ಬಿಸಿಯೂಟ ನೌಕರರ ವೇತನ ಪಾಲು ಹೆಚ್ಚಿಸಲು ಕೇಂದ್ರಕ್ಕೆ ಸಚಿವ ಸುರೇಶ್ ಕುಮಾರ್ ಒತ್ತಾಯ
Team Udayavani, Mar 9, 2020, 12:35 PM IST
ಬೆಂಗಳೂರು: ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ (ಬಿಸಿಯೂಟ ನೌಕರರ) ಕೇಂದ್ರ ಸರ್ಕಾರ ನೀಡುವ ಸಂಭಾವನೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರಿಗೆ ಪತ್ರ ಬರೆದಿರುವ ಸಚಿವರು, 2010ರಲ್ಲಿ ಈ ಯೋಜನೆಯಡಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಕೇಂದ್ರ ಸರ್ಕಾರ ಮಾಸಿಕ 1000 ರೂ. ಸಂಭಾವನೆ ನಿಗದಿಪಡಿಸಿ ಅದರಲ್ಲಿ ಶೇ. 75 ಭಾಗ ನೀಡುತ್ತಿತ್ತು. 25 ಭಾರ ರಾಜ್ಯ ಸರ್ಕಾರ ಭರಿಸಬೇಕಿತ್ತು. 2014ರಲ್ಲಿ ಕೇಂದ್ರವು ತನ್ನ ಪಾಲನ್ನು ಇದ್ದಕ್ಕಿದ್ದಂತೆ ಶೇ. 60ಕ್ಕೆ ಇಳಿಸಿತು. ರಾಜ್ಯ ಸರ್ಕಾರ ಶೇ. 40 ಭರಿಸಬೇಕಾಯಿತು. ಆದರೆ ಅಡುಗೆ ಸಿಬ್ಬಂದಿಯ ಸಂಕಷ್ಟವನ್ನು ಆಯಾ ಕಾಲದ ಜೀವನವೆಚ್ಚ ಪರಿಗಣಿಸಿ ರಾಜ್ಯ ಸರ್ಕಾರ ಅಡುಗೆಯವರಿಗೆ ಮಾಸಿಕ 2700 ರೂ. ಮತ್ತು ಸಹಾಯಕರಿಗೆ 2600 ರೂ.ಗಳಿಗೆ ಹೆಚ್ಚಿಸಿತು. ಆದರೆ ಕೇಂದ್ರ ಸರ್ಕಾರ ಅಂದಿನಿಂದಲೂ ತನ್ನ ಪಾಲನ್ನು ಕೇವಲ 600 ರೂ.ಗಳನ್ನು ಮಾತ್ರವೇ ನೀಡುತ್ತಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 46768 ಅಡುಗೆಯವರು ಮತ್ತು 71159 ಸಹಾಯಕರು ಸೇರಿ ಒಟ್ಟು 1,17,927 ಮಂದಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ನೀಡುವ ಸಂಭಾವನೆಯಲ್ಲಿ ಜೀವನ ಸಾಗಿಸುವುದಕ್ಕೆ ತೊಂದರೆಯಾಗುತ್ತಿರುವುದರಿಂದ ತಮ್ಮ ವೇತನವನ್ನು ಕ್ರಮವಾಗಿ 6000 ಮತ್ತು 5000ಕ್ಕೆ ಹೆಚ್ಚಿಸಬೇಕೆಂದು ಈ ಕೆಲಸಗಾರರು ಹಲವಾರು ಬಾರಿ ಕೆಲಸ ಸ್ಥಗಿತ ಮುಷ್ಕರ ಮಾಡುವ ಮೂಲಕ ಒತ್ತಾಯಿಸುತ್ತಿದ್ದಾರೆ. ಅವರ ಬೇಡಿಕೆಗಳು ನಿಜಕ್ಕೂ ಸಮ್ಮತವಾಗಿರುವುದರಿಂದ ಅವರು ಒತ್ತಾಯಿಸುತ್ತಿರುವ ಕ್ರಮವಾಗಿ 6000 ಮತ್ತು 5000 ರೂ.ಗಳಿಗೆ ನಿಗದಿ ಪಡಿಸಿಪರಿಷ್ಕೃತ ವೇತನಕ್ಕೆ ಅನುಗುಣವಾಗಿ ಕೇಂದ್ರದ ಪಾಲನ್ನು ಶೇ. 60ರಷ್ಟು ಒದಗಿಸಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.