ನೀಟ್ ಪಾಸ್ ಮಾಡಿದ ತೌಫೀಲ್; ಕಾಶ್ಮೀರದ ಬುಡಕಟ್ಟು ಸಮುದಾಯದ ಯುವಕನ ಸಾಧನೆ
ಭೂಸೇನೆಯ ತರಬೇತಿ ಕಾರ್ಯಕ್ರಮದನ್ವಯ ತರಬೇತಿ; ಮೊಬೈಲಲ್ಲಿಯೇ ವಿಡಿಯೋ ನೋಡಿ ಪರೀಕ್ಷೆಗೆ ಸಿದ್ಧತೆ
Team Udayavani, Feb 23, 2022, 8:00 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತೌಫೀಲ್ ಅಹ್ಮದ್ ಎಂಬ ಯುವಕ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಈ ಸಾಧನೆ ಮಾಡಿದ ಕೇಂದ್ರಾಡಳಿತ ಪ್ರದೇಶದ ಬುಡಕಟ್ಟು ಜನಾಂಗದ ಮೊದಲ ಯುವಕ ಎಂಬ ಸಾಧನೆಗೆ ಪಾತ್ರನಾಗಿದ್ದಾನೆ.
ಮೊಬೈಲ್‌ನಲ್ಲಿ ಯು ಟ್ಯೂಬ್ ಮೂಲಕ ನೀಟ್‌ಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ನೋಡಿ ಆತ ಪರೀಕ್ಷೆ ಸಿದ್ಧತೆ ನಡೆಸಿದ್ದ. ಆತ ಶ್ರೀನಗರ ಜಿಲ್ಲೆಯ ಮುಲಾ°ರ್ ಹರ್ವಾನ್ ಎಂಬ ಗ್ರಾಮಕ್ಕೆ ಸೇರಿದವನಾಗಿದ್ದಾನೆ.
ಮನೆಯಲ್ಲಿ ಕೂಡ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಕೂಡ ಇರಲಿಲ್ಲ. ಇತರ ವಿದ್ಯಾರ್ಥಿಗಳಂತೆ ಆತನಿಗೆ ನೀಟ್‌ಗೆ ಕೋಚಿಂಗ್ ಪಡೆಯಲೂ ಆರ್ಥಿಕವಾಗಿ ಸಾಧ್ಯವಿರಲಿಲ್ಲ. ಇದರ ಜತೆಗೆ ಸೀಮಿತ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿದ್ದುದರಿಂದ ಆತ ಅಧ್ಯಯನ ನಡೆಸಲೂ ಕಷ್ಟಪಟ್ಟಿದ್ದ. ಆತನ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ಸಾರಿಗೆ ಸಂಪರ್ಕವೂ ಇಲ್ಲ. ಎರಡು ಕಿಮೀ ನಡೆದುಕೊಂಡು ಆತ ಸರ್ಕಾರಿ ಶಾಲೆಗೆ ಹೋಗಿ ಅಧ್ಯಯನ ಮಾಡಿದ ಹೆಗ್ಗಳಿಕೆ ಆತನದ್ದು.
ಇದನ್ನೂ ಓದಿ:ಸುನೀಲ್ ಶೆಟ್ಟಿ ನಿರ್ಮಾಣದ “ಇನ್‌ವಿಸಿಬಲ್ ಮ್ಯಾನ್’ ನಲ್ಲಿ ನಟಿಸಲಿದ್ದಾರೆ ಈಶಾ ಡಿಯೋಲ್
ಭೂಸೇನೆಯ ತರಬೇತಿ:
ಭೂಸೇನೆ ಎಚ್‌ಪಿಎಸಿಎಲ್ ಜತೆಗೂಡಿ “ಕಾಶ್ಮೀರ ಸೂಪರ್ 50 ಇನಿಶಿಯೇಟಿವ್’ನ ಅನ್ವಯ ಉತ್ತರ ಕಾಶ್ಮೀರ ಭಾಗದಲ್ಲಿ ಮೆಡಿಕಲ್ ಕೋರ್ಸ್‌ನಲ್ಲಿ ಆಸಕ್ತಿ ಇರುವ 50 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ತೌಫೀಲ್‌ಗೆ ತರಬೇತಿ ನೀಡಲಾಗಿತ್ತು. ಶೈಕ್ಷಣವಾಗಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ಏರ್ಪಡಿಸಿ ಈ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. 2018ರಲ್ಲಿ 30 ಮಂದಿ ವಿದ್ಯಾರ್ಥಿಗಳ ಮೂಲಕ ಈ ಪ್ರಯತ್ನ ಶುರು ಮಾಡಲಾಗಿತ್ತು. ಅದರಲ್ಲಿ 25 ಮಂದಿ ನೀಟ್‌ನಲ್ಲಿ ತೇರ್ಗಡೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.