15 ತಿಂಗಳ ಮಗುವಿನ ಮೇಲೆ ಹೆತ್ತ ತಾಯಿಯ ಕ್ರೌರ್ಯ! ಪತಿಯಿಂದಲೇ ಬಯಲಾಯಿತು ವಿಡಿಯೋ
Team Udayavani, Aug 18, 2020, 1:09 PM IST
ಭುವನೇಶ್ವರ (ಒಡಿಶಾ): ಹದಿನೈದು ತಿಂಗಳ ಮುಗ್ದ ಮಗುವಿನ ಮೇಲೆ ಹೆತ್ತ ತಾಯಿಯೇ ಕ್ರೌರ್ಯ ಮೆರೆದ ವಿಡಿಯೋವೊಂದನ್ನು ಪತಿಯೇ ಸಾಮಾಜೀಕ ಜಾಲತಾಣಕ್ಕೆ ಹಾಕಿದ್ದು ಇದೀಗ ಮಹಾ ತಾಯಿಯ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಘಟನೆ ಒಡಿಶಾದ ಪುರಿ ಜಿಲ್ಲೆಯ ಗೋಪ್ ನಗರದಲ್ಲಿ ನಡೆದಿದ್ದು ಘಟನೆಯಲ್ಲಿ ತಾಯಿ ತನ್ನ ಮುಗ್ದ ಮಗುವಿನ ಮೇಲೆ ಮೃಗದಂತೆ ವರ್ತಿಸುತ್ತಿರುವ ವಿಡಿಯೋ ಪತಿ ತನ್ನ ಮನೆಗೆ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪತಿಯ ಹೇಳಿಕೆಯ ಪ್ರಕಾರ ತನ್ನ ಪತ್ನಿ ಕಳೆದ ಕೆಲವು ದಿನಗಳಿಂದ ಈ ರೀತಿಯ ಕ್ರೌರ್ಯ ನಡೆಸುತ್ತಿದ್ದು ಕೇವಲ ಮಗುವಿನ ಮೇಲೆ ಮಾತ್ರ ಅಲ್ಲದೆ ನನ್ನ ತಂದೆ ತಾಯಿಯ ಮೇಲೂ ಆಕೆ ಹಲ್ಲೆಯನ್ನು ನಡೆಸಿದ್ದಾಳೆ ಇದರಿಂದ ಚಿಂತೆಗೆ ಒಳಗಾಗಿ ನಾನು ಮನೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದೇನೆ ಎಂದು ಪತಿ ಪೋಲೀಸರ ಮುಂದೆ ಅಲವತ್ತುಕೊಂಡಿದ್ದಾನೆ.
ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಈ ರೀತಿ ನಾನು ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸುವುದಲ್ಲ ಬದಲಾಗಿ ನನಗೆ ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಕೊಡುತ್ತಿಲ್ಲ ಹಸಿವಿನಿಂದ ಮಾನಸಿಕವಾಗಿ ಮಗು ಹಾಗೂ ಅತ್ತೆ ಮೇಲೆ ಹಲ್ಲೆ ನಡೆಸುವುದಾಗಿ ಹೇಳಿಕೊಂಡಿದ್ದಾಳೆ. ಮಗು ಹಸಿವಿನಿಂದ ಅಳುತ್ತದೆ ಆದರೆ ಮನೆಯಲ್ಲಿ ನನಗೆ ಏನೂ ಕೊಡಲ್ಲ ಮಗುವಿಗೆ ಏನು ತಿನ್ನಿಸಲಿ ಎಂದು ಪೋಲೀಸರ ಮುಂದೆ ಮಹಿಳೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಇಷ್ಟೆಲ್ಲ ಆದರೂ ಮಹಿಳೆಯ ಹೇಳಿಕೆಯನ್ನು ಪತಿ, ಅತ್ತೆ ಈ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಸ್ಥಳೀಯ ಪೊಲೀಸರಿಗೆ ಇಬ್ಬರ ಹೇಳಿಕೆಯು ತಲೆನೋವಾಗಿ ಹೋಗಿದ್ದು, ಪೊಲೀಸರು ಈ ವಿಚಾರವಾಗಿ ತನಿಖೆಯನ್ನು ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.