ಮಣಿಪುರ ಮತಕ್ಕೆ ಹಿಂಸೆಯ ಛಾಯೆ


Team Udayavani, Feb 21, 2022, 8:20 AM IST

ಮಣಿಪುರ ಮತಕ್ಕೆ ಹಿಂಸೆಯ ಛಾಯೆ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಫೆ.28 ಮತ್ತು ಮಾ.5ರಂದು – ಹೀಗೆ ಎರಡು ಹಂತಗಳಲ್ಲಿ ನಡೆಯಲಿದೆ. 2017ಕ್ಕಿಂತ ಹಿಂದೆ ನಡೆದಿದ್ದ ಚುನಾವಣೆಗಳು ಮತ್ತು ಇತರ ಸಂದರ್ಭಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿಯೇ ಪ್ರಸಕ್ತ ಸಾಲಿನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲು ಭಾರತದ ಚುನಾವಣ ಆಯೋಗ (ಇಸಿಐ) ನಿರ್ಧರಿಸಿ, ವೇಳಾಪಟ್ಟಿ ಪ್ರಕಟಿಸಿತ್ತು. ಸದ್ಯದ ಬೆಳವಣಿಗೆ ಏನೆಂದರೆ ಕಣದಲ್ಲಿ ಇರುವ ಅಭ್ಯರ್ಥಿಗಳ ಮೇಲೆ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಳಿಗಳು ಹೆಚ್ಚಾಗತೊಡಗಿವೆ. ಹೊಸ ಬೆಳವಣಿಗೆಯಲ್ಲಿ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ)ಯ ಅಭ್ಯರ್ಥಿ ಲ್ಯೂರೋಬಾಮ್‌ ಸಂಜಯ್‌ ಅವರ ತಂದೆಯವರನ್ನು ಗುರಿಯಾಗಿಸಿಕೊಂಡು ಅಪರಿಚಿತರು ಗುಂಡು ಹಾರಿಸಿದ್ದಾರೆ. ತಂದೆಯವರ ಆರೋಗ್ಯ ವಿಚಾರಿಸಲೋಸುಗ ಇಂಫಾಲಕ್ಕೆ ತೆರಳುತ್ತಿದ್ದ ಸಂಜಯ್‌ ಅವರ ಕಾರಿನ ಮೇಲೆ ಕೂಡ ಕಿಡಿಗೇಡಿಗಳು ದಾಳಿ ನಡೆಸಿ ದ್ದಾರೆ. 60 ಸ್ಥಾನಗಳಿಗೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕವೂ ಕೆಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಿಂಸಾಚಾರ ನಡೆದಿತ್ತು. ಸಾರ್ವಜನಿಕರಿಗೆ ತೊಂದರೆ ಮಾಡುವ ಕೃತ್ಯಗಳು ನಡೆದಿದ್ದವು.

ಚುನಾವಣೆ ನಡೆಯಲಿರುವ ರಾಜ್ಯದಲ್ಲಿ 2021ರ ಡಿಸೆಂಬರ್‌ನಲ್ಲಿಯೂ ಕೂಡ ಹಿಂಸಾಚಾರದಲ್ಲಿ ತೌಬಾಲ್‌ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಗುಂಡು ಹಾರಿಸಿ ಕೊಲ್ಲಲಾ ಗಿತ್ತು. ಕಳೆದ ತಿಂಗಳ ಎರಡನೇ ವಾರ ನಡೆದಿದ್ದ ಮತ್ತೂಂದು ಘಟನೆಯಲ್ಲಿ ಸಮುರೋ ಎಂಬಲ್ಲಿ ಮಣಿಪುರ ಕೃಷಿ ಸಚಿವ ಒ.ಲುಖೋಯ್‌ ಸಿಂಗ್‌ ಅವರ ಆಪ್ತ ಸೇರಿದಂತೆ ಇಬ್ಬರನ್ನು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದರು. ಆ ಪ್ರಕರಣದ ಹಿನ್ನೆಲೆಯಲ್ಲಿ ಯಾರಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.

ವಿಪಕ್ಷಗಳಿಗೆ ಭದ್ರತೆಗೆ ನೀಡಿರುವ ವ್ಯವಸ್ಥೆಯನ್ನು ವಿಪಕ್ಷಗಳ ಮುಖಂಡರು ದುರುಪಯೋಗ ಮಾಡಿಕೊಳ್ಳುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಎನ್‌.ಬೈರೇನ್‌ ಸಿಂಗ್‌ ದೂರಿದ್ದಾರೆ. ಎನ್‌ಪಿಪಿ ಮುಖಂಡ- ಮೇಘಾಲಯ ಸಿಎಂ ಕೊನಾರ್ಡ್‌ ಸಂಗ್ಮಾ ತಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ನಡೆದ ದಾಳಿಗೆ ಬಿಜೆಪಿಯೇ ಕಾರಣವೆಂದಿದ್ದಾರೆ.
ಅದೇನೇ ಇರಲಿ ಮಣಿಪುರದಲ್ಲಿ ಹಿಂಸೆಯ ಶೈಲಿ ಬದಲಾ ಗಿದೆಯಷ್ಟೇ. ಹಿಂದಿನ ಸಂದರ್ಭಗಳಲ್ಲಿ ರಾಜ್ಯದಲ್ಲಿ ಚಟುವಟಿಕೆಯಲ್ಲಿ ಇದ್ದ ನಿಷೇಧಿತ ಸಂಘಟನೆಗಳು ನೇರ ವಾಗಿಯೇ ಸಾರ್ವಜನಿಕರು ಚುನಾವಣೆಯಲ್ಲಿ ಪಾಲ್ಗೊಳ್ಳಬಾರದು ಎಂಬ ಕಾರಣಕ್ಕಾಗಿ ಗುಂಡು ಹಾರಿಸುವುದೋ ಅಭ್ಯರ್ಥಿಗಳ ಅಪಹರಣ ಮಾಡಿ ನಾಮಪತ್ರ ವಾಪಸ್‌ ಪಡೆಯುವಂತೆ ಒತ್ತಡ ಹೇರುವುದು ಮತ್ತಿತರ ಕೃತ್ಯಗಳನ್ನು ನಡೆಸುತ್ತಿದ್ದರು. ಈಗ ಅದರ ಬದಲಾಗಿ ಟಿಕೆಟ್‌ ಸಿಗದ ಕೋಪಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಮಣಿಪುರದಲ್ಲಿ 2017ರಿಂದ 2022 ಅವಧಿಯಲ್ಲಿ ಪಕ್ಷಾಂತರ ಗೊಂಡವರ ಸಂಖ್ಯೆಯೇ ಹೆಚ್ಚು. ಹೀಗಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಯೇ ಪ್ರಧಾನವೇ ಹೊರತು, ಇನ್ನು ಯಾವ ಅಂಶ ಗಳೂ ಪರಿಗಣನೆಗೆ ಬರುವುದಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಚುನಾವಣೆ ಅತ್ಯಂತ ತುರುಸಿನದ್ದು ಮತ್ತು ಕುತೂಹಲಕಾರಿಯಾಗಿ ಪರಿಣಮಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಒಕ್ರಂ ಇಬೋಬಿ ಸಿಂಗ್‌ ರವಿವಾರ ಮಾಡಿರುವ ಹೊಸ ಆರೋಪದಂತೆ ರಾಜ್ಯದಲ್ಲಿನ ಪ್ರತ್ಯೇಕತವಾದಿ ಸಂಘಟನೆಗಳು ಮತ್ತು ಬಿಜೆಪಿ ನಡುವೆ ನಿಕಟ ಸಂಬಂಧವಿದೆ. ಹೀಗಾಗಿಯೇ 2017ರಲ್ಲಿ 28 ಸ್ಥಾನ ಗೆದ್ದರೂ, ಆ ಪಕ್ಷ ಅಧಿಕಾರ ನಡೆಸುವಂತಾಯಿತು ಎಂದು ದೂರಿದ್ದಾರೆ. ಕೆಲವು ದಿನಗಳ ಅಂತರದಲ್ಲಿ ನಡೆದ ಹಿಂಸಾ ಘಟನೆಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಈ ಆರೋಪ ಎರಡು ಹಂತಗಳಲ್ಲಿ ನಡೆಯಲಿರುವ ಚುನಾ ವಣೆಯಲ್ಲಿ ಮತ ವಿಭಜಿಸಲು ಕಾರಣವಾಗುತ್ತದೆಯೋ ಗೊತ್ತಿಲ್ಲ. ಪ್ರಸಕ್ತ ಸಾಲಿನ ಮಣಿಪುರ ಚುನಾವಣೆಯಲ್ಲಿನ ವಿಶೇಷವೆಂದರೆ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ), ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಯು, ಶಿವಸೇನೆ ಮೈತ್ರಿಕೂಟ ಮಾಡಿಕೊಂಡಿವೆ. ಈ ಪೈಕಿ, ಎನ್‌ಪಿಪಿಗೆ ಮಾತ್ರ ರಾಜ್ಯದಲ್ಲಿ ಕೊಂಚ ಬಲ ಉಂಟು. ಉಳಿದ ಎರಡು ಪಕ್ಷಗಳು ನೆಪಮಾತ್ರಕ್ಕೆ ಸ್ಪರ್ಧೆ ಮಾಡಿವೆ. ಹಾಗೆಂದು ಟಿಕೆಟ್‌ ಸಿಗದ ಕೆಲವು ಮುಖಂಡರು ಜೆಡಿಯು, ಶಿವೇನೆಯತ್ತ ಮುಖ ಮಾಡಿದ್ದಾರೆ.

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.