ವಿಶ್ವವನ್ನು ಮೂರನೇ ಮಹಾಯುದ್ಧದ ಮೆಟ್ಟಿಲ ಬಳಿ ನಿಲ್ಲಿಸಿದ ಮಾರ್ಷಲ್ ಹಾಗೂ ವಿದೂಷಕ
Team Udayavani, Feb 25, 2022, 5:55 PM IST
ಜಲೆನಸ್ಕಿ, ವ್ಲಾಡಿಮಿರ್ ಪುಟಿನ್
ರಷ್ಯಾ ಹಾಗೂ ಉಕ್ರೇನ್ ಮಧ್ಯೆ ನಡೆಯುತ್ತಿರುವ ಜಟಾಪಟಿಯ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ರಸವತ್ತಾದ ಕಥೆಗಳು ಸೃಷ್ಟಿಯಾಗುತ್ತಿದ್ದು, ಒಬ್ಬ ಮಾರ್ಷಲ್ ಆರ್ಟ್ ಪ್ರವೀಣ, ಇನ್ನೊಬ್ಬ ರಂಗಭೂಮಿ ವಿದೂಷಕ ಸೇರಿ ವಿಶ್ವವನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಆರಂಭದಲ್ಲಿ ಮಾರ್ಷಲ್ ಆರ್ಟ್ ಎಕ್ಸಪರ್ಟ್ ಆದರೂ ರಾಜಕೀಯದಲ್ಲಿ ದೃಢವಾದ ಹೆಜ್ಜೆ ಇಡುತ್ತಾ ಬೆಳೆದರೆ ಉಕ್ರೇನ್ ಪ್ರಧಾನಿ ಜಲೆನಸ್ಕಿ ಮೂಲತಃ ರಂಗಭೂಮಿಯ ಹಾಸ್ಯ ಕಲಾವಿದರು. ರಂಗದ ಮೇಲೆ ಪ್ರಧಾನಿ ಪಾತ್ರ ನಿರ್ವಹಿಸಿದ ಈ ವ್ಯಕ್ತಿ ಮುಂದೆ ಉಕ್ರೇನ್ ದೇಶದ ಪ್ರಧಾನಿಯಾಗಿಯೇ ಬೆಳೆದು ನಿಂತರು.
ಯುದ್ಧದ ಹಿನ್ನೆಲೆಯಲ್ಲಿ ಈ ಎರಡೂ ರಾಜಕೀಯ ನಾಯಕರ ವ್ಯಕ್ತಿತ್ವ ಹಾಗೂ ಬೆಳಣಿಗೆಯ ಹಿನ್ನೋಟವನ್ನು ಈಗ ಗಮನಿಸೋಣ….
ಪುಟಿನ್ 1952 ರಲ್ಲಿ ರಷ್ಯಾದಲ್ಲಿ ಜನಿಸಿದರೆ, ಜಲೆನಸ್ಕಿ 1978 ರಲ್ಲ ಉಕ್ರೇನ್ ನಲ್ಲಿ ಹುಟ್ಟಿದರು. ಮಾರ್ಷಲ್ ಆರ್ಟ್ ಪ್ರವೀಣ ಪುಟಿನ್ ಕುಟುಂಬ ಜೋಸೆಫ್ ಸ್ಟ್ಯಾಲಿನ್ ಪರಿವಾರದಲ್ಲಿ ಕೆಲಸ ಮಾಡುತ್ತಿದ್ದರೆ, ಜಲೆನಸ್ಕಿ ಜ್ಯೂ ಸಮುದಾಯದಲ್ಲಿ ಜನಿಸಿದ್ದರು.
– ಪುಟಿನ್ ಹಾಗೂ ಜೆಲೆನಸ್ಕಿ ಇಬ್ಬರೂ ಕಾನೂನು ಪದವಿಧರರು. ಪುಟಿನ್ ಯುಎಸ್ಎಸ್ ಆರ್ ನ ಗುಪ್ತಚರ ಸಂಸ್ಥೆ ಕೆಜಿಬಿಯಲ್ಲಿ ಗುಪ್ತಚರನಾಗಿ ವೃತ್ತಿಗೆ ಸೇರಿದರೆ ಜಲೆನಸ್ಕಿ ರಂಗಭೂಮಿಯತ್ತ ಹೊರಳಿದರು.
– 1990ರ ವೇಳೆಗೆ ರಷ್ಯಾದ್ಯಂತ ಜಲೆನಸ್ಕಿ ತನ್ನ ರಂಗಪ್ರಯೋಗದಿಂದ ಹೆಸರುವಾಸಿಯಾದ. ತರಲೆ, ವ್ಯಂಗ್ಯ, ಹಾಸ್ಯದಿಂದ ಕೂಡಿರುತ್ತಿದ್ದ ಅವರ ಪ್ರಯೋಗಗಳು ಹೆಸರುವಾಸಿಯಾದವು.
ಆದರೆ 1996 ರ ಹೊತ್ತಿಗೆ ಪುಟಿನ್ ರಾಜಕೀಯವಾಗಿ ರಷ್ಯಾದಲ್ಲಿ ದೃಢ ಹೆಜ್ಜೆ ಇಡಲಾರಂಭಿಸಿದರು. ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಮೇಯರ್ ಅಗಿ ಸೇವೆ ಸಲ್ಲಿಸಿ ಮಾಸ್ಕೋಗೆ ತೆರಳಿ ಅಂದಿನ ಪ್ರಧಾನಿ ಬೋರಿಸ್ ಯೆಲ್ಸಿನ್ ಬಣ ಸೇರಿ ರಷ್ಯಾದ ಪ್ರಧಾನಿ ಹಂತಕ್ಕೆ ಬೆಳೆದರು.ಆದರೆ ಈ ಅವಧಿಯಲ್ಲಿ ಜಲನೆಸ್ಕಿ ತನ್ನ ರಂಗ ಪ್ರಯೋಗ ಗಳಲ್ಲಿ ಸುಧಾರಣೆ ಮಾಡಿಕೊಳ್ಳುತ್ತಾ ಟಿವಿ ವಾಹಿನಿಗಳ ಜನಪ್ರಿಯ ಕಾಮಿಡಿಯನ್ ಆಗಿ ರೂಪುಗೊಂಡರು.
– 2015ರ ಸುಮಾರಿಗೆ ಉಕ್ರೇನ್ ನಲ್ಲಿ ರಾಜಕೀಯ ಸ್ವರೂಪ ಸಂಪೂರ್ಣವಾಗಿ ಬದಲಾಯಿತು. ಅದು ಈ ಇಬ್ಬರು ನಾಯಕರು ಈಗ ಪರಸ್ಪರ ಮುಖಾಮುಖಿಯಾಗುವ ಸ್ಥಿತಿಗೆ ತಂದು ನಿಲ್ಲಿಸಿದೆ. ೨೦೧೪ರಲ್ಲಿ ರಷ್ಯಾ ಪರ ನಿಲುವು ಹೊಂದಿದ್ದ ಉಕ್ರೇನ್ ಪ್ರಧಾನಿ ವಿಕ್ಟೋರ್ ಪದಚ್ಯುತಗೊಂಡರು . ರಷ್ಯಾ ವಿರೋಧಿ ನಿಲುವು ಉಕ್ರೇನ್ ನಲ್ಲಿ ತೀವ್ರಗೊಂಡಿತು. ಇದೇ ವರ್ಷ ಪುಟಿನ್ ಕ್ರೀಮಿಯಾ ಗೆದ್ದುಕೊಂಡರು.
– ರಷ್ಯಾದ ಈ ದಬ್ಬಾಳಿಕೆ ಖಂಡಿಸಿ ೨೦೧೫ರಲ್ಲಿ ಜಲೆನಸ್ಕಿ ಉಕ್ರೇನ್ ನ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮ ಸರ್ವಂಟ್ ಆಫ್ ದಿ ಪೀಪಲ್ ಆರಂಭಿಸಿದರು. ಈ ನಾಟಕದಲ್ಲಿ ಆಕಸ್ಮಿಕವಾಗಿ ಉಕ್ರೇನ್ ಪ್ರಧಾನಿಯಾಗುವ ಶಿಕ್ಷಕನ ಪಾತ್ರವನ್ನು ಜಲೆನಸ್ಕಿ ನಿರ್ವಹಿಸಿದ. ಇದು ಉಕ್ರೇನ್ ನಲ್ಲಿ ಭಾರಿ ಜನಪ್ರಿಯವಾಯಿತು. ಈ ನಾಟಕದಲ್ಲಿ ರಷ್ಯಾ ದುರಾಕ್ರಮಣದಿಂದ ಉಕ್ರೇನ್ ಪಾರು ಮಾಡುವ ಕತೆ ಅಲ್ಲಿನ ಜನತೆಯ ಮೆಚ್ಚುಗೆ ಪಡೆದಿತ್ತು.
– 2019ರಲ್ಲಿ ಜಲೆನಸ್ಕಿ ಉಕ್ರೇನ್ ನಲ್ಲಿ ಸರ್ವೆಂಟ್ ಆಫ್ ದಿ ಪೀಪಲ್ ಎಂಬ ಹೆಸರಿನ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಉಕ್ರೇನ್ ಜನತೆ ಭಾರಿ ಬಹುಮತದೊಂದಿಗೆ ಈ ಪಕ್ಷವನ್ನು ಗೆಲ್ಲಿಸಿದರು. ಉಕ್ರೇನಿಯನ್ ಅಸ್ಮಿತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು ರಾಜಧಾನಿ ಕೀವ್ ನ ಉಚ್ಛಾರಣಾ ಶೈಲಿಯನ್ನೂ ಬದಲಿಸಿದರು.
– ಇದಕ್ಕೆ ಪ್ರತಿಯಾಗಿ ಉಕ್ರೇನ್ ನ ಪಶ್ಚಿಮ ಭಾಗದಲ್ಲಿ ತನ್ನ ನೆಲೆ ಬಲಪಡಿಸಿದ ಪುಟಿನ್ ಬಂಡುಕೋರರಿಗೆ ಪಾಸ್ ಪೋರ್ಟ್ ನೀಡಿ ಅವರ ಹೋರಾಟ ಮಾನ್ಯ ಮಾಡಿದರು .
– ಇದರಿಂದ ಕೆರಳಿದ ಜಲೆನಸ್ಕಿ ನ್ಯಾಟೋ ಪಡೆಯತ್ತ ವಾಲಿದರೆ ಪುಟಿನ್ ಒನ್ ಪೀಪಲ್ ಒನ್ ನೇಶನ್ ವಾದವನ್ನು ಈಗ ಉಕ್ರೇನ್ ಮೇಲೆ ಬಲವಾಗಿ ಯುದ್ಧ ಮುಖೇನ ಹೇರಲಾರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.