ಗಿರ್ ಅಭಯಾರಣ್ಯದಲ್ಲಿ ಎರಡು ವರ್ಷಗಳಲ್ಲಿ 240 ಕ್ಕೂ ಹೆಚ್ಚು ಸಿಂಹಗಳ ಸಾವು
Team Udayavani, Mar 1, 2023, 11:49 AM IST
ಅಹಮದಾಬಾದ್: ಏಷ್ಯಾಟಿಕ್ ಸಿಂಹಗಳಿಂದ ತುಂಬಿರುವ ದೇಶದ ಪ್ರಸಿದ್ಧ ಗಿರ್ ರಾಷ್ಟ್ರೀಯ ಉದ್ಯಾನವನವು ಕಳೆದ ಎರಡು ವರ್ಷಗಳಲ್ಲಿ 240 ಕ್ಕೂ ಹೆಚ್ಚು ಸಿಂಹಗಳನ್ನು ಕಳೆದುಕೊಂಡಿದೆ ಎಂಬ ಆಘತಕಾರಿ ಮಾಹಿತಿಯನ್ನು ಗುಜರಾತ್ ಸರ್ಕಾರ ಮಂಗಳವಾರ ಸದನದಲ್ಲಿ ಮಾಹಿತಿ ನೀಡಿದೆ.
ಗಿರ್ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ವರ್ಷಗಳಲ್ಲಿ 240 ಕ್ಕೂ ಹೆಚ್ಚು ಸಿಂಹಗಳು ಸಾವನ್ನಪ್ಪಿವೆ. ಇದರಿಂದಾಗಿ ಗಿರ್ ಅಭಯಾರಣ್ಯ ಸುಮಾರು 36% ಸಿಂಹಗಳನ್ನು ಕಳೆದುಕೊಂಡಂತಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.
2022 ರ ಡಿಸೆಂಬರ್ 31ಕ್ಕೆ ಅಂತ್ಯವಾಗುವಂತೆ ಗಿರ್ ಅಭಯಾರಣ್ಯ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ ಸಾವನ್ನಪ್ಪಿರುವ ಸಿಂಹಗಳ ಪೈಕಿ 128 ಸಿಂಹದ ಮರಿಗಳೂ ಕೂಡಿದೆ ಎಂದು ಹೇಳಿದೆ.
ಕಾಂಗ್ರೆಸ್ ಶಾಸಕ ಶೈಲೇಶ್ ಪರಾಮಾರ್ ಅವರು ಕೇಳಿದ ಪ್ರಶ್ನೆಗೆ ಮಂಗಳವಾರ ಸದನದಲ್ಲಿ ಗುಜರಾತ್ ಸರ್ಕಾರ ಉತ್ತರ ನೀಡಿದ್ದು, 2020ರ ವೇಳೆಗೆ ರಾಜ್ಯದಲ್ಲಿ ಸಿಂಹಗಳ ಸಂಖ್ಯೆ 674 ರಷ್ಟಿತ್ತು. 2015 ರಲ್ಲಿ 523ರಷ್ಟಿದ್ದ ಸಿಂಹಗಳ ಸಂಖ್ಯೆ ಐದು ವರ್ಷದಲ್ಲಿ ಸುಮಾರು 29% ಏರಿಕೆ ಕಂಡು 674 ತಲುಪಿತ್ತು ಎಂದು ಮಾಹಿತಿ ನೀಡಿದೆ.
ಅಲ್ಲದೇ, ರಾಜ್ಯ ಸರ್ಕಾರ ಕೇಂದ್ರದ ಬಳಿ 12 ವಿವಿಧ ಅಂಶಗಳನ್ನಿರಿಸಿ ಸಿಂಹಗಳ ಅಭಿವೃದ್ಧಿಗೆ ಅನುದಾನ ಕೇಳಿದ್ದು , ಕೇಂದ್ರ ಸರ್ಕಾರ ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳಿದೆ. ಆದರೆ ಅರಣ್ಯ ಅಧಿಕಾರಿಗಳು ಇದನ್ನು ಅಲ್ಲಗೆಳೆದಿದ್ದು, ಕೇಂದ್ರ ಸರ್ಕಾರ ʻಪ್ರಾಜೆಕ್ಟ್ ಲಯನ್ʼ ಯೋಜನೆಯ ಅಡಿಯಲ್ಲಿ ಅನುದಾನ ಒದಗಿಸಲಿದ್ದು ಪ್ರಕ್ರಿಯೆ ಜಾರಿ ಹಂತಕ್ಕೆ ತಲುಪಿದೆ ಎಂದು ಹೇಳಿದೆ.
ಅಂಕಿ ಅಂಶಗಳ ಪ್ರಕಾರ 2021 ರಲ್ಲಿ 124 ಸಿಂಹಗಳು ಮೃತಪಟ್ಟಿದ್ದು 2022ರಲ್ಲಿ 116 ಸಿಂಹಗಳು ಮೃತಪಟ್ಟಿದ್ದವು. ಅವುಗಳಲ್ಲಿ ಒಟ್ಟು 214 ಸಿಂಹಗಳು ಸ್ವಾಭಾವಿಕ ಕಾರಣಗಳಿಂದ ಪ್ರಾಣ ಕಳೆದುಕೊಂಡಿದ್ದರೆ, 26 ಸಿಂಹಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿದೆ ಎಂದು ಹೇಳಿದೆ.
ಸಿಂಹಗಳ ಅಸ್ವಾಭಾವಿಕ ಸಾವುಗಳನ್ನು ತಡೆಗಟ್ಟಲು ಗುಜರಾತ್ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಪಶುವೈದ್ಯರನ್ನು ನೇಮಿಸಿಕೊಂಡು ಆಂಬುಲೆನ್ಸ್ ಸೌಲಭ್ಯವನ್ನೂ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಮತ್ತು ಕುಟುಂಬಕ್ಕೆ ದೇಶ, ವಿದೇಶದಲ್ಲೂ ಝಡ್ ಪ್ಲಸ್ ಭದ್ರತೆ ನೀಡಿ: ಸುಪ್ರೀಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.