ನುಗ್ಗೆ ಕಾಯಿ ಅಷ್ಟೇ ಅಲ್ಲ… ಸೊಪ್ಪಿನಲ್ಲಿಯೂ ಹೇರಳವಾದ ಆರೋಗ್ಯಕರ ಅಂಶಗಳಿವೆ…
ಕುರುಡುತನಕ್ಕೆ ಕಾರಣವಾಗುವ ಗ್ಲೂಕೋಮ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ತಡೆಯುತ್ತದೆ.
Team Udayavani, Sep 6, 2022, 12:27 PM IST
ನುಗ್ಗೆಕಾಯಿ ಬಹುತೇಕ ಜನರು ಇಷ್ಟಪಡುವ ತರಕಾರಿಗಳಲ್ಲಿ ಒಂದು. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ನುಗ್ಗೆ ಕಾಯಿ ಅಷ್ಟೇ ಅಲ್ಲ ಅದರ ಸೊಪ್ಪಿನಲ್ಲಿಯೂ ಹೇರಳವಾದ ಆರೋಗ್ಯಕರ ಅಂಶಗಳಿವೆ. ಇದರಿಂದ ಅನೇಕ ಬಾಯಿ ಚಪ್ಪರಿಸಿ ತಿನ್ನುವಂತ ರುಚಿಕರ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ನುಗ್ಗೆ ಸೊಪ್ಪು ಪ್ರಾಚೀನ ಕಾಲದ ಆಯರ್ವೇದ ದಿಂದ ಹಿಡಿದು ಇಂದಿನ ಸಂಶೋಧನೆಯವರೆಗೂ ಪ್ರಮುಖವಾಗಿದೆ. ಇದಕ್ಕೆ ಕಾರಣ ಇದ ರಲ್ಲಿರುವ ವಿವಿಧ ಔಷಧ ಗುಣ. ಇದರ ಉಪಯೋಗ ದಿಂದ ಮತ್ತು ಸೇವನೆ ಯಿಂದ ಅನೇಕ ಕಾಯಿಲೆ ಗಳನ್ನು ವಾಸಿ ಮಾಡಲು ಸಾಧ್ಯವಾಗುತ್ತದೆ.
ದೃಷ್ಟಿ ದೋಷ ಪರಿಹಾರ
ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ವೃದ್ದಾಪ್ಯ ಸಮಯದಲ್ಲಿ ದೃಷ್ಟಿ ದೋಷಗಳು ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದಿನ ಕಲುಷಿತ ಆಹಾರ ಪದ್ದತಿಯಿಂದ ಅಕಾಲಿಕ ದೃಷ್ಟಿದೋಷದ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ಪೋಷಕಾಂಶ ಮತ್ತು ಇತರೆ ಕಾರಣಗಳು ಇರಬಹುದು. ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅಂಶ ಹೆಚ್ಚು ಇರುವ ಕಾರಣ ಇದು ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ. ನುಗ್ಗೆ ಸೊಪ್ಪಿನಲ್ಲಿ ಲೂಟಿನ್ ಅಂಶವೂ ಹೆಚ್ಚಾಗಿದೆ. ಇದು ಕಣ್ಣುಗಳಿಗೆ ಒತ್ತಡ ಮತ್ತು ಕುರುಡುತನಕ್ಕೆ ಕಾರಣವಾಗುವ ಗ್ಲೂಕೋಮ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ತಡೆಯುತ್ತದೆ.
ಸಕ್ಕರೆ ಕಾಯಿಲೆ ದೂರ
ಇತ್ತೀಚಿನ ದಿನಗಳಲ್ಲಿ ಒತ್ತಡ, ದೈಹಿಕ ಶ್ರಮದ ಕೊರತೆಯಿಂದ ಸಕ್ಕರೆ ಕಾಯಿಲೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಸಂಶೋಧನೆಯೊಂದರ ಪ್ರಕಾರ ನುಗ್ಗೆ ಸೊಪ್ಪಿನಲ್ಲಿ ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ಅಂಶಗಳು ಹೆಚ್ಚಿರುವ ಕಾರಣ ಇದು ಮಧುಮೇಹ ಕಾಯಿಲೆ ಇರುವವರು ಹೆಚ್ಚಾಗಿ ಸೇವಿಸುವದರಿಂದ ಕಾಯಿಲೆಯಿಂದ ಬಚಾವಾಗಲು ಸಹಕಾರಿ. ಅಲ್ಲದೇ ಇದರಲ್ಲಿ “ಡಿ’ ವಿಟಮಿನ್ ಹೆಚ್ಚಾಗಿದ್ದು ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚು ಮಾಡುತ್ತದೆ.
ಅಧಿಕ ರಕ್ತದೊತ್ತಡ ನಿವಾರಣೆ
ಇತ್ತಿಚಿನ ದಿನಗಳಲ್ಲಿ ಮನುಕುಲವನ್ನು ಹೆಚ್ಚಾಗಿ ಕಾಡುತ್ತಿರುವ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದಾಗಿದೆ. ಇದಕ್ಕೆ ನುಗ್ಗೆ ಸೊಪ್ಪು ಎಲ್ಲ ರೀಯಿಂದಲೂ ಉಪಯುಕ್ತವಾಗಿದೆ. ಏಕೆಂದರೆ ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಇದು ಅಧೀಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.