ಮೆಕ್ಷಿಕೊ: ಜೀವ ರಕ್ಷಿಸುವವರಿಗೇ ಜೀವರಕ್ಷಕ ಕಿಟ್ ಇಲ್ಲ
Team Udayavani, May 3, 2020, 1:10 PM IST
ಮೆಕ್ಸಿಕೊ : ಸದ್ಯ ಎದುರಾಗಿರುವ ಪರಿಸ್ಥಿತಿಯಲ್ಲಿ ವಿಶ್ವದೆಲ್ಲೆಡೆ ವೈದ್ಯರು, ಆಸ್ಪತ್ರೆ ಸಿಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾರೆ. ತಮ್ಮ ಕುಟುಂಬದವರಿಂದ ದೂರಾಗಿ ಚಿಕಿತ್ಸಾಲಯಗಳಲ್ಲೇ ವಾಸ್ತವ್ಯ ಹೂಡಿ ಸೋಂಕಿತರ, ಶಂಕಿತರ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಆರೋಗ್ಯಕ್ಕೆ ಸರಕಾರ ಹೆಚ್ಚಿನ ಗಮನವಹಿಸಬೇಕು.
ಆದರೆ ಮೆಕ್ಸಿಕೊದಲ್ಲಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ದೇಶವನ್ನು ಮಹಾಮಾರಿಯಿಂದ ಸಂರಕ್ಷಿಸಲು ಹಗಲು ರಾತ್ರಿಯನ್ನದೇ ಹೋರಾಡುತ್ತಿರುವ ವೈದ್ಯಕೀಯ ಸಿಬಂದಿಗಳ ರಕ್ಷಣೆಯನ್ನೇ ಮರೆತಿದೆ. ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸುವುಲ್ಲಿ ಅಲಕ್ಷ್ಯ ತೋರಿಸುತ್ತಿದೆ. ಈ ಕುರಿತು ಅಲ್‌ಜಜೀರಾ ವರದಿ ಮಾಡಿದೆ. ಮೆಕ್ಸಿಕೊ ನಗರದಲ್ಲಿ ದಿನಕಳೆದಂತೆ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ನಿರ್ಣಾಯಕ ಹಂತವನ್ನು ತಲುಪಿದೆ ಎಂದು ವೈದ್ಯ ಅಧಿಕಾರಿಗಳು ಕಳೆದ ವಾರವಷ್ಟೇ ಘೋಷಿಸಿದ್ದರು. ಪರಿಸ್ಥಿತಿ ಭೀಕರ ಹಂತಕ್ಕೆ ಸಾಮೀಪ್ಯವಾಗುತ್ತಿರುವ ಈ ಘಟ್ಟದಲ್ಲೇ ನಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸುವುಲ್ಲಿ ಸರಕಾರ ಹಿಂದುಮುಂದು ನೋಡುತ್ತಿದ್ದು, ಮಾಸ್ಕ್ಗಳು ಧರಿಸದೇ ಶಂಕಿತರ ಶುಶ್ರೂಷೆ ಮಾಡಬೇಕಿದೆ. ಪರಿಣಾಮ ನಮಗೆ ಯಾವ ಸಂದರ್ಭದಲ್ಲೂ ಸೋಂಕು ತಗುಲಬಹುದಾಗಿದೆ. ಈ ಭೀತಿಯಲ್ಲೇ ಕೆಲಸ ನಿರ್ವಹಿಸಬೇಕಿದ್ದು,ಯಾವುದೇ ಸುರಕ್ಷಾ ಕವಚಗಳಿಲ್ಲದೇ ಹೇಗೆ ಚಿಕಿತ್ಸೆ ನೀಡುವುದು ಎಂದು ಸಿಬಂದಿಯೊಬ್ಬರು ಮಾಧ್ಯಮದ ಎದುರು ಕಷ್ಟವನ್ನು ತೋಡಿಕೊಂಡಿದ್ದಾರೆ.
ಆಪಾಯದ ಸುಳಿ
ದೇಶದ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿಕೊಂಡಿರುವ ಮೆಕ್ಸಿಕೊ ಸಿಟಿ ಮತ್ತು ಮಾಂಟೆರಿಗಳಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಎಲ್ಲರೂ ದೇಶಾದ್ಯಂತ ಸರಕಾರದ ಈ ನಿರ್ಲಕ್ಷ್ಯ ಕುರಿತು ಧ್ವನಿ ಎತ್ತಿದ್ದಾರೆ. ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ಚಿಕಿತ್ಸಾಲಯಗಳಲ್ಲಿ ಪಿಪಿಇ ಕಿಟ್‌ಗಳ ಕೊರತೆಯಾಗಿದ್ದು, ಪೂರೈಸುವಂತೆ ಸರಕಾರವನ್ನು ಕೋರಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ. ಸರಕಾರವು ತಿಳಿದೂ ತಿಳಿದೂ ವೈದ್ಯಕೀಯ ಸಿಬಂದಿಯನ್ನು ಅಪಾಯದ ಸುಳಿಗೆ ತಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಕ್ಸಿಕೊದಲ್ಲಿ ಇದುವರೆಗೆ 1,972 ಮಂದಿ ಮೃತಪಟ್ಟಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದೆ. ದೃಢಪಡಿಸಿದ ಪ್ರಕರಣಗಳಲ್ಲಿ ಕನಿಷ್ಠ ಶೇ.15ರಷ್ಟು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆಯ (ಐಎಂಎಸ್‌ಎಸ್) ಉದ್ಯೋಗಿಗಳಾಗಿದ್ದು, ಇದು ದೇಶದ ಅರ್ಧದಷ್ಟು ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.