ತೂಗುಗತ್ತಿಯಲ್ಲಿ ಮಧ್ಯಪ್ರಾಚ್ಯದ ವಲಸೆ ಕಾರ್ಮಿಕರು : ವೇತನವೂ ಅನುಮಾನ

Team Udayavani, Apr 18, 2020, 7:04 PM IST

ತೂಗುಗತ್ತಿಯಲ್ಲಿ ಮಧ್ಯಪ್ರಾಚ್ಯದ ವಲಸೆ ಕಾರ್ಮಿಕರು : ವೇತನವೂ ಅನುಮಾನ

ಮಣಿಪಾಲ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೋವಿಡ್‌ 19 ಸಂಬಂಧ ಲಾಕ್‌ಡೌನ್‌ ಜಾರಿಯಾಗಿದ್ದು ಬಹುತೇಕ ವ್ಯವಹಾರಗಳು ಸ್ತಬ್ಧವಾಗಿವೆ. ಈ ರಾಷ್ಟ್ರಗಳಿಗೆ ಉದ್ಯೋಗ ಕಾರಣಕ್ಕೆ ತೆರಳಿದ ಬಹುತೇಕರು ಬರೀ ಕೈಯಲ್ಲಿ ಕುಳಿತಿದ್ದಾರೆ. ಈ ಕುರಿತಂತೆ ಸಿರಿಯಾ ದೇಶದ ಪಕ್ಕದಲ್ಲಿರುವ ಲೆಬನಾನ್‌ ಕಾರ್ಮಿಕರ ರಕ್ಷಣೆ ಮುಂದಾಗಬೇಕು ಎಂದು ಎನ್‌ಜಿಒಗಳು ಮನವಿ ಮಾಡಿವೆ. ಮಧ್ಯಪ್ರಾಚ್ಯಾದ್ಯಂತ ವಲಸೆ ಕಾರ್ಮಿಕರು ಉದ್ಯೋಗ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.

ಕೊಲ್ಲಿ ರಾಜ್ಯಗಳು ಮತ್ತು ಸೌದಿ ಅರೇಬಿಯಾದ ಕೆಲವು ಭಾಗಗಳಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಚ್ಚಿದ ವಿಮಾನ ನಿಲ್ದಾಣಗಳು ಕಾರ್ಮಿಕರನ್ನು ಕಟ್ಟಿಹಾಕಿವೆ. ಅತ್ತ ತಾಯ್ನಾಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ಇತ್ತ ದುಡಿಯಲೂ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್‌ ಪ್ರಾರಂಭವಾಗುವ ಮೊದಲೇ ಲೆಬನಾನ್‌ನ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಬಹುತೇಕ ಆದಾಯದ ಮೂಲಗಳನ್ನು ಛಿದ್ರಗೊಳಿಸಿದ್ದವು.

ಇದರ ಜತೆಗೆ ಈಗ ಕೋವಿಡ್‌-19 ವೈರಸ್‌ ಹಾನಿಯೂ ಬಹುದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಕೆಲಸ ಮಾಡುವ ಹೊರ ದೇಶದ ಕಾರ್ಮಿಕರಿಗೆ ಸಂಬಳ ಸಿಗಲಾರದೆಂಬ ಭಯ ಆರಂಭವಾಗಿದೆ.

ಕೆಲವು ಮನೆಗಳಲ್ಲಿ ಕಾರ್ಮಿಕರನ್ನು ತೀವ್ರವಾಗಿ ಹಿಂಸಿಸ ಲಾಗುತ್ತಿದ್ದು, ಅಪಾಯಕಾರಿ ಕೆಲಸಕ್ಕೆ ಒತ್ತಾಯಿಸಲಾಗುತ್ತಿದೆ. ಮನೆಗಳ ಒಳಗೆ ಸ್ವತ್ಛಗೊಳಿಸುವಿಕೆಗೆ ಬಳಸುತ್ತಿದ್ದಾರೆ. ಈಗ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರುವ ಕಾರಣ ವೇತನವೂ ಸಿಗುವುದು ಅನುಮಾನವಾಗಿದ್ದು, ಅವರ ಭವಿಷ್ಯ ಕತ್ತಲೆಯಲ್ಲಿದೆ.

ಲೆಬನಾನ್‌ನಲ್ಲಿ 2.50 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಇವರಲ್ಲಿ ಮುಖ್ಯವಾಗಿ ಗೃಹ ಕಾರ್ಮಿಕರು ಹೆಚ್ಚಿದ್ದಾರೆ. ತಮ್ಮ ಉದ್ಯೋಗದಾತರ ಮನೆಗಳಲ್ಲಿ ಕೆಲಸ ಮಾಡಿ ಸಾಮಾನ್ಯವಾಗಿ ಅಲ್ಲೇ ವಾಸಿಸುತ್ತಾರೆ.

ಕೋವಿಡ್‌ 19 ಪೀಡಿತ ರಾಷ್ಟ್ರವಾದ ಇರಾನ್‌ನ ಸಮೀಪದಲ್ಲೇ ಈ ರಾಷ್ಟ್ರ ಇದೆ. ಅದಕ್ಕೆ ಹೋಲಿಸಿದರೆ ಕೊಲ್ಲಿ ರಾಜ್ಯಗಳಲ್ಲಿನ ಅಧಿಕೃತ ಕೊರೊನಾ ವೈರಸ್‌ ಸಂಖ್ಯೆಗಳು ತುಲನಾತ್ಮಕವಾಗಿ ಕಡಿಮೆ ಇದೆ. ಮೇ ತಿಂಗಳ ಕೊನೆಯಲ್ಲಿ ರಂಜಾನ್‌ ಅಂತ್ಯದ ವೇಳೆಗೆ ಈ ಪ್ರದೇಶದ ವಿಮಾನ ನಿಲ್ದಾಣಗಳು ತೆರೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಒಂದಿಷ್ಟು ಮಂದಿ ತಮ್ಮ ದೇಶಗಳಿಗೆ ತೆರಳುವ ಸಾಧ್ಯತೆ ಇದೆ. ಕೋವಿಡ್‌ 19 ಬಿಕ್ಕಟ್ಟು ಕೊಲ್ಲಿಯಾದ್ಯಂತ ಉದ್ಯೋಗವನ್ನು ಕುಂಠಿತಗೊಳಿಸಿದೆ. ಇದರಿಂದ ನಿರ್ಮಾಣ ವಲಯ, ಚಿಲ್ಲರೆ ವ್ಯಾಪಾರ ಮತ್ತು ಇತರ ಕ್ಷೇತ್ರಗಳಿಗೆ ಸಮಸ್ಯೆ ಆಗಿದೆ. ದೇಶಗಳ ಆರ್ಥಿಕ ಸ್ಥಿತಿಯ ಮೇಲೂ ಹೊಡೆತ ಬೀಳುವ ಆತಂಕ ಎದುರಾಗಿದೆ.

ಟೀಕೆಗೆ ಗುರಿ
ಲೆಬನಾನ್‌ಗೆ ವಲಸೆ ಬಂದ ಗೃಹ ಕಾರ್ಮಿಕರನ್ನು ಶೋಷಿಸುವ ಅಥವಾ ನಿಂದಿಸುವ ಉದ್ಯೋಗದಾತರರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸರಕಾರ ಸ್ಪಷ್ಟವಾಗಿ ಎಚ್ಚ ರಿಸದಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್‌-19ನಂತಹ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಕಾರ್ಮಿಕರಿಗೂ ಆರೋಗ್ಯ ಸೇವೆಗೆ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಘಟಕ ಮಾಧ್ಯಮಗಳಿಗೆ ತಿಳಿಸಿದೆ.

ಟಾಪ್ ನ್ಯೂಸ್

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

jharkhand election: 7 guarantee from INDIA bloc

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

Lawrence Bishnoi T-Shirt Sale on Flipkart, Meesho

T-Shirt: ಫ್ಲಿಪ್‌ಕಾರ್ಟ್‌, ಮೀಶೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಟೀಶರ್ಟ್‌ ಮಾರಾಟ: ಆಕ್ರೋಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.