ಮೋದಿ ಸರಕಾರ 2.0 : ಸಾಧನೆ, ಸಾಹಸ, ಕೊಡುಗೆ


Team Udayavani, May 30, 2021, 6:55 AM IST

ಮೋದಿ ಸರಕಾರ 2.0 : ಸಾಧನೆ, ಸಾಹಸ, ಕೊಡುಗೆ

2019 ಮೇ 30ಕ್ಕೆ ನರೇಂದ್ರ ಮೋದಿಯವರ ಸರಕಾರ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನ. ಇಂದಿಗೆ ಹಲವು ಸವಾಲುಗಳ ನಡುವೆ ಮೋದಿ ಸರಕಾರ ಎರಡನೇ ಅವಧಿಯ ಎರಡನೇ ವರ್ಷ ಸೇರಿ ಒಟ್ಟು ಏಳು ವರ್ಷಗಳನ್ನು ಪೂರೈಸಿದೆ. ಎರಡನೇ ವರ್ಷ ಅಧಿಕಾರ ಸ್ವೀಕರಿಸಿದ ಕೂಡಲೇ ತಾನು ಹಿಂದೆ ನೀಡಿದ್ದ ವಾಗ್ಧಾನಗಳನ್ನು ಪೂರೈಸುವತ್ತ ಹೆಜ್ಜೆಯಿಟ್ಟಿತು. ಆ ನಿಟ್ಟಿನಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆತ, ರಾಮಮಂದಿರ ವಿವಾದವನ್ನು ಇತ್ಯರ್ಥ, ತ್ರಿವಳಿ ತಲಾಖ್‌ ರದ್ದತಿ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಹೊತ್ತಿಗೆ ದೇಶ ದೇಶ ಕೊರೊನಾಬಾಧೆಗೆ ತುತ್ತಾಯಿತು. ಈ ಸವಾಲನ್ನು ಸಮರ್ಥವಾಗಿ ಮೆಟ್ಟುತ್ತಲೇ ದೇಶದ ಸಮಗ್ರ ಬೆಳವಣಿಗೆಯತ್ತ ಮೋದಿ ಸರಕಾರ ದಾಪುಗಾಲಿಟ್ಟಿದೆ. ಇದೇ ಮೇ 30ರಂದು ಮೋದಿ 2.0 ಸರಕಾರಕ್ಕೆ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಈವರೆಗೆ ಸರಕಾರದ ಸಾಧನೆಯ ಪಕ್ಷಿನೋಟ ಇಲ್ಲಿದೆ.

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು
ಮೋದಿ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತಲೇ ತಾನು ಹಿಂದೆ ನೀಡಿದ್ದ ವಾಗ್ಧಾನವೊಂ ದನ್ನು ಅಧಿಕಾರಕ್ಕೆ ಬಂದ 100 ದಿನಗಳೊಳಗಾಗಿ ಪೂರೈಸಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಕಲಂ ಅನ್ನು ಹಿಂಪಡೆದಿದ್ದಲ್ಲದೆ, ಆ ರಾಜ್ಯವನ್ನು ಲಡಾಖ್‌ ಹಾಗೂ ಜಮ್ಮು- ಕಾಶ್ಮೀರ ಎಂಬ ಎರಡು ಕೇಂದ್ರಾ ಡಳಿತ ಪ್ರದೇಶಗಳನ್ನಾಗಿಸ ಲಾಯಿತು. ಆಗ, ಎದುರಾದ ಅಂತಾ ರಾಷ್ಟ್ರೀಯ ಒತ್ತಡ ನಿಭಾಯಿಸುವ ಜತೆಯಲ್ಲಿ ದೇಶದಲ್ಲಿ ಹಿಂಸಾಚಾರಗಳು ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.

ರಾಮಮಂದಿರ ವಿವಾದ ಇತ್ಯರ್ಥ
2019ರಲ್ಲಿ ರಾಮಮಂದಿರ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಬೀಳುವುದಕ್ಕೂ ಮುನ್ನ ದೇಶಾದ್ಯಂತ ಯಾವುದೇ ಮತೀಯ ಗಲಭೆಗಳು ನಡೆಯದಂತೆ ಸೂಕ್ತ ವೇದಿಕೆಯನ್ನು ಸೃಷ್ಟಿಸಲಾಯಿತು. ತೀರ್ಪು ಹೊರಬೀಳಲು ಕೆಲವು ದಿನಗಳ ಮುನ್ನವೇ ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಕೇಂದ್ರ ಗೃಹ ಸಚಿವ ಅಮಿತ್‌ ಮುಂತಾದವರು ಪರಿಸ್ಥಿತಿ ಯ ಸೂಕ್ಷ್ಮತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಮುಸ್ಲಿಮ ರಿಗೆ ಅನ್ಯಾಯವಾಗದಂತೆ ಭರವಸೆ ಕೊಟ್ಟರು. ಈ ಎಲ್ಲ ಕ್ರಮಗಳಿಂದ ಆ ಅಪಾಯ ಕಾರಿ ಪರಿಸ್ಥಿತಿಯನ್ನು ಜಾಣ್ಮೆಯಿಂದ ಸರಾಗವಾಗಿ ನಿಭಾಯಿಸಲಾಯಿತು.

ಚೀನಕ್ಕೆ ತಕ್ಕ ಪಾಠ
ಗಡಿಯಲ್ಲಿ ಪದೇ ಪದೇ ಕ್ಯಾತೆ ತಗೆಯುವ ಚೀನಕ್ಕೆ ತಕ್ಕ ಪಾಠ ಕಲಿಸುವ ಸಲುವಾಗಿ, ಕೇಂದ್ರ ಸರಕಾರ ಹಲವಾರು ಕ್ರಮ ಕೈಗೊಂಡಿದೆ. ದೇಶ ದಲ್ಲಿ ಚಾಲ್ತಿಯಲ್ಲಿದ್ದ ಚೀನ ಮೂಲದ ಕಂಪೆನಿ ಗಳನ್ನು ಹೊಡೆದೋಡಿಸುವ ಆಗ್ರಹ ಜೋರಾಗಿದ್ದರಿಂದ ಚೀನ ಮೂಲದ 267 ಮೊಬೈಲ್‌ ಆ್ಯಪ್‌ಗ್ಳಿಗೆ ನಿರ್ಬಂಧ ವಿಧಿಸಲಾಯಿತು. ಚೀನ ಹೂಡಿಕೆ ನಿರ್ಬಂಧಿಸುವ ಸಲುವಾಗಿ, ಭಾರತ ನೆರೆಯ ದೇಶಗಳಿಂದ ಬರುವ ಹೂಡಿಕೆಗಳು ಕೇಂದ್ರದ ಅನುಮತಿ ಪಡೆದ ನಂತರವಷ್ಟೇ ದೇಶದ ವಾಣಿಜ್ಯ ವಲಯ ಪ್ರವೇಶಿಸಬೇಕೆಂಬ ನಿಯಮ ಜಾರಿಗೊಳಿಸಲಾಯಿತು.

ವಿವಾದ್‌ ಸೇ ವಿಶ್ವಾಸ್‌
ತೆರಿಗೆ ವಿವಾದಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ 2020-21ರ ಬಜೆಟ್‌ನಲ್ಲಿ ಘೋಷಿಸಲಾಗಿರುವ ಸೌಲಭ್ಯ. ಇದರಡಿ, 2020ರ ಮಾ. 31ರವರೆಗಿನ ತೆರಿಗೆ ವ್ಯಾಜ್ಯಗಳನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸುವರ್ಣಾವಕಾಶ.

ಕೃಷಿ ವಲಯಕ್ಕೆ ಚೇತನ
ಈ ವಲಯ ದೇಶದ ಬೆನ್ನೆಲುಬು ಎಂಬುದನ್ನು ಅರಿತಿರುವ ಕೇಂದ್ರ ಸರಕಾರ, 2024ರ ಹೊತ್ತಿಗೆ ರೈತರ ಆದಾಯವನ್ನು
ದ್ವಿಗುಣಗೊಳಿಸುವ ತನ್ನ ಹಿಂದಿನ ಗುರಿ ಈಡೇರಿಸುವಲ್ಲಿ ಬದ್ಧವಾಗಿದೆ. ಆ ನಿಟ್ಟಿನಲ್ಲಿ 2021ರ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಗಳಲ್ಲೇ (ಎಪಿಎಂಸಿ) ಮಾರುವುದು ಕಡ್ಡಾಯವೇನಿಲ್ಲ. ದೇಶದ ಯಾವ ಮೂಲೆಗಾದರೂ ತಮ್ಮ ಬೆಳೆ ಕೊಂಡೊಯ್ದು ಮಾರಾಟ ಮಾಡಬಹುದು. ಅದಕ್ಕೆ ಬೇಕಾದ ಮೂಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಕೃಷಿ ಕಾಯ್ದೆಯಲ್ಲಿ ಕ್ರಮ ಕೈಗೊಳ್ಳ ಲಾಗಿದೆ. 2019ರಲ್ಲೇ ರೈತರಿಗೆ ಮಾಸಿಕ 3,000 ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಮಾನ್‌-ಧನ್‌ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ವಿಲೀನ ಪ್ರಮುಖ ಬ್ಯಾಂಕ್‌ ಗಳ ವಿಲೀನದಿಂದ ಆ ಕ್ಷೇತ್ರದ ಅಸ್ಥಿರತೆ ನಿವಾರಿಸ ಲಾಗಿದೆ. ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ಪಿಎನ್‌ಬಿಗೆ, ಸಿಂಡಿಕೇಟ್‌ ಬ್ಯಾಂಕ್‌, ಕೆನರಾಬ್ಯಾಂಕ್‌ಗೆ, ಆಂಧ್ರ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡವು.

ಕೈಗಾರಿಕಾ ವಲಯ
ದೇಶವನ್ನು ಮೊಬೈಲ್‌, ಟ್ಯಾಬ್‌, ಎಲ್‌ಇಡಿ ಪರದೆ ಹಾಗೂ ಹಾರ್ಡ್‌ ವೇರ್‌ ಉತ್ಪಾದನೆಯ ಸ್ಪರ್ಗವನ್ನಾಗಿಸುವ ಉದ್ದೇಶ ದಿಂದ ಈ ವಲಯಗಳಿಗೆ ಉತ್ಪಾದನ ಆಧಾರಿತ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ನಷ್ಟದ ಕೈಗಾರಿಕೆಗ‌ಳ ಪುನಶ್ಚೇತನಕ್ಕಾಗಿ ಬಂಡವಾಳ ಹಿಂತೆಗೆತ ಮೊತ್ತವನ್ನು ಹೆಚ್ಚಸಲಾಗಿದೆ.

ಮೂಲಸೌಕರ್ಯ
ಹೊಸ ಹೆದ್ದಾರಿಗಳ ನಿರ್ಮಾಣದಂಥ ಯೋಜನೆಗಳಲ್ಲಿ ಶೇ. 88ರಷ್ಟು ಪ್ರಗತಿ ಸಾಧಿಸಿದೆ. ಇದಲ್ಲದೆ, ವಿಶ್ವದ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ, ಹಿಮಾಚಲ ಪ್ರದೇಶದ ಲೇಹ್‌ ಹಾಗೂ ಮನಾಲಿಯನ್ನು ಸಂಪರ್ಕಿಸುವ ಹೆದ್ದಾರಿಯ ನಡುವೆ ನಿರ್ಮಿಸಲಾಗಿರುವ ಅಟಲ್‌ ಸುರಂಗ ಮಾರ್ಗ ಕಟ್ಟಿ ಭಾರತದ ತಾಕತ್ತನ್ನು ಪರಿಚಯಿಸಲಾಗಿದೆ.

ವೈಜ್ಞಾನಿಕ ಕ್ಷೇತ್ರ
ಇಸ್ರೋ ಖಾಸಗಿ ಸಹಭಾಗಿತ್ವದ ಅವಕಾಶ ಕಲ್ಪಿಸುವ ಮೂಲಕ ಆ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಇಸ್ರೋಗೆ ಆದಾಯ ಹೆಚ್ಚಾಗಿ, ಅದರ ಮೇಲಿನ ಹೊರೆಯೂ ಕಡಿಮೆಯಾಗಲಿದೆ. 2022ರಲ್ಲಿ ಉದ್ದೇಶಿತ ಮಾನವ ಸಹಿತ ಗಗನಯಾನ ಕೈಗೊಳ್ಳಲು ಫ್ರಾನ್ಸ್‌, ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಯುಎಪಿಎ
ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರಕಾರ, ತಿದ್ದುಪಡಿಗೊಂಡ ಕಾಯ್ದೆಯ ಅನುಷ್ಠಾನಕ್ಕಾಗಿ ಸರ್ಕಾರಿ ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಕಲ್ಪಿಸಿತು. ಇದರ ವಿರುದ್ಧ ವಿಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದವು. ಆದರೆ, ಉಗ್ರವಾದವನ್ನು ಮಟ್ಟಹಾಕಲು ಇದು ಅತ್ಯಂತ ಮಹತ್ವದ ಹೆಜ್ಜೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದನ್ನು ಸಮರ್ಥಿಸಿಕೊಂಡರು. ಯಾವುದೇ ವ್ಯಕ್ತಿಯು ಉಗ್ರವಾದ ಚಟುವಟಿಕೆಯಲ್ಲಿ ನಿರತನಾಗಿದ್ದಾನೆಂಬ ಗುಮಾನಿಯ ಮೇಲೆ ಆ ವ್ಯಕ್ತಿಯನ್ನು ಬಂಧಿಸುವ ಹಾಗೂ ಆತನ ಆಸ್ತಿಯನ್ನು ವಶಕ್ಕೆ ಪಡೆಯುವ ಅವಕಾಶ ಈ ತಿದ್ದುಪಡಿಯಲ್ಲಿದೆ.

ಪೌರತ್ವ ಕಾಯ್ದೆ
ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿರುವ ಮುಸ್ಲಿಮೇತರ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಉದ್ದೇಶದಿಂದ ರಾಷ್ಟ್ರೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದು ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮಾಡಿದ್ದ ವಾಗ್ಧಾನ. ಇದರಿಂದ ದೇಶದಲ್ಲಿ ಗಲಭೆಗಳು ಎದ್ದವು. ವಿಪಕ್ಷಗಳು ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದವು. ಅದಾಗಲೇ ವಿವಾದವೆಬ್ಬಿಸಿದ್ದ ರಾಷ್ಟ್ರೀಯ ನಾಗರಿಕರ ನೋಂದಾವಣಿ (ಎನ್‌ಆರ್‌ಸಿ) ವಿಚಾರದೊಂದಿಗೆ ಪೌರತ್ವ ಕಾಯ್ದೆಯನ್ನು ಥಳಕು ಹಾಕಲಾಯಿತು. ಆದರೆ, ಇದ್ಯಾವುದಕ್ಕೂ ಜಗ್ಗದ ಸರಕಾರ ದೃಢಮನಸ್ಸಿನಿಂದ ಇದನ್ನು ಜಾರಿಗೊಳಿಸಿತು.

ಶಿಕ್ಷಣ ಕ್ಷೇತ್ರ
2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶದ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ನೀಡಲು ಹಾಗೂ ಆಧುನಿಕ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಈವರೆಗಿನ 10+ 2 ಶಿಕ್ಷಣ ಪದ್ಧತಿಯನ್ನು ( ಬದಲಿಸಿ, 5+3+3+4 ಎಂದು (ಮಕ್ಕಳ ಅಂಗನವಾಗಿ, ಪ್ರೀ ನರ್ಸರಿ, ನರ್ಸರಿ, 1 ಹಾಗೂ 2ನೇ ತರಗತಿಯ 5 ವರ್ಷ ಅಡಿಪಾಯ ಶಿಕ್ಷಣ+ ಮೂರರಿಂದ 5ನೇ ತರಗತಿವರೆಗೆ ಪೂರ್ವಭಾವಿ ಶಿಕ್ಷಣ + 6ರಿಂದ 8ನೇ ತರಗತಿವರೆಗೆ ಮಾಧ್ಯಮಿಕ ಶಿಕ್ಷಣ + 8ರಿಂದ 12ನೇ ತರಗತಿವರೆಗೆ ಪ್ರೌಢಶಿಕ್ಷಣವೆಂದು ಹೆಸರಿಸಲಾಗಿದೆ.

ರಕ್ಷಣ ವಲಯ
ರಕ್ಷಣ ವಲಯದಲ್ಲಿ ಇದ್ದ ವಿದೇಶಿ ಹೂಡಿಕೆಯ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಹೆಚ್ಚಿಸುವ ಮೂಲಕ ಡಸಾಲ್ಟ್ ಏವಿಯೇಷನ್‌ನಂಥ ದೈತ್ಯ ಯುದ್ಧ ಸಲಕರಣೆಗಳನ್ನು ತಯಾರಿಸುವ ಕಂಪೆನಿಗಳು ಭಾರತದಲ್ಲಿ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗಿದೆ. ರಕ್ಷಣ ಸಲಕರಣೆಗಳ ವಿಚಾರದಲ್ಲಿ ಭಾರತ ವನ್ನು ಸ್ವಾವಲಂಬಿಯಾಗಿಸುವುದು ಇದರ ಮೂಲ ಉದ್ದೇಶ.

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.