ಬ್ರಹ್ಮಾವರ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ
Team Udayavani, Apr 19, 2022, 7:43 AM IST
ಸಾಂದರ್ಭಿಕ ಚಿತ್ರ.
ಬ್ರಹ್ಮಾವರ: ಇಲ್ಲಿನ ಸಭಾಭವನದಲ್ಲಿ ರವಿವಾರ ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆಯೊಂದು ಮುರಿದು ಬಿದ್ದಿದೆ.
ಮೂಲತಃ ಬ್ರಹ್ಮಾವರದವರಾಗಿದ್ದು, ವರ ವಿದೇಶದಲ್ಲಿ, ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸುಮಾರು 4 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು.
ಇಬ್ಬರೂ ದೂರವಾಣಿ ಸಂಪರ್ಕದಲ್ಲಿದ್ದರು. ಮದುವೆ ಕ್ರಮಗಳೆಲ್ಲ ಮುಂದುವರಿದು ತಾಳಿ ಕಟ್ಟುವ ಸಂದರ್ಭ ಬಂದಾಗ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್ ಇಷ್ಟಪಟ್ಟಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಸುಮಾರು 1,000 ಮಂದಿಗೆ ಊಟೋಪಾಚಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ
ಚಲನಚಿತ್ರಗಳಲ್ಲಿ ಬರುತ್ತಿದ್ದ ಘಟನೆ ನೈಜವಾಗಿ ನೋಡಿದ ಆಮಂತ್ರಿತರು ಆಶ್ಚರ್ಯಪಟ್ಟರು. ಕೊನೆಗೆ ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.