ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್
Team Udayavani, Jun 16, 2021, 11:40 PM IST
ಚಂಡೀಗಢ: ಭಾರತದ ಲೆಜೆಂಡ್ರಿ ರನ್ನರ್ ಮಿಲ್ಕಾ ಸಿಂಗ್ ಅವರ ಕೋವಿಡ್ ಫಲಿತಾಂಶವೀಗ ನೆಗೆಟಿವ್ ಬಂದಿದ್ದು, ಆರೋಗ್ಯ “ಸ್ಥಿರ’ವಾಗಿದೆ ಎಂದು ಇಲ್ಲಿನ ಪಿಜಿಐಎಂಇರ್ ಆಸ್ಪತ್ರೆಯ ವೈದ್ಯಕೀಯ ಮೂಲಗಳು ತಿಳಿಸಿವೆ. ಅವರನ್ನೀಗ ಕೋವಿಡ್ ತುರ್ತು ನಿಗಾ ಘಟಕದಿಂದ ಇನ್ನೊಂದು ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ.
“ಮಿಲ್ಕಾಜೀ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನೆಗೆಟಿವ್ ಫಲಿತಾಂಶ ಬಂದುದರಿಂದ ಅವರನ್ನು ಕೋವಿಡ್ ಐಸಿಯುನಿಂದ ಮೆಡಿಕಲ್ ಐಸಿಯುಗೆ ವರ್ಗಾಯಿಸಲಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು’ ಎಂದು ಮಿಲ್ಕಾ ಸಿಂಗ್ ಕುಟುಂಬದ ವಕ್ತಾರರೊಬ್ಬರು ತಿಳಿಸಿದರು.
91 ವರ್ಷದ ಮಿಲ್ಕಾ ಸಿಂಗ್ ಅವರನ್ನು ಜೂ. 3ರಂದು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಅವರ ಪತ್ನಿ ನಿರ್ಮಲಾ ಕೌರ್ (85) ಕೋವಿಡ್ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ನಿಧನ ಹೊಂದಿದ್ದರು.
ಇದನ್ನೂ ಓದಿ :ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚನೆ : ಮಹಾರಾಷ್ಟ್ರದ ಮಾಜಿ ಶಾಸಕ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.