ಮೋದಿಯಿಂದ ಉಗ್ರರಿಗೆ ತಕ್ಕ ಪಾಠ; ಉ. ಪ್ರದೇಶದಲ್ಲಿ ಅಮಿತ್‌ ಶಾ ಮಾತು

ಬಹಿರಂಗ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ

Team Udayavani, Feb 3, 2022, 6:50 AM IST

ಮೋದಿಯಿಂದ ಉಗ್ರರಿಗೆ ತಕ್ಕ ಪಾಠ; ಉ. ಪ್ರದೇಶದಲ್ಲಿ ಅಮಿತ್‌ ಶಾ ಮಾತು

ಲಕ್ನೋ: “ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ 10 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಆ ಸಂದರ್ಭ ದಲ್ಲಿ ಪಾಕಿಸ್ಥಾನದ ಉಗ್ರರು ನಮ್ಮ ಗಡಿಯೊಳಗೆ ಬಂದು ನಮ್ಮ ಸೈನಿಕರನ್ನು ಕೊಂದು ಹೋಗಿದ್ದರು. ಆಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು ಏನೂ ಕ್ರಮ ಕೈಗೊಳ್ಳಲಿಲ್ಲ. ಆದರೆ ನಮ್ಮ ಪ್ರಧಾನಿ ಮೋದಿಯವರು ಉರಿ ಹಾಗೂ ಪುಲ್ವಾಮಾ ಮೇಲೆ ದಾಳಿಗಳಾದ ಕೇವಲ 10 ದಿನಗಳೊಳಗೆ ಪಾಕಿಸ್ಥಾನದ ಉಗ್ರರ ತಾಣಗಳ ಮೇಲೆ ಸರ್ಜಿಕಲ್‌ಸ್ಟ್ರೈಕ್‌ ನಡೆಸಿ, ಅವರನ್ನು ನಿರ್ನಾಮ ಮಾಡಿದರು” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, “ಈವರೆಗೆ ಉತ್ತರ ಪ್ರದೇಶವನ್ನು ಆಳಿರುವ ಎಸ್ಪಿ ಹಾಗೂ ಬಿಎ ಸ್‌ ಪಿ ಪಕ್ಷಗಳು, ಚಿಕ್ಕಮ್ಮ – ಸೋದರಳಿಯರ ದರ್ಬಾರ್‌ ನಡೆಸಿವೆ’ ಎಂದು ಟೀಕಿಸಿದರು. ಸಹಸ್ವಾನ್‌ನಲ್ಲಿಯೂ ಬಹಿರಂಗ ಪ್ರಚಾರ ನಡೆಸಿದ ಶಾ, ಬದೌನ್‌ನಲ್ಲಿ ಬಹಿರಂಗ ಪ್ರಚಾ ರದ ಜತೆಗೆ ಮನೆ-ಪ್ರಚಾರ ನಡೆಸಿದರು.

ಬೂತ್‌ಗಳಲ್ಲಿ ಸಂಗೀತ!
ನೋಯ್ಡಾ: ಉತ್ತರ ಪ್ರದೇಶದಲ್ಲಿ ಫೆ. 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮತದಾರರಿಗೆ ಮತ ಚಲಾಯಿಸಿದ್ದು ನೆನಪಿನಲ್ಲಿ ಉಳಿಯುವಂತಾಗಲು ಗೌತಮಬುದ್ಧ ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತು ನೋಯ್ಡಾಗಳಲ್ಲಿ 250 ಮಾದರಿ ಚುನಾವಣ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳನ್ನು ಬಲೂನ್‌ಗಳು, ವಿವಿಧ ಹೂವುಗಳಿಂದ ಮತ್ತು ಮಧುರ ಸಂಗೀತಗಳಿಂದ ಇರುವಂತೆ ಸಿದ್ಧ ಪಡಿಸಲಾಗುತ್ತದೆ. ಗೌತಮ ಬುದ್ಧನಗರ ಜಿಲ್ಲೆಯಲ್ಲಿ 1,840 ಚುನಾವಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳ ಪೈಕಿ 243 ಮಾದರಿ ಚುನಾವಣ ಬೂತ್‌ಗಳಾಗಿವೆ. ಅದರಲ್ಲಿ 20 ಬೂತ್‌ಗಳನ್ನು ಪೂರ್ಣ ಪ್ರಮಾಣದ ಮಹಿಳೆಯರೇ ನಿರ್ವಹಿಸಲಿದ್ದಾರೆ.

ಭ್ರಷ್ಟಾಚಾರ ಮಾಡೆವು: ಅಭ್ಯರ್ಥಿಗಳ ವಾಗ್ಧಾನ
ಗೋವಾ ಚುನಾವಣೆಗೆ ಸ್ಪರ್ಧಿಸಿರುವ ಆಮ್‌ ಆದ್ಮಿ ಪಾರ್ಟಿಯ ಎಲ್ಲ 40 ಅಭ್ಯರ್ಥಿಗಳು, ತಾವು ಯಾವುದೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗವಹಿಸುವುದಿಲ್ಲ ಎಂಬ ವಿವರಣೆಯಿರುವ ಅಫಿಡವಿಟ್‌ಗೆ ಬುಧವಾರ ಸಹಿ ಹಾಕಿದ್ದಾರೆ. ಪಣಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿ ವಾಲ್‌ ಅವರ ಸಮ್ಮುಖದಲ್ಲಿ ಅಫಿಡವಿಟ್‌ಗೆ ಸಹಿ ಹಾಕಿದರು. “ಗೋವಾದಲ್ಲಿ ಪಕ್ಷಾಂತರ ಚಟು ವಟಿಕೆಗಳು ನಡೆಯುತ್ತಿವೆ. ಇದರಿಂದ ಜನರಿಗೆ ರಾಜಕೀಯ ನಾಯಕರಲ್ಲಿ ವಿಶ್ವಾಸವೇ ಹೊರಟು ಹೋಗುತ್ತಿದೆ. ಹಾಗಾಗಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಇದನ್ನೂ ಓದಿ:ವಂದೇ ಭಾರತ್‌ ರೈಲು ಓಡಿಸಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒತ್ತಾಯ

ಬಡವರಿಗೆ ವಾರ್ಷಿಕ 40 ಸಾವಿರ ನೆರವು
ಉತ್ತರಾಖಂಡದ ಐದು ಲಕ್ಷ ಬಡ ಕುಟುಂಬಗಳಿಗೆ ವಾರ್ಷಿಕವಾಗಿ 40 ಸಾವಿರ ರೂ. ನೀಡಿಕೆ. ನಾಲ್ಕು ಲಕ್ಷ ಯುವಕರಿಗೆ ಉದ್ಯೋಗ, ಉತ್ತರಾಖಂಡವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸುವ ಗುರಿ. ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 500 ರೂ. ದಾಟದಂತೆ ಕ್ರಮ-ಇವು ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಚುನಾವಣ ಪ್ರಣಾಳಿಕೆಯ ಪ್ರಮುಖಾಂಶ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವರ್ಚುವಲ್‌ ಕಾನ್ಫರೆನ್ಸ್‌ ಮೂಲಕ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮೋದಿ ವಿರುದ್ಧ ಆರೋಪ: ಇದೇ ಸಂದರ್ಭದಲ್ಲಿ ಮೋದಿ ಸರಕಾರದ ವಿರುದ್ಧ ಆರೋಪ ಮಾಡಿದ ಅವರು, ಪ್ರಧಾನಿಯವರು ತಮ್ಮ ಬಳಕೆಗೆ ಎರಡು ಹೆಲಿಕಾಪ್ಟರ್‌ಗಳನ್ನು 16 ಸಾವಿರ ಕೋಟಿ ರೂ. ವೆಚ್ಚ ಮಾಡಿ ಕೊಂಡಿದ್ದಾರೆ. ದೇಶಾದ್ಯಂತ ಕಬ್ಬು ಬೆಳೆಗಾರರಿಗೆ 14,000 ಕೋಟಿ ರೂ. ಬಾಕಿಯಿದೆ. ಹೆಲಿಕಾಪ್ಟರ್‌ ಖರೀದಿಗೆ ವ್ಯಯಿಸಿದ ಹಣವನ್ನು ಕಬ್ಬು ಬೆಳೆಗಾರರಿಗೆ ಕೊಡಬಾರದಿತ್ತೇ ಎಂದು ಪ್ರಶ್ನಿಸಿದ್ದಾರೆ.

ಉಚಿತ ವಿದ್ಯುತ್‌: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ನಾಯಕ ಹರೀಶ್‌ ರಾವತ್‌, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೆ ವಾರ್ಷಿಕವಾಗಿ 100 ಯೂನಿಟ್‌ ವಿದ್ಯುತ್ತನ್ನು ಮೊದಲ ವರ್ಷ, 200 ಯೂನಿಟ್‌ ವಿದ್ಯುತ್ತನ್ನು ಎರಡನೇ ವರ್ಷ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.