Metro Train: ದೇಶದ ಮೊದಲ “ವಂದೇ ಭಾರತ್ ಮೆಟ್ರೋ’ಗೆ ಸೆ.16ರಂದು (ನಾಳೆ) ಪ್ರಧಾನಿ ಚಾಲನೆ
ಗುಜರಾತ್‌ನ ಅಹ್ಮದಾಬಾದ್-ಭುಜ್‌ಗೆ ಸಂಚಾರ, ರೈಲಿನ ವಿಶೇಷತೆಗಳೇನು ಗೊತ್ತಾ?
Team Udayavani, Sep 15, 2024, 7:43 PM IST
ಅಹ್ಮದಾಬಾದ್: ಎರಡು ನಗರಗಳ ನಡುವೆ ಸಂಪರ್ಕ ಸಾಧಿಸುವ ದೇಶದ “ಮೊದಲ ವಂದೇ ಭಾರತ್ ಮೆಟ್ರೋ’ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಸೆ.16) ಚಾಲನೆ ನೀಡಲಿದ್ದಾರೆ. ಅದು ಗುಜರಾತ್‌ನ ಭುಜ್‌ನಿಂದ ಅಹ್ಮದಾಬಾದ್‌ಗೆ ಸಂಚರಿಸಲಿದೆ.
ಟಿಕೆಟ್‌ಗಳನ್ನು ಕಾಯ್ದಿರಿಸದೆ ಜನರಿಗೆ ಈ ರೈಲಿನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅದು ವಾರದ 6 ದಿನಗಳಲ್ಲಿ “ವಂದೇ ಭಾರತ್ ಮೆಟ್ರೋ’ ಸಂಚರಿಸಲಿದೆ ಎಂದು ಪಶ್ಚಿಮ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
5 ಗಂಟೆ 45 ನಿಮಿಷಗಳ ಅವಧಿಯಲ್ಲಿ 360 ಕಿ.ಮೀ.ದೂರವನ್ನು ಅದು ಕ್ರಮಿಸಲಿದೆ ಎಂದು ಹೇಳಿದ್ದಾರೆ. ಈ ರೈಲು ತನ್ನ ಮಾರ್ಗದಲ್ಲಿ 9 ನಿಲುಗಡೆಗಳನ್ನು ಹೊಂದಿದೆ. ಸದ್ಯ 12 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಲು ಚಿಂತಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ 16 ಬೋಗಿಗಳ ರೈಲಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿಯೇ “ವಂದೇ ಭಾರತ್ ಮೆಟ್ರೋ’ವನ್ನು ನಿರ್ಮಿಸಲಾಗಿದೆ ಎಂದು ಪ್ರದೀಪ್ ಶರ್ಮಾ ತಿಳಿಸಿದ್ದಾರೆ. ಅದರಲ್ಲಿ ಸ್ವಯಂ ಚಾಲಿತ ಬಾಗಿಲುಗಳು ಇರಲಿವೆ. ಜತೆಗೆ ಕೋಚ್‌ನಲ್ಲಿ 4 ಸ್ವಯಂ ಚಾಲಿತ ಬಾಗಿಲುಗಳನ್ನು ಇರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಭಾರತೀಯ ರೈಲ್ವೇ ಕಲ್ಪಿಸಿಕೊಡಲಿದೆ.
ಮೆಟ್ರೋ ವಿಶೇಷತೆಗಳು
* ಎಲ್ಲ ಬೋಗಿಗಳು ಹವಾನಿಯಂತ್ರಕ ವ್ಯವಸ್ಥೆ ಹೊಂದಿರುತ್ತವೆ.
* ಸ್ವಯಂಚಾಲಿತ ಬಾಗಿಲುಗಳು, ಪ್ರತಿ ವಂದೇ ಭಾರತ್ ಬೋಗಿಯಲ್ಲಿ ನಾಲ್ಕು ಸ್ವಯಂಚಾಲಿತ ಬಾಗಿಲುಗಳು ಹೊಂದಿವೆ.
* ಪ್ರಯಾಣಿಕರ ಲಗೇಜ್ ಇಡಲು ವ್ಯವಸ್ಥೆ
* ಮೊಬೈಲ್ ಚಾರ್ಜಿಂಗ್ ಸೌಲಭ್ಯ
* “ಕವಚ್’ರೈಲು ಅಪಘಾತ ತಡೆ ಸೌಲಭ್ಯ
* ವಂದೇ ಭಾರತ್ ಮೆಟ್ರೋದ 16 ಬೋಗಿಗಳಲ್ಲಿ 1,150 ಪ್ರಯಾಣಿಕರು ಕುಳಿತುಕೊಂಡು ಪ್ರಯಾಣಿಸಬಹುದು, ಹೆಚ್ಚುವರಿಯಾಗಿ 2,058 ಪ್ರಯಾಣಿಕರು ನಿಂತು ಪ್ರಯಾಣಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.