ನಂ.1 ಸ್ಥಾನಕ್ಕೆ ಮಾರುತಿ ಕಣ್ಣು; ಭಾರತದ ಇ-ಕಾರು ಉತ್ಪಾದನ ವಲಯದ ದಿಗ್ಗಜನಾಗುವ ಹಂಬಲ
ಮಾರುತಿ ಸುಜುಕಿಯ ನೂತನ ಸಿಇಒ ಹಿಸಾಶಿ ಟಕ್ಯುಶಿ ಆಶಯ
Team Udayavani, Apr 18, 2022, 11:40 AM IST
ಹೊಸದಿಲ್ಲಿ: ದೇಶದ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಏರುವುದೇ ಆದ್ಯತೆ ಎಂದು ಮಾರುತಿ ಸುಜುಕಿಯ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ಟಕ್ಯುಶಿ ಹೇಳಿದ್ದಾರೆ.
“ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದನ್ನು ಆಧರಿಸಿ 2025ರ ಒಳಗಾಗಿ ಮೊದಲ ವಿದ್ಯುತ್ ವಾಹನ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ವೈವಿಧ್ಯಮಯ ವಿದ್ಯುತ್ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
“ಭಾರತದ ವಿದ್ಯುತ್ ಚಾಲಿತ ಕಾರು ತಯಾರಿಕಾ ರಂಗದಲ್ಲಿ ಮಾರುತಿ ಸುಜುಕಿಯನ್ನು ಅಗ್ರಮಾನ್ಯ ಕಂಪೆನಿಯನ್ನಾಗಿ ರೂಪಿಸುವುದು ನಮ್ಮ ಮುಂದಿನ ಗುರಿ. ಸದ್ಯದ ಸ್ಪರ್ಧೆಯಲ್ಲಿ ಮಾರುತಿ ತುಸು ಹಿಂದಿದ್ದರೂ ಮುಂದೆ ನಮ್ಮನ್ನು ನಾವು ಮೊದಲಿಗರಾಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಫೋರ್ಡ್ ಘಟಕಗಳಲ್ಲಿ ಟಾಟಾ ಕಾರು ತಯಾರು
ಗುಜರಾತ್‌ನ ಸಾನಂದ್‌ನಲ್ಲಿರುವ ತಾನು ಈಗಾಗಲೇ ಕೊಂಡು ಕೊಂಡಿರುವ ಫೋರ್ಡ್ ಕಂಪೆನಿಯ ಕಾರು ತಯಾರಿಕ ಘಟಕದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಟಾಟಾ ಕಂಪೆನಿ ತಿಳಿಸಿದೆ. ಈ ಘಟಕವನ್ನು ವಿದ್ಯುತ್ ಚಾಲಿತ ಕಾರು ತಯಾರಿಕ ಘಟಕವನ್ನಾಗಿ ಪರಿವರ್ತಿಸಿ ವರ್ಷಕ್ಕೆ 2 ಸಾವಿರ ಇ-ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಟಾಟಾ ಕಂಪೆನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.