ಇಂದು ಮೋದಿ 2.0 ಸರಕಾರದ ಕೊನೆಯ ಬಜೆಟ್‌ : ಮಧ್ಯಾಂತರ ಬಜೆಟ್‌ನತ್ತ ಜನತೆಯ ಚಿತ್ತ

ಮಧ್ಯಾಂತರ ಬಜೆಟ್‌/ ಲೇಖಾನುದಾನ ಎಂದರೇನು ?

Team Udayavani, Feb 1, 2024, 6:30 AM IST

PM Mod

ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತನ್ನ 2ನೇ ಅವಧಿಯ ಕೊನೆಯ ಬಜೆಟ್‌ ಅನ್ನು ಫೆ. 1ರ ಗುರುವಾರ ಲೋಕಸಭೆಯಲ್ಲಿ ಮಂಡಿಸಲಿದೆ. ಚುನಾವಣ ವರ್ಷವಾಗಿರುವುದರಿಂದ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್‌ನ ಬದಲಿಗೆ ಮಧ್ಯಾಂತರ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸ ಲಿದ್ದಾರೆ. ಈ ಬಜೆಟ್‌ ಚುನಾವಣೆಯ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಮಹತ್ವದ್ದಾಗಿದ್ದರೂ, ಚುನಾವಣ ವರ್ಷ ವಾಗಿ ರುವು ದರಿಂದ ಈ ಬಜೆಟ್‌ ಪ್ರಕ್ರಿಯೆ ಕೇವಲ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವುದಕ್ಕಷ್ಟೇ ಸೀಮಿತವಾ ಗಲಿದೆ.

ಮಧ್ಯಾಂತರ ಬಜೆಟ್‌/ ಲೇಖಾನುದಾನ ಎಂದರೇನು ?
ಚುನಾವಣ ವರ್ಷದಲ್ಲಿ ಸರಕಾರವು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸ‌ಲು ಸಾಧ್ಯವಿಲ್ಲ. ಆದ್ದರಿಂದ ಹಣಕಾಸು ಸಚಿವರು ಚುನಾವಣೆ ನಡೆದು ಹೊಸ ಸರಕಾರ ಆಡಳಿತ ವಹಿಸಿಕೊಳ್ಳುವವರೆಗಿನ ಅವಧಿಗೆ ಮಧ್ಯಾಂತರ ಬಜೆಟ್‌ ಮಂಡಿಸುತ್ತಾರೆ. ಹೊಸ ಸರಕಾರ ರಚನೆಯಾಗು ವವರೆಗಿನ ಸರಕಾರದ ಆದಾಯ, ವೆಚ್ಚಗಳ ವಿವರವನ್ನು ಈ ಮಧ್ಯಾಂತರ ಬಜೆಟ್‌ ಒಳಗೊಂಡಿರುತ್ತದೆ. ಲೇಖಾನುದಾನ ವನ್ನು ಚುನಾ ವಣ ವರ್ಷದಲ್ಲಿ ಸರಕಾರವು ನೀಡುವ ಸಣ್ಣ ಅವಧಿಯ ಹಣಕಾಸಿನ ಲೆಕ್ಕಾಚಾರ ಎಂದೂ ಹೇಳಬಹುದು. ಸರಕಾರದ ಆಯ-ವ್ಯಯಗಳಿಗೆ ಸಂಸತ್‌ನ ಒಪ್ಪಿಗೆ ಅನಿವಾರ್ಯ ವಾಗಿರುವುದರಿಂದ ಹೊಸ ಸರಕಾರ ರಚನೆಯಾಗುವವರೆಗೆ ಸರಕಾರದ ದೈನಂದಿ ಖರ್ಚು ವೆಚ್ಚಗಳಿಗೆ ಸ‌ಂಸತ್‌ನಿಂದ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯ ಲಾಗುತ್ತದೆ. ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಯಾದರೂ ಹೊಸ ಸರಕಾರ ರಚನೆಯಾದ ಬಳಿಕ ಮತ್ತೆ ಹೊಸದಾಗಿ ಬಜೆಟ್‌ಗೆ ಒಪ್ಪಿಗೆ ಪಡೆಯುವುದು ಅಗತ್ಯವಾಗಿರುವುದರಿಂದ ತಾತ್ಕಾಲಿಕ ವಾಗಿ ಮಧ್ಯಂತರ ಬಜೆಟ್‌ ಅಥವಾ ಲೇಖಾನುದಾನದ ಮೊರೆ ಹೋಗಲಾಗುತ್ತದೆ.

ಮಧ್ಯಾಂತರ ಹಾಗೂ ಪೂರ್ಣಪ್ರಮಾಣದ ಬಜೆಟ್‌ಗಿರುವ ವ್ಯತ್ಯಾಸವೇನು ?
ಪೂರ್ಣಪ್ರಮಾಣದ ಬಜೆಟ್‌ನಲ್ಲಿ ಸರಕಾರದ ಹಣಕಾಸು ವರ್ಷದ ಆದಾಯ, ವೆಚ್ಚದ ಲೆಕ್ಕಾಚಾರಗಳಿರುತ್ತವೆ. ಈ ಬಜೆಟ್‌ ಸರಕಾರದ ಸಮಗ್ರ ಕಾರ್ಯಯೋಜನೆಯನ್ನು ಒಳ ಗೊಂಡಿರುತ್ತದೆ. ಸರಕಾರದ ಬೊಕ್ಕಸಕ್ಕೆ ಯಾವೆಲ್ಲ ಮೂಲ ಗಳಿಂದ ಆದಾಯ ಹರಿದುಬರಲಿದೆ, ಹಣವನ್ನು ಯಾವ ಕಾರ್ಯಗಳಿಗೆ ವ್ಯಯ ಮಾಡಲಾಗುತ್ತದೆ ಎನ್ನುವ ವಿವರ ಪೂರ್ಣ ಪ್ರಮಾಣದ ಬಜೆಟ್‌ ಒಳಗೊಂಡಿರುತ್ತದೆ. ಆದರೆ ಮಧ್ಯಾಂತರ ಬಜೆಟ್‌ನ್ನು ಸೀಮಿತ ಅವಧಿಗಾಗಿ ಮಂಡಿಸಲಾಗುತ್ತದೆ.

ಮಧ್ಯಾಂತರ ಬಜೆಟ್‌ನಲ್ಲಿ ಏನೆಲ್ಲ ಒಳಗೊಂಡಿ ರಬಹುದು?
ಕೆಲವು ತಿಂಗಳುಗಳ ಅವಧಿಯನ್ನು ಗಮನಿಸಿಕೊಂಡು ಸರ ಕಾರದ ವೆಚ್ಚ, ಆದಾಯ, ವಿತ್ತೀಯ ಕೊರತೆ, ಹಣಕಾಸಿನ ಲೆಕ್ಕಾಚಾರ ಮತ್ತು ಬಳಕೆಯ ಬಗೆ ಹೇಗೆ ಎಂಬುದನ್ನು ಇದು ಒಳಗೊಂಡಿರಬಹುದು. ಹೊಸ ಘೋಷಣೆಗಳನ್ನು ಸರಕಾರ ಮಾಡಬಹುದಾದರೂ ಚುನಾವಣೆಯ ಬಳಿಕ ರಚನೆಯಾಗುವ ಹೊಸ ಸರಕಾರ ಈ ಯೋಜನೆ, ಘೋಷಣೆಗಳನ್ನು ಜಾರಿಗೆ ತರುತ್ತದೆ ಅಥವಾ ಮುಂದುವರಿಸುತ್ತದೆ ಎಂಬ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ. ಇದಾಗ್ಯೂ ಚುನಾವಣ ವರ್ಷದಲ್ಲಿ ಬಹುತೇಕ ಸರಕಾರಗಳು ಜನಪರ ಬಜೆಟ್‌ ಅನ್ನು ಮಂಡಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಬಂದಿವೆ.

ಯಾವಾಗ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಲಾಗುತ್ತದೆ ?
ಚುನಾವಣೆಯ ಅನಂತರ ಹೊಸ ಸರಕಾರವು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತದೆ. ಕಳೆದ ಚುನಾವಣ ವರ್ಷವಾದ 2019ರಲ್ಲಿ ಪೂರ್ಣ ಪ್ರಮಾಣದ ಬಜೆಟ್‌ ಅನ್ನು ಜುಲೈ 5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದರು.

ಮೊರಾರ್ಜಿ ದಾಖಲೆ ಸರಿಗಟ್ಟಲಿರುವ ನಿರ್ಮಲಾ!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಆರನೇ ಬಜೆಟ್‌ ಮಂಡನೆಗೆ ಸನ್ನದ್ಧರಾಗಿದ್ದಾರೆ. ಈವರೆಗೆ ಐದು ಪೂರ್ಣ ಬಜೆಟ್‌ ಅನ್ನು ಮಂಡಿಸಿರುವ ನಿರ್ಮಲಾ, ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಎರಡನೇ ಅವಧಿಯ ಕೊನೆಯ ಮತ್ತು ಮಧ್ಯಾಂತರ ಬಜೆಟ್‌ ಮಂಡಿಸಲಿರುವರು. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು 8 ಪೂರ್ಣ ಮತ್ತು 2 ಮಧ್ಯಾಂತರ ಬಜೆಟ್‌ ಸಹಿತ ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ್ದರು. ದೇಶದಲ್ಲಿ ಅತೀ ಹೆಚ್ಚು ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಅವರದ್ದಾಗಿದೆ. 1959-64ರ ಅವಧಿಯಲ್ಲಿ ಮೊರಾರ್ಜಿ ದೇಸಾಯಿ ಅವರು 5 ಪೂರ್ಣ ಮತ್ತು ಒಂದು ಮಧ್ಯಾಂತರ ಹೀಗೆ ಸತತ 6 ಬಜೆಟ್‌ಗಳನ್ನು ಮಂಡಿಸಿದ್ದರು.

ಪೂರ್ಣಕಾಲೀನ ಮಹಿಳಾ ಹಣಕಾಸು ಸಚಿವೆ!
ಇದೇ ವೇಳೆ ನಿರ್ಮಲಾ ಸೀತಾರಾಮನ್‌ ಅವರು ದೇಶದ ಇತಿಹಾಸದಲ್ಲಿಯೇ ಐದು ವರ್ಷಗಳ ಕಾಲ ಸರಕಾರವೊಂದರಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಸಚಿವರು ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ.

ಬಜೆಟ್‌ ಮಂಡನೆ ಯಾರ್ಯಾರು ಎಷ್ಟು ಸಲ?
10 ಮೊರಾರ್ಜಿ ದೇಸಾಯಿ
9 ಪಿ. ಚಿದಂಬರಂ
8 ಪ್ರಣವ್‌ ಮುಖರ್ಜಿ
7 ಯಶವಂತ್‌ ಸಿನ್ಹಾ, ಸಿ.ಡಿ. ದೇಶ್‌ಮುಖ್‌
6 ಮನಮೋಹನ್‌ ಸಿಂಗ್‌
5 ವೈ.ಬಿ. ಚೌವಾಣ್‌, ಅರುಣ್‌ ಜೇಟಿÉ, ನಿರ್ಮಲಾ ಸೀತಾರಾಮನ್‌

ನಿರ್ಮಲಾ ಮಧ್ಯಾಂತರ ಬಜೆಟ್‌ ನಿರೀಕ್ಷೆಗಳು
ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ 6,000 ರೂ.ಗಳನ್ನು 8-9 ಸಾವಿರ ರೂ.ಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಇಲ್ಲಿ ಮಹಿಳಾ ರೈತರಿಗೆ ಹೆಚ್ಚಿನ ಆದ್ಯತೆ ಲಭಿಸುವ ನಿರೀಕ್ಷೆ ಇದೆ.
ನರೇಗಾ ಯೋಜನೆಗೆ ಸುಮಾರು 90,000 ಕೋ. ರೂ. ಅನುದಾನವನ್ನು ಮೀಸಲಿರಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಕಾರ್ಮಿಕರಿಗೆ ಶಕ್ತಿ ತುಂಬುವ ನಿರೀಕ್ಷೆ ಇದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಭಾರತ್‌ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಬಡ ರೋಗಿಗಳಿಗೆ ಯೋಜನೆಯ ಪ್ರಯೋಜನ ಲಭಿಸುವಂತೆ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ.

ಬಂಡವಾಳ ವೆಚ್ಚಕ್ಕೆ ಇನ್ನಷ್ಟು ಉತ್ತೇಜನ ನೀಡುವ ಸಾಧ್ಯತೆಗಳಿವೆ.ಕೃಷಿ ಮತ್ತು ಗ್ರಾಮೀಣ ವಲಯಕ್ಕೆ ಬೆಂಬಲ ನೀಡುವ ಉದ್ದೇಶದೊಂದಿಗೆ ಕೆಲವು ಪ್ರೋತ್ಸಾಹಕ ಯೋಜನೆಗಳು ಮತ್ತು ತೆರಿಗೆ ಪರಿಹಾರ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.ಗ್ರಾಮೀಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಕೃಷಿ ಮತ್ತು ಕೃಷಿಯೇತರ ವಲಯಗಳಿಗೆ ವಿಶೇಷ ಪ್ಯಾಕೇಜ್‌ ಘೋಷಣೆಯ ನಿರೀಕ್ಷೆ ಇದೆ. ಇದರಿಂದ ಸಹಜವಾಗಿಯೇ ನಗರ ಪ್ರದೇಶದ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ಆಶಾವಾದ ಸರಕಾರದ್ದಾಗಿದೆ.

ಶುದ್ಧ ಕುಡಿಯುವ ನೀರು, ಗ್ರಾಮೀಣ ವಸತಿ ಯೋಜನೆ, ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಮತ್ತಿತರ ವಲಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಲಭಿಸುವ ಸಾಧ್ಯತೆ ಇದೆ.
ರೈಲ್ವೇ ವಲಯದಲ್ಲಿ ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ವಂದೇ ಭಾರತ್‌, ಅಮೃತ್‌ ಭಾರತ್‌ ರೈಲುಗಳ ಸಂಚಾರದ ವಿಸ್ತರಣೆ, ಇನ್ನಷ್ಟು ದ್ವಿತೀಯ ಸ್ತರದ ನಗರಗಳಿಗೆ ಸಂಪರ್ಕ, ಈ ರೈಲು ಗಳಲ್ಲಿನ ಸೇವೆಗಳಲ್ಲಿ ಸುಧಾರಣೆ, ರೈಲುಗಳ ಸುರಕ್ಷೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ವೇಗ…ಮತ್ತಿತರ ಪ್ರಸ್ತಾವಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.

ವೈಯಕ್ತಿಕ ತೆರಿಗೆ ಸಹಿತ ವಿವಿಧ ತೆರಿಗೆ ನೀತಿಗಳಲ್ಲಿ ಒಂದಿಷ್ಟು ಸುಧಾರಣೆ, ಸರಳೀಕರಣ, ರಿಯಾಯಿತಿ ನೀಡುವ ಸಾಧ್ಯತೆಗಳ ಕುರಿತು ಘೋಷಣೆಗಳನ್ನು ಬಜೆಟ್‌ ಸಂಭವ ಕಡಿಮೆ.

ಐವರಿಂದ ಸತತ 5 ಬಾರಿ ಬಜೆಟ್‌
ಮೊರಾರ್ಜಿ ದೇಸಾಯಿ ಅಲ್ಲದೆ ಮನಮೋಹನ್‌ ಸಿಂಗ್‌, ಅರುಣ್‌ ಜೇಟಿÉ, ಪಿ.ಚಿದಂಬರಂ, ಯಶವಂತ್‌ ಸಿನ್ಹಾ ಅವರು ಸತತ ಐದು ಬಾರಿ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ್ದರು. ಕಳೆದ ವರ್ಷ ಈ ಸಾಲಿಗೆ ನಿರ್ಮಲಾ ಸೀತಾರಾಮನ್‌ ಸೇರ್ಪಡೆಯಾಗಿದ್ದರು.

ಇಂದಿರಾ ಬಳಿಕ ನಿರ್ಮಲಾ!
ಚುನಾವಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಯ ಸರಕಾರ ರಚನೆಯಾದ ಬಳಿಕ ನಿರ್ಮಲಾ ಸೀತಾರಾಮನ್‌ ಹಣಕಾಸು ಸಚಿವರಾಗಿ 2019-20ರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವ ಮೂಲಕ ತಮ್ಮ ಬಜೆಟ್‌ ಮಂಡನೆ ಪರ್ವಕ್ಕೆ ನಾಂದಿ ಹಾಡಿದ್ದರು. 1970-71ರಲ್ಲಿ ಕೇಂದ್ರ ಬಜೆಟ್‌ ಮಂಡಿಸುವ ಮೂಲಕ ಇಂದಿರಾ ಗಾಂಧಿ ಅವರು, ದೇಶದ ಮೊತ್ತಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ ಸರಿಸುಮಾರು ಐದು ದಶಕಗಳ ಬಳಿಕ ನಿರ್ಮಲಾ ಸೀತಾರಾಮನ್‌ ಅವರಿಗೆ ಬಜೆಟ್‌ ಮಂಡನೆಯ ಅವಕಾಶ ಲಭಿಸಿತ್ತು.

ಟಾಪ್ ನ್ಯೂಸ್

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Budget  2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

MONEY GONI

Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.