Monsoon season; ಮಳೆಗಾಲದಲ್ಲಿ ಆರೋಗ್ಯದ ಕಡೆಗೂ ಗಮನಹರಿಸಬೇಕು…
ಜೀರಿಗೆ, ಅರಿಶಿಣ ಮತ್ತು ಕೊತ್ತಂಬರಿಗಳನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು.
Team Udayavani, Jun 10, 2023, 5:15 PM IST
ಋತು ಬದಲಾದಂತೆ ಆ ಋತುವಿಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳದೇ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಚಳಿಗಾಲ, ಬೇಸಗೆಕಾಲಕ್ಕಿಂತಲೂ ಹೆಚ್ಚಿನ ಕಾಳಜಿ ಮಳೆಗಾಲದಲ್ಲಿ ಅಗತ್ಯವಿದೆ. ಮಳೆಯನ್ನು ಸಂಭ್ರಮಿಸುವುದರೊಂದಿಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳೂ ಹೆಚ್ಚು. ಈ ವೇಳೆ ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀರಿನಿಂದ ಹರಡುವ ರೋಗಗಳಾದ ಡಯೇರಿಯಾ, ಕಾಲರಾ, ಜಠರ ಸಮಸ್ಯೆ, ಭೇದಿ ಹಾಗೂ ಸಾಮಾನ್ಯ ಶೀತ, ಜ್ವರ ಮತ್ತು ಸೊಳ್ಳೆಗಳಿಂದ ಉಂಟಾಗುವ ಡೆಂಘೀ ಮತ್ತು ಮಲೇರಿಯಾ ಮಳೆಗಾಲದ ಸಾಮಾನ್ಯ. ಹೀಗಾಗಿ ಆರೋಗ್ಯ ಸಮಸ್ಯೆಗಳಾಗಿವೆ. ಮಳೆಗಾಲದ ಸೋಂಕಿನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮ ಅತೀ ಮುಖ್ಯವಾಗಿದೆ.
ಪರಿಸರ ಸ್ವಚ್ಛವಾಗಿಡಿ
ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ನಾವು ಇರುವಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವುದು. ಸೊಳ್ಳೆಗಳಿಂದ ರೋಗಗಳು ಹರಡುತ್ತವೆ. ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿವಹಿಸ ಬೇಕಾಗುತ್ತದೆ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ ಅಥವಾ ಕಿಟಕಿಗಳಿಗೆ ಸೊಳ್ಳೆ ಪರೆದಯನ್ನು ಹಾಕಿ, ಮನೆಗೆ ಸೊಳ್ಳೆ ಪ್ರವೇಶಿಸದಂತೆ ತಡೆಯಿರಿ. ಸೊಳ್ಳೆಗಳಿಂದ ಡೆಂಗ್ಯು, ಮಲೇರಿಯ, ಚಿಕನ್ ಗುನ್ಯಾ, ಆನೆ ಕಾಲು ರೋಗಗಳು ಮತ್ತು ನೊಣಗಳಿಂದ ಕಾಲರಾ ಹರಡುತ್ತದೆ.
ಮುನ್ನೆಚ್ಚರಿಕೆಗಳು ಕ್ರಮ ಸೂಕ್ತ ಆಹಾರ ಸೇವಿಸಿ
ಮಳೆಗಾಲದಲ್ಲಿ ನೀರಿನಿಂದ ಯಾವ ರೀತಿಯ ರೋಗಗಳು ಹರಡುತ್ತವೆ ಎಂದು ಊಹಿಸುವುದು ಬಹಳ ಕಷ್ಟ. ಹೀಗಾಗಿ ಹೊರಗಿನ ಆಹಾರಗಳನ್ನು ಸೇವಿಸುವುದು ಕಡಿಮೆ ಮಾಡುವುದು ಉತ್ತಮ. ದೇಹದ ರೋಗನಿರೋಧಕತೆ ಹೆಚ್ಚಿಸಲು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ರೋಗಾಣುಗಳ ಬಾಧೆ ನಿವಾರಿಸಲು ಬೇಯಿಸುವ ಮುನ್ನ ತರಕಾರಿ, ಸೊಪ್ಪುಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ತೊಳೆಯುವುದು ಉತ್ತಮ. ಬಿಸಿಯಾದ ಆಹಾರ ಸೇವಿಸಬೇಕು. ಗಿಡಮೂಲಿಕೆಗಳ ಚಹಾವನ್ನು ಸೇವಿಸಬೇಕು. ಸಾಕಷ್ಟು ಶುದ್ಧ ನೀರನ್ನು ಕುಡಿಯಿರಿ. ಬೆಳ್ಳುಳ್ಳಿ, ಕೆಂಪು ಮೆಣಸು ಶುಂಠಿ, ಇಂಗು, ಜೀರಿಗೆ, ಅರಿಶಿಣ ಮತ್ತು ಕೊತ್ತಂಬರಿಗಳನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು.
ಮನೆ ಮದ್ದು
ಮಳೆಗಾಲದಲ್ಲಿ ಶೀತ, ಕೆಮ್ಮು , ತಲೆನೋವು ಸಾಮಾನ್ಯವಾಗಿರುತ್ತದೆ. ಒಬ್ಬರಿಗೆ ಬಂದರೆ ಸಾಕು ಮನೆ ಮಂದಿಯನ್ನೆಲ್ಲಾ ಕಾಡುತ್ತದೆ. ಹಾಗಾಗಿ ನೆಗಡಿ, ಕೆಮ್ಮು ಬಾರದಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸುವುದು ಮುಖ್ಯ. ಕೆಮ್ಮು, ನೆಗಡಿ ಉಂಟಾದರೆ ಮನೆಯಲ್ಲಿಯೇ ಔಷಧಿ ತಯಾರಿಸಿಕೊಂಡು ಗುಣಮುಖರಾಗಬಹುದು.
· ತುಳಸಿ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ನೆಗಡಿ, ಕೆಮ್ಮು ಬರುವುದಿಲ್ಲ.
· ಅಲರ್ಜಿ ಸಮಸ್ಯೆ ಇದ್ದರೆ ಕರವಸ್ತ್ರಕ್ಕೆ ನೀಲಗಿರಿ ಎಣ್ಣೆ ಹಾಕಿ ವಾಸನೆ ತೆಗೆದುಕೊಳ್ಳಿ. ಇದರಿಂದ ಸೀನು ಬರುವುದಿಲ್ಲ.
· ಮುಖ ತೊಳೆಯಲು, ಸ್ನಾನ ಮಾಡಲು ಬಿಸಿನೀರನ್ನೇ ಬಳಸಿ.
· ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮಾಡಿ ಅದಕ್ಕೆ ತುಳಸಿ ರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮೊದಲು ಸೇವಿಸಿ.
· ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಮತ್ತು ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯಿರಿ.
· ಶುಂಠಿ ಕಾಫಿ ಮಾಡಿ ಕುಡಿದರೆ ಶೀತ, ಕೆಮ್ಮು, ತಲೆ ನೋವು ಕಡಿಮೆಯಾಗುತ್ತದೆ. ಕಾಫಿ ಕುಡಿಯದವರು, ಶುಂಠಿ ಸೇರಿಸಿ ಟೀ ಮಾಡಿ ಕುಡಿಯಬಹುದು.
ನಮ್ಮ ಆರೋಗ್ಯ ರಕ್ಷಣೆ ನಮ್ಮ ಹೊಣೆ
ಸಾಧಾರಣವಾಗಿ ಮಳೆಗಾಲದಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ.ಎಂಬುದಾಗಿ ಎಲ್ಲರಿಗೂ ತಿಳಿದಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿರಿಸುವುದರಿಂದ ಮಳೆಗಾಲದ ಸಮಸ್ಯಗಳಿಂದ ದೂರವಿರಲು ಸಾಧ್ಯ. ಒಂದು ವೇಳೆ ತುಂಬಾ ದಿನದಿಂದ ಜ್ವರ, ಶೀತ ಕಡಿಮೆಯಾಗದೆ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.
– ಡಾ| ರಾಕೇಶ್ ವೈದ್ಯರು
ಶುದ್ಧೀಕರಿಸಿದ ನೀರು
ಮಳೆಗಾದಲ್ಲಿ ಮನೆ ಹೊರಗಡೆ ನೀರು ಸೇವಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಮನೆಯಲ್ಲಿ ನೀರು ಕುಡಿಯುವ ಮುನ್ನ ಬಿಸಿ ಮಾಡಿ ಅಥವಾ ಶುದ್ಧೀಕರಿಸಿದ ನೀರನ್ನು ಕುಡಿಯುವುದು ಉತ್ತಮ. ಹೊರ ಭಾಗಗಳಿಗೆ ಹೋಗುವ ಬಾಟಲಿಗಳಲ್ಲಿ ನೀರು ಕೊಂಡೊಯ್ಯುವುದು ಉತ್ತಮ. ಇದರಿಂದ ನೀರಿನಿಂದ ಉಂಟಾಗುವ ರೋಗಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
ದೇಹ ಶುದ್ಧವಾಗಿಟ್ಟುಕೊಳ್ಳಿ
ಮಳೆಗಾಲದಲ್ಲಿ ದೇಹವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕೈಗಳನ್ನು ಆಗಾಗಾ ತೊಳೆದುಕೊಳ್ಳುತ್ತಿರಬೇಕು ಅಥವಾ ಕೈ ಸ್ವತ್ಛವಾಗಿರಿಸಿಕೊಳ್ಳಲು ಸ್ಯಾನಿಟೆ„ಸರ್ ಬಳಸಿಕೊಳ್ಳಬೇಕು. ಬಹುತೇಕ ಸಂದರ್ಭದಲ್ಲಿ ಸೋಂಕುಗಳು ಕೊಳೆಯಾದ ಕೈಗಳ ಮೂಲಕವೇ ಹರಡುವುದರಿಂದ ದೇಹವನ್ನು ಶುಚಿಯಾಗಿರಿಸಿಕೊಳ್ಳುವುದು.
- ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.