ಸಹಕಾರ ಸಚಿವಾಲಯ: ಅಭಿವೃದ್ಧಿ ಪಥಕ್ಕೆ ರಹದಾರಿ : ಎಸ್.ಟಿ. ಸೋಮಶೇಖರ್
Team Udayavani, Jul 14, 2021, 6:55 AM IST
ಭಾರತ ಒಂದು ವೈವಿಧ್ಯತೆಯ ಹಿನ್ನೆಲೆಯುಳ್ಳ ರಾಷ್ಟ್ರ. ಇಲ್ಲಿ ಎಲ್ಲರಿಗೂ ಸ್ಥಾನವಿದೆ, ಗೌರವವಿದೆ, ಆದರಗಳಿವೆ, ಪ್ರೀತಿ ಇದೆ, ಸೌಹಾರ್ದವಿದೆ, ಅಂತೆಯೇ ಪರಸ್ಪರ ಸಹಕಾರವೂ ಇದೆ. ನಮ್ಮದು ವಿವಿಧತೆಯಲ್ಲಿ ಏಕತೆ ಯನ್ನು ಸಾರುವ, ಅದರಲ್ಲಿ ಸಾರ್ಥಕತೆ ಕಾಣುವ, ಕಂಡುಕೊಳ್ಳುವ ದೇಶ. ಈ ಸಹಕಾರ ತಣ್ತೀ ಎನ್ನುವುದು ಭಾರತೀಯರ ರಕ್ತದಲ್ಲಿಯೇ ಬಂದುಬಿಟ್ಟಿದೆ.
ನಮ್ಮ ದೇಶದ ಇಡೀ ವ್ಯವಸ್ಥೆಯು ಸಹಕಾರಿ ವ್ಯವಸ್ಥೆಯಡಿಯೇ ರೂಪುಗೊಂಡಿದ್ದಲ್ಲದೆ, ಅದರಡಿಯೇ ಬೆಳೆದು ಇಂದು ನೆರಳನ್ನು ನೀಡುತ್ತಾ ಬಂದಿದೆ. ಆದರೆ ಅವುಗಳ ರೂಪ ಹಾಗೂ ಕಾರ್ಯವೈಖರಿಗಳು ಬೇರೆ ಬೇರೆ ಅಷ್ಟೇ. ಇನ್ನು ರಾಜ್ಯ – ರಾಜ್ಯಗಳಲ್ಲಿ ಸಹಕಾರ ವಲಯದ ಪರಿಧಿ, ವ್ಯಾಪ್ತಿ, ಕಾರ್ಯ ವೈಖರಿ, ಕಾನೂನು-ಕಟ್ಟಳೆಗಳು, ನೀತಿ ನಿಯಮಗಳು ಭಿನ್ನವಾಗಿರುತ್ತದೆ. ಆದರೆ ಎಲ್ಲವೂ ಸಹಕಾರ ಎಂಬ ತಣ್ತೀಕ್ಕೆ ಬದ್ಧವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಇಷ್ಟಾದರೂ ಒಂದು ಸಮಗ್ರ ನೀತಿ, ಚೌಕಟ್ಟು ಎಂಬುದು ಸಿಕ್ಕಿರಲಿಲ್ಲ. ಇದರಿಂದ ಸಹಕಾರಿ ವಲಯದಲ್ಲಿನ ಅಂತಾರಾಜ್ಯಗಳಲ್ಲಿ ವ್ಯವಹಾರ ನಡೆಸುತ್ತಿರುವ ಬಹು-ರಾಜ್ಯ ಸಹಕಾರ ಸಂಘಗಳ ಮೇಲೆ ನಿಗಾ ವಹಿಸುವುದು ಕಷ್ಟಸಾಧ್ಯ ವಾಗಿತ್ತು. ಕೇಂದ್ರವು ನೂತನವಾಗಿ ಸ್ಥಾಪಿಸಿರುವ ಸಹಕಾರ ಸಚಿವಾಲಯದಿಂದ ಈಗ ಎಲ್ಲವೂ ಸಾಧ್ಯವಾಗುತ್ತಿದೆ. ರಾಜ್ಯಗಳ ಸಹಕಾರ ವ್ಯವಸ್ಥೆಗಳ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂಬ ಭಾವನೆ ನಮಗೆ ಮೂಡಿದೆ.
ಭಾರತ ಪ್ರಗತಿ ಹೊಂದಬೇಕಿದ್ದರೆ, ಅಭಿವೃದ್ಧಿ ಹೊಂದಬೇಕೆಂ ದಿದ್ದರೆ ಅದಕ್ಕಿರುವುದು ಎರಡೇ ದಾರಿ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಅಂದೇ ಹೇಳಿದ್ದರು. ಮೊದಲನೆಯದಾಗಿ ದೇಶದ ಪ್ರತೀ ಹಳ್ಳಿಯಲ್ಲಿ ಒಂದು ಸಹಕಾರ ಸಂಘ ವನ್ನು ಸ್ಥಾಪಿಸುವುದು. ಎರಡನೆಯದಾಗಿ ಗ್ರಾಮಕ್ಕೊಂದು ಶಾಲೆ ನಿರ್ಮಿಸುವುದಾಗಿದ್ದು, ಇದರಿಂದ ನಾವು ಭವ್ಯ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು ಎಂಬ ಆಶಯವನ್ನು ಹೊಂದಿದ್ದರು. ಇದೀಗ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ನೂತನ ಸಹಕಾರ ಸಚಿವಾಲಯವನ್ನು ಸ್ಥಾಪನೆ ಮಾಡುವ ಮೂಲಕ ಮಹಾತ್ಮಾ ಗಾಂಧೀಜಿ ಅವರ ಆಶಯವನ್ನು ಈಡೇರಿಸಿದಂತಾಗಿದೆ.
ಸಹಕಾರಿ ವ್ಯವಸ್ಥೆ ಹಾಗೂ ರೈತಾಪಿ ವರ್ಗಕ್ಕೆ ನೇರ ಹಾಗೂ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗಿದೆ. ರೈತ ನಮ್ಮ ದೇಶದ ಬೆನ್ನೆಲುಬು. ಹಾಗಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ರಾಜ್ಯ ಸರಕಾರವು ಜಾರಿಗೆ ತಂದಿದೆ.
ಇದೀಗ ಕೇಂದ್ರದ ಈ ಕ್ರಮದಿಂದ ರೈತಾಪಿ ವರ್ಗ ಮತ್ತು ಸಹಕಾರಿಗಳಿಗೆ ಅನುಕೂಲವಾಗಲಿದ್ದು, ಅವರ ಅಭ್ಯುದಯಕ್ಕೆ ಶ್ರಮಿಸಲು ಪೂರಕವಾಗಲಿದೆ ಎಂಬ ಅಂಶವನ್ನು ಹೇಳಲು ಇಚ್ಛೆಪಡುತ್ತೇನೆ. ದೇಶದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ವಿವಿಧ ರೀತಿಯ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದು, 48 ಕೋಟಿಗೂ ಅಧಿಕ ಸಹಕಾರಿ ಸದಸ್ಯರುಗಳಿದ್ದಾರೆ. ರಾಜ್ಯದಲ್ಲಿ ಸುಮಾರು 43 ಸಾವಿರ ಕೋಆಪರೇಟಿವ್ ಸಂಸ್ಥೆಗಳು ಹಾಗೂ 5 ಸಾವಿರ ಸೌಹಾರ್ದ ಸೊಸೈಟಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, 2.5 ಕೋಟಿಗೂ ಹೆಚ್ಚು ಮಂದಿ ಸಹಕಾರಿ ಸದಸ್ಯರಿದ್ದಾರೆ. ಈ ಎಲ್ಲರಿಗೂ ಈಗ ಒಂದು ವ್ಯವಸ್ಥೆ ರೂಪುಗೊಂಡಿದ್ದು, ಸಮು ದಾಯ ಆಧಾರಿತ ಅಭಿವೃದ್ಧಿಯನ್ನು ಸಹಭಾಗಿತ್ವದ ಜತೆಗೆ ಕೊಂಡೊಯ್ಯಲು ಸಹಕಾರಿಯಾದಂತಾಗಿದೆ. ಇದೊಂದು ನಾಗರಿಕ ಕೇಂದ್ರಿತ ಸಹಕಾರಿ ಚಳವಳಿಗೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಲು ರಚಿಸಿದಂತಹ ಅದ್ಭುತ ವ್ಯವಸ್ಥೆಯಾಗಿದೆ.
ಅಭಿವೃದ್ಧಿ ಪಥಕ್ಕೆ ರಹದಾರಿ: ನೂತನ ಸಹಕಾರ ಸಚಿವಾಲಯ ಸ್ಥಾಪನೆಯಿಂದ ಅನೇಕ ಉಪಯೋಗಗಳು ಸಾಧ್ಯವಾಗಲಿದೆ. ಇದನ್ನು ನಾನು ಅಭಿವೃದ್ಧಿ ಪಥಕ್ಕೆ ರಹದಾರಿ ಎಂದೇ ವಿಶ್ಲೇಷಿ ಸುತ್ತೇನೆ. ಸಹಕಾರ ರಂಗಕ್ಕಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡುವುದರಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲಬರಲಿದೆ. ಈ ವ್ಯವಸ್ಥೆಯಿಂದ ಇನ್ನು ದೇಶದಲ್ಲಿ ಸಹಕಾರಿ ವಲಯಕ್ಕೆ ಒಂದು ಚೌಕಟ್ಟು ನಿರ್ಮಾಣವಾಗಲಿದೆ. ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗಳ ರಚನೆಗೆ ಅನುಕೂಲವಾಗಲಿದೆ.
ಸಹಕಾರ ಸಿದ್ಧಾಂತ ಕಾರ್ಯನಿರ್ವಹಣೆ ಮಾಡುವುದೇ ಎಲ್ಲ ರನ್ನೂ ಉಳ್ಳವರನ್ನಾಗಿ ಮಾಡಬೇಕು ಎಂಬ ಸದಾಶಯದೊಂ ದಿಗೆ. ಅಂದರೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಮಾ ಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಿಗಬೇಕು ಎಂಬ ಮೂಲ ಆಶಯಕ್ಕೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಹಾಗೂ ಮಹಿಳಾ ವರ್ಗಗಳಿಗೆ ಆರ್ಥಿಕ ಬಲ ತುಂಬುವ ಶಕ್ತಿ ಇರುವುದು ಸಹಕಾರ ವಲಯಕ್ಕೆ ಮಾತ್ರ. ಈ ವರ್ಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು, ಸರಕಾರದ ಸಬ್ಸಿಡಿ ಯೋಜನೆಗಳಿಂದ ನೆರವು ನೀಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳ ಸಮರ್ಪಕ ಅನುಷ್ಠಾನ ಸಹಕಾರಿ ರಂಗದಿಂದ ಸಾಧ್ಯವಾಗುತ್ತಿದೆ. ಹೀಗಾಗಿ ಈ ವರ್ಗಗಳ ಅಭಿವೃದ್ಧಿ ಮತ್ತು ಸಶಕ್ತೀಕರಣಕ್ಕೆ ಕೇಂದ್ರದ ಈ ನಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ.
ಇವೆಲ್ಲದರ ಜತೆಗೆ ಬಹು-ರಾಜ್ಯ ಸಹಕಾರ ಸಂಘಗಳಿಗೆ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ, ಕಾನೂನು ರಚನೆಗೆ ಇದು ಸಹಕಾರಿಯಾಗಲಿದೆ. ಆದರೆ ರಾಜ್ಯಗಳ ಅಧಿಕಾರಕ್ಕೆ ಯಾವುದೇ ತೊಂದರೆಯಾಗಲೀ, ಹಸ್ತಕ್ಷೇಪವಾಗಲೀ ಇರುವುದಿಲ್ಲ. ಆಯಾ ರಾಜ್ಯಗಳ ನಿಯಂತ್ರಣದ ಅಧಿಕಾರಗಳು ಹಾಗೆಯೇ ಇರಲಿದೆ. ಹೀಗಾಗಿ ಸಹಕಾರಿಗಳ ಹಾಗೂ ಜನಹಿತದ ದೃಷ್ಟಿಯಿಂದ ಇದೊಂದು ಉತ್ತಮ ನಡೆ ಎಂದೇ ಹೇಳಬಹುದಾಗಿದೆ. ಬಹು-ರಾಜ್ಯ ಸಹಕಾರ ಸಂಘಗಳ ಮೇಲೆ ನಿಗಾ: ಸಹಕಾರ ಕ್ಷೇತ್ರ ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಒಂದು ವ್ಯವಸ್ಥೆ ಯೊಳಗೆ ಇರಲೇಬೇಕಾಗುತ್ತದೆ. ಬಹು-ರಾಜ್ಯ ಸಹಕಾರ ಸಂಘಗಳು (ಎಂಎಸ್‌ಸಿಎಸ್) ಬೇರೆ ಬೇರೆ ರಾಜ್ಯಗಳ ಜತೆಗೆ ವ್ಯವಹಾರಗಳನ್ನು ನಡೆಸುವಾಗ ಅವುಗಳಿಗೆ ಒಂದು ಪರಿಧಿ, ನೀತಿ-ನಿರೂಪಣೆಗಳು ಎಂಬುದು ಇರಲಿಲ್ಲ. ಆಯಾ ರಾಜ್ಯ ಗಳಿಗೂ ಇವುಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ 2000-2001ರಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈಗ ಇಂಥ ಒಂದು ಸಂಸ್ಥೆಗಳ ಬಲ ವರ್ಧನೆ ಹಾಗೂ ರಾಜ್ಯಗಳಿಗೂ ಪೂರಕವಾಗಿ ಬೆಂಬಲವನ್ನು ಕೊಡುವ ನಿಟ್ಟಿನಲ್ಲಿ ನೂತನ ಸಚಿವಾಲಯವು ಕಾರ್ಯ ನಿರ್ವಹಣೆ ಮಾಡಲಿದೆ.
– ಎಸ್.ಟಿ. ಸೋಮಶೇಖರ್, ಸಹಕಾರ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.