ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ : ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ
Team Udayavani, Jun 21, 2021, 7:10 AM IST
ಬೆಂಗಳೂರು : ಇನ್ನು ಮುಂದೆ ವಿವಾಹ ನೋಂದಣಿ, ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಹಾಗೂ ಜನನ ಮತ್ತು ಮರಣ ದೃಢೀಕರಣ ಪತ್ರ ವಿತರಣೆ ಗ್ರಾ.ಪಂ. ಮಟ್ಟದಲ್ಲೇ ನಡೆಯಲಿದೆ.
ಈ ಸಂಬಂಧ ಪ್ರಸ್ತಾವನೆ ಗ್ರಾಮೀ ಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಜಾರಿಗೊಳ್ಳುವ ನಿರೀಕ್ಷೆ ಇದೆ.
ಇತ್ತೀಚೆಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಹಲವು ಇಲಾಖೆಗಳು ಇದರ ವ್ಯಾಪ್ತಿಗೆ ಬರುವುದರಿಂದ ಸಂಬಂಧಪಟ್ಟ ಇಲಾಖೆಗಳ ಸಮ್ಮತಿ ಪಡೆಯಬೇಕು ಎನ್ನಲಾಗಿದೆ.
ಪ್ರಸ್ತುತ ವಿವಾಹ ನೋಂದಣಿ ಪ್ರಕ್ರಿಯೆ ತಾಲೂಕು ಮಟ್ಟದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದೆ. ನೋಂದಣಿ ಮಾಡಿಸಿಕೊಳ್ಳದವರೂ ಇದ್ದಾರೆ. ಗ್ರಾ.ಪಂ. ಮಟ್ಟದಲ್ಲೇ ನೋಂದಣಿಗೆ ಅವಕಾಶ ಇದ್ದರೆ ಅನುಕೂಲ. ಹೀಗಾಗಿ ಪಿಡಿಒಗಳನ್ನು ನೋಂದಣಿ ಪ್ರಾಧಿಕಾರಿಗಳನ್ನಾಗಿ ಘೋಷಿಸಲು ಪ್ರಸ್ತಾವಿಸಲಾಗಿದೆ.
ಗ್ರಾ.ಪಂ.ಗಳಲ್ಲಿ ಪಿಂಚಣಿಗೆ ಆಯ್ಕೆ
ಪ್ರಸ್ತುತ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಒದಗಿಸಲಾಗುತ್ತಿದೆ. ಆದರೆ ಪಿಂಚಣಿ ಯೋಜನೆಗಳಿಗೆ ಗ್ರಾ.ಪಂ. ಗ್ರಾಮ ಸಭೆಗಳಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ.
ಅರ್ಹ ಫಲಾನುಭವಿಗಳು ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ, ಅವುಗಳನ್ನು ಯೋಜನೆಗಳ ಮಾನದಂಡಗಳ ಅನುಸಾರ ಪರಿಶೀಲಿಸಿ ಆನ್‌ಲೈನ್ ಮೂಲಕ ತಹಶೀಲ್ದಾರರಿಗೆ ಶಿಫಾರಸು ಮಾಡಲು ಅವಕಾಶ ಕೊಡಬೇಕು. ತಹಶೀಲ್ದಾರ್ ಅನುಮೋದನೆ ಬಳಿಕ ಗ್ರಾ.ಪಂ.ಗಳ ಮೂಲಕ ಮಂಜೂರಾತಿ ನೀಡಬಹುದು. ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಗ್ರಾಮ ಸಭೆಗಳಲ್ಲಿ ಮಂಡಿಸಬಹುದು. ಹಾಗಾಗಿ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಗ್ರಾ.ಪಂ.ಗಳನ್ನು ಹೆಚ್ಚುವರಿ ಕೇಂದ್ರವನ್ನಾಗಿಸಲು ಪ್ರಸ್ತಾವಿಸಲಾಗಿದೆ.
ಜನನ, ಮರಣ ಪ್ರಮಾಣಪತ್ರ
ಪ್ರಸ್ತುತ ಜನನ, ಮರಣ ಮತ್ತು ವಾಸದ ದೃಢೀಕರಣ ಪತ್ರಗಳನ್ನು ಕಂದಾಯ ಇಲಾಖೆ ಮೂಲಕ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಲವಾರು ಸೌಕರ್ಯಗಳನ್ನು ಪಡೆಯಲು ಈ ದೃಢೀಕರಣ ಪತ್ರಗಳು ಅಗತ್ಯ. ಈಗಾಗಲೇ ನಗರ ಪ್ರದೇಶಗಳಲ್ಲಿ ಈ ದೃಢೀಕರಣ ಪತ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಹೆಚ್ಚುವರಿಯಾಗಿ ಗ್ರಾ.ಪಂ.ಗಳಿಂದಲೂ ದೃಢೀಕರಣ ಪತ್ರಗಳನ್ನು ನೀಡುವ ಪದ್ಧತಿ ಜಾರಿಗೊಳಿಸುವ ಪ್ರಸ್ತಾವನೆಯೂ ಇಲಾಖೆಯ ಮುಂದಿದೆ.
ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಗ್ರಾ.ಪಂ.ಗಳನ್ನು ಹೆಚ್ಚುವರಿ ಕೇಂದ್ರವನ್ನಾಗಿ ಮಾಡುವ, ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡುವುದರ ಸಹಿತ ವಿವಿಧ ಪ್ರಸ್ತಾವನೆ ಪ್ರಕ್ರಿಯೆಯಲ್ಲಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್ , ಪಂ.ರಾಜ್ ಆಯುಕ್ತರು
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.