ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಗಣಿ ಸದ್ದು! ಅದಿರು ಪುಡಿ ಸಾಗಿಸುತ್ತಿದ್ದ 19 ಲಾರಿ ವಶ

ಎಎಸ್‌ಪಿ ಲಾವಣ್ಯ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ

Team Udayavani, Jun 20, 2021, 11:38 PM IST

mining

ಸಾಂದರ್ಭಿಕ ಚಿತ್ರ

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದಲ್ಲಿ ದಶಕದ ಬಳಿಕ ಪುನಃ ಅಕ್ರಮ ಗಣಿಗಾರಿಕೆ ಸದ್ದು ಭಾನುವಾರ ಕೇಳಿ ಬಂದಿದೆ. ಸ್ಪಾಂಜ್‌ ಐರನ್‌ ಫ್ಯಾಕ್ಟರಿಗಳಲ್ಲಿ ಕಬ್ಬಿಣದ ಅದಿರಿನ ಆಶ್‌ (ಫೈನ್ಸ್‌) ಪುಡಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ 19 ಲಾರಿಗಳ ಮೇಲೆ ಶನಿವಾರ ರಾತ್ರಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ತಾಲೂಕಿನ ಹಲಕುಂದಿ ಬಳಿಯ ಬಳ್ಳಾರಿ ಇಸ್ಪಾತ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಸ್ಪಾಂಜ್‌ ಐರನ್‌ ಫ್ಯಾಕ್ಟರಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದೆ ಅದಿರಿನ ಪುಡಿ ತುಂಬಿಕೊಂಡು 10 ರಿಂದ 12 ಚಕ್ರದ 19 ಲಾರಿಗಳು ನಗರದ ಬೈಪಾಸ್‌ ಮಾರ್ಗವಾಗಿ ಆಂಧ್ರದತ್ತ ಸಾಗುತ್ತಿದ್ದವು. ಈ ವೇಳೆ ಕಾಕರ್ಲತೋಟ ಬಳಿ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಫೈನ್ಸ್‌ ಸಹಿತ ಲಾರಿಗಳೊಂದಿಗೆ ಚಾಲಕರು, ಲೋಡ್‌ ಮಾಡಿದವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಸೈದುಲು ಅಡಾವತ್‌, ಎಎಸ್‌ಪಿ ಬಿ.ಎನ್‌. ಲಾವಣ್ಯ ಪರಿಶೀಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಸೈದುಲು ಅಡಾವತ್‌, ಬಳ್ಳಾರಿ ಇಸ್ಪಾತ್‌ ಕಂಪನಿ ಪ್ರೈವೆಟ್‌ ಲಿಮಿಟೆಡ್‌ನಿಂದ ಅದಿರಿನ ಪುಡಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಇಲ್ಲದೇ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಕಳೆದ ನಾಲ್ಕೈದು ದಿನಗಳಿಂದ ನಿಗಾವಹಿಸಿ, ಹೆಚ್ಚುವರಿ ಎಸ್‌ಪಿ ಲಾವಣ್ಯ ನೇತೃತ್ವದಲ್ಲಿ ತಂಡ ರಚಿಸಿ ಶನಿವಾರ ರಾತ್ರಿ 10.30ಕ್ಕೆ ದಾಳಿ ನಡೆಸಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಅದರಿನ ಪುಡಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಮಾರಾಟ ಮಾಡಬೇಕೆಂಬ ನಿಯಮವಿದೆ. ಆದರೆ ಅನುಮತಿ ಇಲ್ಲದೇ ಬೇರೆಡೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಫೈನ್ಸ್‌ನು° ಕೃಷ್ಣಪಟ್ಟಣಂ ಫೋರ್ಟ್‌ಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆಯಾದರೂ ಅದು ಸರಿಯೆಂದು ಹೇಳಲಾಗದು. ಮುಂದಿನ ತನಿಖೆ ನಡೆಸಲೇಬೇಕಾಗುತ್ತದೆ. ಕಂಪನಿಯವರು ಸಲ್ಲಿಸಿರುವ ಇನ್ವೆ$çಸ್‌ನಲ್ಲಿ ಈ ಅದರಿನ ಪುಡಿ ತಮಿಳುನಾಡಿನ ತಿರುವಾಯೂರು ಸಿಮೆಂಟ್‌ ಫ್ಯಾಕ್ಟರಿಗೆ ಸಾಗಿಸಲಾಗುತ್ತಿದೆ ಎಂದು ನಮೂದಿಸಲಾಗಿದೆ. ಫೈನ್ಸ್‌ನಲ್ಲಿ 43 ಗ್ರೇಡ್‌ ಅದಿರು ಇದೆ ಎಂದು ಹೇಳಲಾಗುತ್ತಿದೆ. ಆದರೆ ಸಂಬಂಧಪಟ್ಟ ಇಲಾಖೆಯ ವರು ಇದು ತ್ಯಾಜ್ಯಾವೇ ಅಥವಾ ಅದಿರು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.

ಇದನ್ನೂ ಓದಿ :ಲೇಡಿ ರಾಣಾ ಬ್ಯಾಟಿಂಗ್‌ ಪ್ರತಾಪ : ಚೊಚ್ಚಲ ಟೆಸ್ಟ್‌ನಲ್ಲೇ ಅಮೋಘ ಆಲ್‌ರೌಂಡ್‌ ಸಾಹಸ

ಏನಿದು ಅವ್ಯವಹಾರ?
ಟೆಂಡರ್‌ನಲ್ಲಿ ಕಬ್ಬಿಣ ಅದಿರನ್ನು ಖರೀದಿಸಿದ ಸ್ಪಾಂಜ್‌ ಐರನ್‌ ಫ್ಯಾಕ್ಟರಿಯವರು, ಅದನ್ನು ಪ್ಲಾಂಟ್‌ನಲ್ಲಿ ಜನರೇಟೆಡ್‌ ಫೈನ್ಸ್‌, ಲಂಪ್ಸ್‌, ಪೆಲೆಟ್ಸ್‌ ಆಗಿ ಬೇರ್ಪಡಿಸಲಾಗುತ್ತದೆ. ಈ ಅದಿರುಗಳನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು. ಇದನ್ನು ಹೈಗ್ರೇಡ್‌ ಮಾಡುವುದಾಗಲಿ, ಬೇರೆಡೆಗೆ ಸಾಗಿಸುವುದಾಗಲಿ ಮಾಡುವಂತಿಲ್ಲ. ಒಂದು ವೇಳೆ ಜನರೇಟೆಡ್‌ ಫೈನ್ಸ್‌ನು° ಬೇರೆಡೆಗೆ ಸಾಗಿಸುವುದಾದರೆ ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪುನಃ (ಯಾವುದೇ ರಾಯಲ್ಟಿ ಪಾವತಿಸದೆ) ಕೇವಲ ಮರು ಅನುಮತಿ ಪಡೆದು ಸಾಗಿಸಬೇಕೆಂಬ ನಿಯಮವಿದೆ. ಜನರೇಟೆಡ್‌ ಫೈನ್ಸ್‌ ಪಡೆಯುವ ಎಂಡ್ನೂಜರ್‌ಗಳು ಸಹ ಇದನ್ನು ಹೈಗ್ರೇಡ್‌ ಮಾಡುವುದಾಗಲಿ, ಬೇರೆಯವರಿಗೆ ಮಾರುವುದಾಗಲಿ ಮಾಡುವಂತಿಲ್ಲ. ಆದರೆ, ಇವರು ಯಾವುದಕ್ಕೆ ಸಾಗಿಸುತ್ತಿದ್ದಾರೆ ಗೊತ್ತಿಲ್ಲ. ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿ ಸಾಗಾಟ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ 19 ಲಾರಿಗಳಲ್ಲಿ ಪ್ರತಿಯೊಂದರಲ್ಲಿ 25-30 ಟನ್‌ಗಳಂತೆ ಸುಮಾರು 600 ಟನ್‌ಗಳಷ್ಟು ಫೈನ್ಸ್‌ ಇರಬಹುದು. ಇದರ ಮೌಲ್ಯ ಸುಮಾರು 2.5 ಲಕ್ಷ ರೂ.ಗಳಷ್ಟಿರಬಹುದು. ಬಳ್ಳಾರಿ ಇಸ್ಪಾತ್‌ ಪ್ರೈ.ಲಿ. ಈ ಮೊದಲು ಶ್ರೀನಿವಾಸರಾವ್‌ ಎನ್ನುವವರ ಹೆಸರಲ್ಲಿತ್ತು. ಇದೀಗ ತಿರುಪತಿ ಸ್ಟೀಲ್ಸ್‌ ಎನ್ನುವವರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಹೆಸರು ಇನ್ನೂ ಬದಲಾವಣೆಯಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಎಸ್‌ಪಿ, ಎಎಸ್‌ಪಿ, ನಾವು ಹೋಗಿ ತನಿಖೆ ನಡೆಸಿದ್ದೇವೆ. ಪೊಲೀಸರು ದೂರು ದಾಖಲಿಸಿಕೊಳ್ಳಬಹುದು ಅಥವಾ ನಮಗೆ ಸೂಚಿಸಿದಲ್ಲಿ ಎಂಎಂಆರ್‌ಡಿ ಕಾಯ್ದೆಯಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿ ಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.