ಸಿರಿಂಜ್ ಮೂಲಕ ದೇಹಕ್ಕೆ ಮೈಕ್ರೋಚಿಪ್ ಅಳವಡಿಕೆ
Team Udayavani, May 13, 2021, 7:30 AM IST
ವಾಷಿಂಗ್ಟನ್: ಎಲೆಕ್ಟ್ರಾನಿಕ್ಸ್ ಪರಿಕರಗಳನ್ನು ಅತೀ ಚಿಕ್ಕ ಪರಿಕರಗಳನ್ನಾಗಿ ರೂಪಿಸಿರುವುದೇನೂ ಹೊಸ ವಿಚಾರವೇನಲ್ಲ. ಈ ತಂತ್ರಜ್ಞಾನದಲ್ಲಿ ಮತ್ತಷ್ಟು ಪರಿಣತಿ ಸಾಧಿಸಿರುವ ಕೊಲಂಬಿಯಾ ವಿವಿ ತಜ್ಞರು, ಮನುಷ್ಯನ ದೇಹದಲ್ಲಿ ಅಳವಡಿಸಬಹುದಾದ ಅತೀ ಚಿಕ್ಕ ಮೈಕ್ರೋಚಿಪ್ ಅನ್ನು ರೂಪಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ, ಇಂಜೆಕ್ಷನ್ ಸೂಜಿಯ ಆಂತರಿಕ ವ್ಯಾಸ 0.071 ಇಂಚು ಇರುತ್ತದೆ. ಈ ಚಿಪ್ ಅದಕ್ಕಿಂತ ಚಿಕ್ಕ ಗಾತ್ರದ್ದಾಗಿದ್ದು (0.1 ಞಞ3), ಇಂಜೆಕ್ಷನ್ ಸೂಜಿಯ ಮೂಲಕವೇ ದೇಹದೊಳಗೆ ಈ ಚಿಪ್ ಅನ್ನು ಅಳವಡಿಸಬಹುದು. ಇದು ದೇಹದ ಉಷ್ಣಾಂಶದ ಗ್ರಹಿಕೆ ಇನ್ನಿತರ, ಊಹೆಗೂ ನಿಲುಕದ ಕೆಲಸಗಳನ್ನು ಮಾಡಬಲ್ಲದು.
ಉದಾಹರಣೆಗೆ, ಈ ಚಿಪ್, ಶರೀರದ ಆಂತರಿಕ ಅವಯವಗಳ ಒಳಗೆ ಆಗುವ ಬದ ಲಾವಣೆಗಳನ್ನು, ಸಣ್ಣ ಏರಿಳಿತವನ್ನೂ ಗ್ರಹಿಸಿ, ಮಾಹಿತಿ ರವಾನಿಸುತ್ತದೆ. ದೇಹದ ಅಂಗಾಂಶ ಗಳಲ್ಲಿನ ಆಮ್ಲಜನಕ ಪ್ರಮಾಣ, ನರಗಳಲ್ಲಿ ಉತ್ಪತ್ತಿಯಾಗುವ ನ್ಯೂರಾನ್ ಡಸ್ಟ್ ಹಾಗೂ ಇನ್ನಿತರ ಸಂವೇದನೆಗಳನ್ನು ನೀಡುತ್ತವೆ. ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಮೂಲಕ ಬರುವ ಈ ಮಾಹಿತಿಯನ್ನು ಅಧ್ಯಯನ ಮಾಡ ಬಹುದು. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಸತತ ನಿಗಾ ಇಡಲು, ಅಪಾಯಗಳಿಂದ ಕಾಪಾಡಲು ಸಹಾಯಕವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.