ಮನು ಭಾಕರ್ ಶೂಟಿಂಗ್ ಅಭ್ಯಾಸಕ್ಕೆ ಸ್ವಿಸ್ ನಿರ್ಮಿತ ಇಲೆಕ್ಟ್ರಾನಿಕ್ ಸಾಧನ
Team Udayavani, May 9, 2020, 10:05 PM IST
ಗೊರಿಯಾ (ಹರ್ಯಾಣ):ಭಾರತದ ಶೂಟಿಂಗ್ ತಾರೆ ಮನು ಭಾಕರ್ ಹರ್ಯಾಣದ ತಮ್ಮ ನಿವಾಸದಲ್ಲಿ ನೂತನ ತಂತ್ರಜ್ಞಾನವನ್ನು ಒಳಗೊಂಡ ಇಲೆಕ್ಟ್ರಾನಿಕ್ ಸಾಧನವೊಂದನ್ನು ಅಳ ವಡಿಸಿಕೊಂಡು ಒಲಿಂಪಿಕ್ಸ್ ಅಭ್ಯಾಸ ನಡೆಸುತ್ತಿದ್ದಾರೆ.
ಈವರೆಗೆ ಇದ್ದ ಮಾಮೂಲು ಶೂಟಿಂಗ್ ಸಾಧನ ಆಗಾಗ ಕೈಕೊಡುತ್ತಿದ್ದುದರಿಂದ ಮನು ಭಾಕರ್ ನೂತನ ತಂತ್ರಜ್ಞಾನಕ್ಕೆ ಮೊರೆಹೋದರು. ಇದರಿಂದ ತಮ್ಮ ಒಲಿಂಪಿಕ್ಸ್ ಅಭ್ಯಾಸ ವ್ಯವಸ್ಥಿತವಾಗಿ ಸಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ. ಇದು ಸ್ವಿಸ್ ಮೂಲದ “ಎಚ್‌ಎಸ್ 10′ ಯಂತ್ರವಾಗಿದ್ದು, ಎಲ್ಲ ಮಾದರಿಯ ಏರ್ ಗನ್‌ಗಳನ್ನೂ 10ರಿಂದ 20 ಮೀ. ದೂರದ ತನಕ ಗುರಿ ಇಡಲು ಸೂಕ್ತವಾಗಿದೆ. ಎಲ್‌ಇಡಿ ಪ್ರಕಾಶದಿಂದಾಗಿ ಇದರ ಫಲಿತಾಂಶ ಕೂಡ ಅಷ್ಟೇ ನಿಖರವಾಗಿದೆ.
ತಂದೆ ನಿರ್ಮಿಸಿದ ರೇಂಜ್
“ನಾನು ಇತ್ತೀಚೆಗಷ್ಟೇ ಈ ಸಾಧನವನ್ನು ಅಳವಡಿಸಿಕೊಂಡೆ. ಇದರಿಂದ ನನ್ನ ಒಲಿಂಪಿಕ್ಸ್ ತಯಾರಿಗೆ ಬಹಳ ಪ್ರಯೋಜನ ವಾಗಲಿದೆ’ ಎಂದು ಹರ್ಯಾಣದ ಗೊರಿಯಾದಲ್ಲಿರುವ ತಮ್ಮ ನಿವಾಸದಿಂದ ಮನು ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದರು. ಮನು ಅವರ ತಂದೆ ಈ ಸುವ್ಯವಸ್ಥಿತ ಶೂಟಿಂಗ್ ರೇಂಜ್ ಒಂದನ್ನು ನಿರ್ಮಿಸಿದ್ದಾರೆ. ನೂತನ ಸಾಧನೆಯನ್ನು ತರಿಸಲು ಹಾಗೂ ಇದನ್ನು ಅಳವಡಿಸಲು ಸಹಕಾರ ನೀಡಿದ ಸಾಯ್ ಮತ್ತು “ಒಲಿಂಪಿಕ್ ಗೋಲ್ಡ್ ಕ್ವೆಸ್ಟ್’ಗೆ ಮನು ಭಾಕರ್ ಕೃತಜ್ಞತೆ ಸಲ್ಲಿಸಿದ್ದಾರೆ.
“ಹಳೆ ಮಾದರಿಯ ಯಂತ್ರದಿಂದ ನನಗೆ ಬಹಳ ಸಮಸ್ಯೆ ಆಗುತ್ತಿತ್ತು. ಈಗ ಸಮಸ್ಯೆ ಪರಿಹಾರಗೊಂಡಿದೆ. ಮುಂದಿನ 3-4 ತಿಂಗಳ ಕಾಲ ಯಾವುದೇ ಶೂಟಿಂಗ್ ಸ್ಪರ್ಧೆ ಇಲ್ಲದ ಕಾರಣ ಹಾಗೂ ಹೊರಾಂಗಣ ಅಭ್ಯಾಸಕ್ಕೆ ಅವಕಾಶ ಇಲ್ಲದಿರುವುದರಿಂದ ನನಗೆ ಈ ಸಾಧನದಿಂದ ಬಹಳಷ್ಟು ಪ್ರಯೋಜನವಾಗಲಿದೆ’ ಎಂದು ಮನು ಭಾಕರ್ ಹೇಳಿದರು.ಐಎಸ್‌ಎಸ್‌ಎಫ್ ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್, ಯುವ ಒಲಿಂಪಿಕ್ಸ್ ನಲ್ಲಿ ಭಾರೀ ಯಶಸ್ಸು ಸಾಧಿಸಿರುವ 18ರ ಹರೆಯದ ಮನು ಭಾಕರ್ ಟೋಕಿಯೊ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಭಾರತದ ಪ್ರಮುಖ ಪದಕ ಭರವಸೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.