ಚಂದ್ರನಲ್ಲಿದೆ 1 ಲಕ್ಷ ವರ್ಷಕ್ಕೆ ಬೇಕಾದ ಆಮ್ಲಜನಕ?

ಭೂಮಿಯಿಂದ 9 ಮಿಲಿಯನ್‌ ಮೈಲುಗಳ ದೂರದಲ್ಲಿ ಸೂರ್ಯನ ಸುತ್ತಲೂ ಈಗಲೂ ಸುತ್ತುತ್ತಿದೆ

Team Udayavani, Nov 13, 2021, 11:09 AM IST

ಚಂದ್ರನಲ್ಲಿದೆ 1 ಲಕ್ಷ ವರ್ಷಕ್ಕೆ ಬೇಕಾದ ಆಮ್ಲಜನಕ?

ಲಿಸ್ಮೋರ್‌ (ಆಸ್ಟ್ರೇಲಿಯಾ): ಆಧುನಿಕ ಖಗೋಳ ವಿಜ್ಞಾನವು, ಭೂಮಿಯ ಸುತ್ತಲೂ ಸುತ್ತುವ ಚಂದ್ರನ ಬಗ್ಗೆ ಎರಡು ಕುತೂಹಲಕರ ವಿಚಾರವನ್ನು ಪತ್ತೆ ಹಚ್ಚಿವೆ. ಮೊದಲನೆಯದಾಗಿ, ಚಂದ್ರನಲ್ಲಿರುವ ಆಮ್ಲಜನಕ, ಅಲ್ಲಿರುವ ಬಂಡೆಗಳು ಹಾಗೂ ಮಣ್ಣಿನ ಕಣಗಳಲ್ಲಿ ಘನರೂಪದಲ್ಲಿ ಅಡಕವಾಗಿದೆ ಎಂಬುದು ಹಾಗೂ ಕೋಟ್ಯಂತರ ವರ್ಷಗಳ ಹಿಂದೆ ಚಂದ್ರನಿಂದ ಸಿಡಿದಿದ್ದ ಚೂರೊಂದು ಈಗಲೂ ಸೂರ್ಯನ ಸುತ್ತಲೂ ಸುತ್ತುತ್ತಿದೆ. ಈ ಎರಡೂ ವಿಚಾರಗಳನ್ನು
ಮುಂದಿಟ್ಟುಕೊಂಡು ವಿಜ್ಞಾನಿಗಳು ಮತ್ತಷ್ಟು ಸಂಶೋಧನೆಗಳತ್ತ ಮುಂದಾಗಿದ್ದಾರೆ.

ಚಂದ್ರನಲ್ಲಿರುವ ಆಮ್ಲಜನಕವು ಬಂಡೆಗಳಲ್ಲಿ, ಮಣ್ಣಿನಲ್ಲಿ ಅಡಗಿರುವುದರಿಂದ ಅದನ್ನು ಅನಿಲ ರೂಪವಾಗಿ ಪರಿವರ್ತಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು ಅಮೆರಿಕ ಹಾಗೂ ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಇದು ಸಾಧ್ಯವಾದರೆ, ಆ ಗ್ರಹದಲ್ಲಿ ಸುಮಾರು 800 ಕೋಟಿ ಜನರು, 1 ಲಕ್ಷ ವರ್ಷಗಳವರೆಗೆ ಜೀವಿಸುವಷ್ಟು ಆಮ್ಲಜನಕವು ಉಸಿರಾಟಕ್ಕೆ ಲಭ್ಯವಾಗಲಿದೆ ಎಂಬುದು ವಿಜ್ಞಾನಿಗಳ ಅಂದಾಜು.

ಈ ಬೃಹತ್‌ ಯೋಜನೆಗಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹಾಗೂ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಸಾಧ್ಯವಾದರೆ, ಕೆಲವು ದಶಕಗಳಲ್ಲಿ ಚಂದ್ರನು ವಾಸಯೋಗ್ಯವಾಗಬಹುದು.

ಸುತ್ತುತ್ತಿದೆ ಚಂದ್ರನ ಚೂರು!: ಕೋಟ್ಯಂತರ ವರ್ಷಗಳ ಹಿಂದೆ, ಮಂಗಳ ಗ್ರಹದಷ್ಟು ಬೃಹದಾಕಾರದ ಹೆಬ್ಬಂಡೆಯೊಂದು ಭೂಮಿಗೆ ಅಪ್ಪಳಿಸಿದ್ದರಿಂದಾಗಿ ಭೂಮಿಯ ಚೂರೊಂದು ಸಿಡಿದು ಚಂದ್ರನಾಗಿ ರೂಪುಗೊಂಡಿದೆ ಎಂಬ ಸಿದ್ಧಾಂತವನ್ನು ದಶಕಗಳ ಹಿಂದೆಯೇ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಆಗ ಸಂಭವಿಸಿದ ಘರ್ಷಣೆಯ ವೇಳೆ ಚಂದ್ರನಿಂದಲೇ ಸಿಡಿದ ಸಣ್ಣ ಚೂರೊಂದು 150 ಅಡಿ ಉದ್ದ ಹಾಗೂ 190 ಅಡಿ ಅಗಲವಿರುವ ಬಂಡೆಯು, ಭೂಮಿಯಿಂದ 9 ಮಿಲಿಯನ್‌ ಮೈಲುಗಳ ದೂರದಲ್ಲಿ ಸೂರ್ಯನ ಸುತ್ತಲೂ ಈಗಲೂ ಸುತ್ತುತ್ತಿದೆ ಎಂಬುದನ್ನು ಆ್ಯರಿಝೋನಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ವಿಭಾಗದ ಸಂಶೋಧಕರ ತಂಡವೊಂದು ಹೇಳಿದೆ.

ಅವರ ಸಂಶೋಧನಾ ಪ್ರಬಂಧ, “ನೇಚರ್‌ ಕಮ್ಯೂನಿಕೇಷನ್ಸ್‌’ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. 2016ರಲ್ಲೇ ಇದು ಪತ್ತೆಯಾಗಿತ್ತಾದರೂ, ಚಂದ್ರನಿಂದಲೇ ಸಿಡಿದಿರುವ ಚೂರು ಎಂಬುದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.