೀನಿಯರ್‌ ಮ್ಯಾನೇಜರ್‌ ಉಷಾರಾಣಿ ಕಾಮತ್‌ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸ್ಥಾನಿಕ ಸಂಪಾದಕ ಕೃಷ್ಣ ಭಟ್‌ ಅಳದಂಗಡಿ ವಂದಿಸಿದರು.

ಬಂಪರ್‌ ಬಹುಮಾನ ವಿಜೇತರು
ದಿವ್ಯಾ ಮತ್ತು ಬಳಗ ಕೊಟ್ಟಾರ, ವಂದನಾ ಮತ್ತು ಬಳಗ ಬಂಟಕಲ್ಲು, ವೀರ ಮಾರುತಿ ಭಜನ ಮಂದಿರದ ಸದಸ್ಯೆಯರು ಮಡಿಕಲ್‌ ಉಪ್ಪುಂದ.

ಸ್ಪರ್ಧಾತ್ಮಕತೆ ಬೆಳೆಸಿತು
“ಬಹುಮಾನ ಲಭಿಸಿದ್ದು ನಮಗೂ ನಮ್ಮ ಊರಿನವರಿಗೂ ಅತ್ಯಂತ ಖುಷಿ ತಂದಿದೆ. ನಮ್ಮ ಅದೆಷ್ಟೋ ಸ್ನೇಹಿತರು ಮುಂದಿನ ವರ್ಷ ನಾವೂ ಸ್ಪರ್ಧೆಯಲ್ಲಿ ಭಾಗವಹಿಸುತ್ತೇವೆ ಎನ್ನುವುದರ ಮಟ್ಟಿಗೆ ನವರೂಪ ಸ್ಪರ್ಧೆ ಎಲ್ಲರ ಮೇಲೆ ಪ್ರಭಾವ ಬೀರಿದೆ. “ಉದಯವಾಣಿ’ ಆಯೋಜನೆಯ ಈ ಸ್ಪರ್ಧೆಯಿಂದ ನಮ್ಮಂತಹ ಅದೆಷ್ಟೋ ಮಹಿಳೆ ಯರಿಗೆ ಸ್ಪರ್ಧಾತ್ಮಕ ಸಮಾಜಕ್ಕೆ ತೆರೆದುಕೊಳ್ಳಲು ಅನುವು ಮಾಡಿದೆ.”  -ಮುಕ್ತಾ, ಮಡಿಕಲ್‌ ಉಪ್ಪುಂದ

ಸಂಭ್ರಮ ಹೆಚ್ಚಿಸಿದ ಬಹುಮಾನ
“ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿರಳ. ಆದರೆ ಅಪಾರ್ಟ್‌ಮೆಂಟ್‌ನ ಮಹಿಳೆಯರೆಲ್ಲರೂ ಒಂದು ಗ್ರೂಪ್‌ ರಚಿಸಿಕೊಂಡು ಪ್ರತಿದಿನ ಫೋಟೋ ತೆಗೆದು “ಉದಯವಾಣಿ’ ಗೆ ಕಳುಹಿಸುತ್ತಿದ್ದೆವು. ಬಂಪರ್‌ ಬಹುಮಾನ ಲಭಿಸಬಹುದೆನ್ನುವ ಕಲ್ಪನೆ ನಮಗಿರಲಿಲ್ಲ. ಇದು ನಿಜಕ್ಕೂ ಅಚ್ಚರಿಯ ಬಹುಮಾನ.” -ದಿವ್ಯಾ, ಮಂಗಳೂರು

ಇಮ್ಮಡಿಯಾದ ಖುಷಿ
“ನವರಾತ್ರಿ ಆರಂಭದ ಮೊದಲೇ ಗುಂಪು ಕಟ್ಟಿಕೊಂಡು ಸೀರೆಯೊಂದಿಗೆ ಸಿದ್ಧರಾಗಿದ್ದೆವು. ನವರಾತ್ರಿ ಸಂದರ್ಭ ಪ್ರತಿದಿನ ಫೋಟೋ ತೆಗೆಸಿ ಕಳುಹಿಸುವುದೇ ನಮಗೊಂದು ಸಂಭ್ರಮ. ಪ್ರತಿದಿನ ಒಟ್ಟಾಗಿ ಫೋಟೋ ತೆಗೆಸಿಕೊಳ್ಳುವಲ್ಲಿ ಹೆಚ್ಚು ಖುಷಿ ಪಟ್ಟಿದ್ದೇವೆ. ಬೆಳಗ್ಗೆ ‌ ಮಾಡುವ ಮೊದಲ ಕೆಲಸವೇ “ಉದಯವಾಣಿ’ ಓದುವುದು ಹಿಂದಿನಿಂದಲೂ ಬಂದ ರೂಢಿ. ಅಂತಹ ಅಗ್ರ ಪಂಕ್ತಿಯ ಪತ್ರಿಕೆ ಆಯೋಜಿಸಿದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದು ನಿಜಕ್ಕೂ ನಮ್ಮ ಅದೃಷ್ಟ.” –ಅಶ್ವಿ‌ನಿ, ಬಂಟಕಲ್ಲು

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.