Kollywood: 2023ರ ಗೂಗಲ್ ಸರ್ಚ್‌ನಲ್ಲಿ ರಜಿನಿಕಾಂತ್‌ರನ್ನೇ ಮೀರಿಸಿದ ಈ ಕಾಲಿವುಡ್ ನಟ
Team Udayavani, Dec 12, 2023, 6:25 PM IST
ಚೆನ್ನೈ: ಕಾಲಿವುಡ್ ಸಿನಿಮಾರಂಗ ಈ ವರ್ಷ ಕೆಲ ಬಿಗ್ ಹಿಟ್ ಗಳನ್ನು ಕಂಡಿದೆ. ಸೂಪರ್ ಸ್ಟಾರ್ ಗಳ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಾಣುವುದರ ಜೊತೆ ಕಾಲಿವುಡ್ ಸೆಲೆಬ್ರಿಟಿಗಳು ಗೂಗಲ್ ಸರ್ಚ್ ನಲ್ಲೂ ಮುಂಚೂಣಿದ್ದಾರೆ.
2023 ರ ಸಾಲಿನಲ್ಲಿ ಕಾಲಿವುಡ್ ನ ಈ ಕೆಳಗಿನ ಸೂಪರ್ ಸ್ಟಾರ್ ನಟರನ್ನು ಜನ ಹೆಚ್ಚಾಗಿ ಗೂಗಲ್ ನಲ್ಲಿ ಹುಡುಕಿದ್ದಾರೆ.
ದಳಪತಿ ವಿಜಯ್: ದಳಪತಿ ವಿಜಯ್ ಅವರನ್ನು ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಜನ ಸರ್ಚ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕಾಲಿವುಡ್ ನಲ್ಲಿ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ. ಇದಕ್ಕೊಂದು ಕಾರಣವೆಂದರೆ ಈ ವರ್ಷ ವಿಜಯ್ ಅವರು ಕಾಣಿಸಿಕೊಂಡ ಎರಡು ಸಿನಿಮಾವೆಂದರೆ ತಪ್ಪಾಗದು. ವರ್ಷದ ಆರಂಭದಲ್ಲಿ ʼವಾರಿಸುʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಲೋಕೇಶ್ ಕನಕರಾಜ್ ಅವರ ʼಲಿಯೋʼ ದಲ್ಲಿ ವಿಜಯ್ ಕಾಣಿಸಿಕೊಂಡರು. ಈ ಸಮಯದಲ್ಲಿ ವಿಜಯ್ ಅವರನ್ನು ಜನ ಹೆಚ್ಚು ಬಾರಿ ಗೂಗಲ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್: 2023 ರಜಿನಿಕಾಂತ್ ಅವರಿಗೆ ಗೋಲ್ಡನ್ ಇಯರ್ ಎನ್ನಬಹುದು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಬಂದ ʼಜೈಲರ್ʼ ಕೋಟಿ ಕೋಟಿ ಗಳಿಸಿತು. ಇದರೊಂದಿಗೆ ರಜಿನಿಕಾಂತ್ ಹವಾ ಗೂಗಲ್ ಸರ್ಚ್ ನಲ್ಲೂ ಹೆಚ್ಚು ಕಾಣಿಸಿಕೊಂಡಿತು. ಈ ಪಟ್ಟಿಯಲ್ಲಿ ರಜಿನಿಕಾಂತ್ ಸೆಕೆಂಡ್ ಸ್ಪಾಟ್ ನಲ್ಲಿದ್ದಾರೆ.
ಧನುಷ್: ಕಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಧನುಷ್ ಅವರು ಗೂಗಲ್ ಸರ್ಚ್ ನಲ್ಲಿ ಮೂರನೇ ನಂಬರ್ ನಲ್ಲಿದ್ದಾರೆ. ಈ ವರ್ಷ ಅವರು ನಟಿಸಿದ ʼವಾತಿʼ ಸಿನಿಮಾ ಒಂದಷ್ಟು ಜನರಿಂದ ಮೆಚ್ಚುಗೆ ಪಡೆಯಿತು. ಇದರೊಂದಿಗೆ ಅವರ ಮುಂದಿನ ಸಿನಿಮಾ ʼಕ್ಯಾಪ್ಟನ್ ಮಿಲ್ಲರ್ʼ ಬಗ್ಗೆ ಜನ ಗೂಗಲ್ ನಲ್ಲಿ ಹುಡುಕಿದ ವೇಳೆ ಧನುಷ್ ಅವರ ಬಗ್ಗೆ ಗೂಗಲ್ ಮಾಡಿದ್ದಾರೆ.
ಅಜಿತ್ ಕುಮಾರ್: ನಟ ಅಜಿತ್ ಕುಮಾರ್ ಅವರು ಸಿನಿಮಾ ವಿಚಾರ ಮಾತ್ರವಲ್ಲದೆ ತನ್ನ ಬೈಕ್ ಜರ್ನಿಯ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಈ ವರ್ಷದ ಆರಂಭದಲ್ಲಿ ಅವರ ʼತುಣಿವುʼ ಸಿನಿಮಾ ತೆರೆಕಂಡಿತ್ತು. ಈ ಪಟ್ಟಿಯಲ್ಲಿ ಅಜಿತ್ 4ನೇ ಸ್ಥಾನದಲ್ಲಿದ್ದಾರೆ.
ಸೂರ್ಯ: ನಟ ಸೂರ್ಯ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ʼಜೈ ಭೀಮ್ʼ ನಟ ಈ ವರ್ಷ ಗೂಗಲ್ ಆಗಿರುವ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಅವರ ಮುಂದಿನ ಬಹು ನಿರೀಕ್ಷಿತ ʼ ಕಂಗುವʼ ಸಿನಿಮಾದ ವಿಚಾರದಲ್ಲಿ ಅವರು ಟ್ರೆಂಡ್ ಆಗಿದ್ದರು. ಹಾಗಾಗಿ ಅವರು ಗೂಗಲ್ ಇಯರ್ ಇನ್ ಸರ್ಚ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.