ಅಮ್ಮಂದಿರಲ್ಲಿ ಪುಟಿದೇಳಲಿ “ಮದಾಲಸಾ ಕಾಂಪ್ಲೆಕ್ಸ್‌ ’


Team Udayavani, Jul 4, 2021, 6:50 AM IST

ಅಮ್ಮಂದಿರಲ್ಲಿ ಪುಟಿದೇಳಲಿ “ಮದಾಲಸಾ ಕಾಂಪ್ಲೆಕ್ಸ್‌ ’

“ಅಮ್ಮ, ನಿನಗೇನು ಗೊತ್ತು? ನೀನು ಸ್ವಲ್ಪ ಸುಮ್ಮ ನಿರು!’ ಇದು ಹೆಚ್ಚಿನ ಮನೆಗಳಲ್ಲಿ ಐದು ವರ್ಷ ತುಂಬಿದ ಮಕ್ಕಳು ಮತ್ತು ಸುಮಾರು ಇಪ್ಪತೈದು ವರ್ಷಗಳೊಳಗಿನ ಯುವಕ ಯುವತಿಯರು ಅಮ್ಮ ನನ್ನು ನೂರಾರು ಬಾರಿಯಾದರೂ ಕೇಳುವ ಪ್ರಶ್ನೆ. ತನ್ನ ಅಮ್ಮನಷ್ಟು ಅಜ್ಞಾನಿ ಪ್ರಪಂಚದಲ್ಲಿ ಮತ್ಯಾರೂ ಇಲ್ಲ ಎನ್ನುವ ನಂಬಿಕೆ ಅವರದ್ದಾಗಿರುತ್ತದೆ. ಮಕ್ಕಳು ಹಾಗೆ ಹೇಳುತ್ತಾರೆಂದು ಅಮ್ಮಂದಿರು ಸುಮ್ಮನೆ ಕೂರಲು ಆಗುತ್ತದೆಯೇ? ಯಾವ ಅಮ್ಮನೂ ಮಕ್ಕಳ ಮಾತಿನಿಂದ ವಿಚಲಿತಳಾಗಿ ತನ್ನ ಕರ್ತವ್ಯ ವನ್ನು ಅವಗಣಿಸುವುದಿಲ್ಲ. ಬಹುಶಃ, ಪುರಾಣಗಳಲ್ಲಿ “ಎಪಿಟೋಮ್‌ ಆಫ್‌ ಮದರ್‌ಹುಡ್‌’ ಎಂದು ತಾಯ್ತನದ ಹೆಗ್ಗಳಿಕೆಗೆ ಪಾತ್ರಳಾದ ಮದಾಲಸಾಳೂ ಈ ಅಪವಾದದಿಂದ ಹೊರತಾಗಿರಲಿಕ್ಕಿಲ್ಲ. ಮಾರ್ಕಂಡೇಯ ಪುರಾಣದಲ್ಲಿ ಬರುವ ಮದಾಲ ಸಾಳನ್ನು ಅಮ್ಮಂದಿರು ದಿನಕ್ಕೆ ಒಂದು ಬಾರಿಯಾ ದರೂ ನೆನಪಿಸಿಕೊಳ್ಳುವ ದಿನಗಳು ಇವು. ಕೊರೊನಾ ದಿನಗಳಲ್ಲಿ ಮಕ್ಕಳು ಮನೆಯಲ್ಲೇ ಬಂಧಿಯಾಗಿರ ಬೇಕು. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎಂಟು ತಾಸು ನಿದ್ರೆ ಮಾಡಿದರೂ ಅಪ್ಪ ಅಮ್ಮಂದಿರ ತಲೆ ತಿನ್ನಲು ಅವರಿಗೆ ಹದಿನಾರು ಗಂಟೆಗಳು ಉಳಿ ಯುತ್ತವೆ. ಅವರನ್ನು ರಚನಾತ್ಮಕ ರೀತಿಯಲ್ಲಿ ಎಂಗೇಜ್‌ ಮಾಡಲೇಬೇಕಾ ಗಿರುವುದು ನಮ್ಮ ಜವಾ ಬ್ದಾರಿ. ಈ ಮದಾಲಸಾಗೂ, ಇಂದಿನ ದಿನಗಳಲ್ಲಿ ಅಮ್ಮನ ಪಾತ್ರ ನಿರ್ವಹಣೆಗೂ ಏನು ಸಂಬಂಧ ಎಂದು ತಿಳಿಯಲು ಮಾರ್ಕಂಡೇಯ ಪುರಾಣದಲ್ಲಿ ಬರುವ ಮದಾಲಸಾಳ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡರೆ ಒಳ್ಳೆಯದು.

ಮದಾಲಸಾಳು, ಋತಧ್ವಜ ಎಂಬ ರಾಜ ಬೇಡಿ ಪಡೆದ ಪತ್ನಿ. ಅವರಿಗೆ ಮೊದಲ ಮಗ ಹುಟ್ಟಿದಾಗ ಋತಧ್ವಜ ಮಗುವಿಗೆ ವಿಕ್ರಾಂತ ಎಂದು ನಾಮಕರಣ ಮಾಡುತ್ತಾನೆ. ಆ ಹೆಸರು ಕೇಳಿ ಮದಾಲಸಾ ನಗುತ್ತಾಳೆ. ಮಗುವಿಗೆ ಬಾಲ್ಯದಿಂದಲೂ ಆಕೆ ಪಾರಮಾರ್ಥಿಕ ತಣ್ತೀಗಳನ್ನು ಬೋಧಿಸುವ ಜೋಗುಳ ಹಾಡುತ್ತಾಳೆ.

ಶುದ್ದೋಸಿ ಬುದ್ದೋಸಿ ನಿರಂಜನೋಸಿ,
ಸಂಸಾರ ಮಾಯಾ ಪರಿವರ್ಜಿತೋಸಿ
ಸಂಸಾರ ಸ್ವಪ್ನಂ ತ್ಯಜಮೋಹ ನಿದ್ರಾಂ
ನ ಜನ್ಮ ಮೃತ್ಯು ತತ್‌ ಸತ್‌ ಸ್ವರೂಪೇ ||
ನೀನು ಪರಿಶುದ್ಧ ಆತ್ಮ, ನಿರಂಜನ ರೂಪನು. ಸಂಸಾರ ಮಾಯೆಯಿಂದ ನೀನು ಮುಕ್ತನು. ಮೋಹ ನಿದ್ರೆಯನ್ನು ತ್ಯಜಿಸು. ನಿನಗೆ ಯಾವುದೇ ಹೆಸರಿಲ್ಲ. ಇದು ಕೇವಲ ಕಲ್ಪನೆಯಿಂದ ಇಟ್ಟಿರುವ ಹೆಸರು. ಪಂಚಭೂತಗಳಿಂದ ಆದ ಈ ದೇಹವು ನಿನ್ನದಲ್ಲ. ಏಕೆ ಅಳುತಿರುವೆ? ನೀನು ಈ ದೇಹಕ್ಕೆ ಅಂಟಿಕೊಂಡು ಮೋಹಕ್ಕೊಳಗಾಗಬೇಡ, ಎಂದು ತಣ್ತೀ ಪದಗಳಂತೆ ಜೋಗುಳ ಹಾಡುತ್ತಾಳೆ. ಅವರ ಎರಡನೆಯ ಮಗ ನಿಗೆ ಸುಬಾಹು ಎಂದು ನಾಮಕರಣವಾಗುತ್ತದೆ. ಮೂರನೆಯ ಮಗನಿಗೆ ಅರಿಮರ್ಧನ ಎಂದು ಋತಧ್ವಜ ಹೆಸರಿಡುತ್ತಾನೆ. ಮೂರು ಬಾರಿಯೂ ಮಕ್ಕಳಿಗೆ ಕ್ಷತ್ರಿಯೋಚಿತ ಹೆಸರಿಟ್ಟಾಗ ಆಕೆ ಗಂಡನೆಡೆಗೆ ಕುಹಕದ ನಗೆ ಬೀರಿರುತ್ತಾಳೆ. ನಾಲ್ಕನೆಯ ಮಗು ಜನಿಸಿದಾಗ ಮಗುವಿಗೆ ಹೆಸರಿಡುವ ಹೊಣೆಯನ್ನು ಋತಧ್ವಜ ಮದಾಲಸಾಳಿಗೆ ವಹಿಸುತ್ತಾನೆ.

ಆಕೆ ಮಗನಿಗೆ “ಅಲರ್ಕ’ ಪೂರ್ಣಜ್ಞಾನಾನಂದ ಸ್ವರೂಪ ಎಂಬ ಅರ್ಥ ಮತ್ತು ಅದೇ ನಾಮಪದಕ್ಕೆ ಕೋಶ ದೊಳಗೆ “ಹುಚ್ಚುನಾಯಿ’ ಎಂಬ ಅರ್ಥವೂ ಇರುವ ಹೆಸರಿಡುತ್ತಾಳೆ. ಈಗ ನಗುವ ಸರದಿ ರಾಜನದಾಗು ತ್ತದೆ. ಆಕೆ ತನ್ನ ತರ್ಕ ಮುಂದಿಟ್ಟು ಮಾತಿನಲ್ಲಿ ಗಂಡ ನನ್ನು ಸೋಲಿಸುತ್ತಾಳೆ. ನಾಲ್ಕನೆಯ ಮಗುವಿಗೆ ವೀರ ಗೀತೆಗಳ ಜೋಗುಳ ಹಾಡುತ್ತಾಳೆ. ಅಲರ್ಕ ದೊಡ್ಡವ ನಾದ ಮೇಲೆ ಆಕೆಯೇ ಯುದ್ಧವಿದ್ಯೆ ಕಲಿಸುತ್ತಾಳೆ. ಮಗನಿಗೆ ಗುರುವಾಗಿ ತನ್ನೆಲ್ಲ ಶಕ್ತಿಯನ್ನೂ ಧಾರೆ ಎರೆಯುತ್ತಾಳೆ. ಇಂದ್ರನಿಗೆ ಸಮನಾಗಿ ರಾಜ್ಯವ ನ್ನಾಳು. ಧರ್ಮದಿಂದ ರಾಜ್ಯ ಕೋಶ ಸಂಪತ್ತನ್ನು ವೃದ್ದಿ ಸುವ ನೀನು ಧನ್ಯನಾಗುತ್ತೀಯ. ಧರ್ಮ ಮಾರ್ಗ ದಲ್ಲಿ ನಿರಂತರ ಇದ್ದು ಜ್ಞಾನಿಗಳನ್ನು ಗೌರವಿಸು. ಸ್ತ್ರೀ ಲಂಪಟನಾಗಬೇಡ. ಸದಾ ಪರರ ಒಳಿತಿಗಾಗಿ ಕಾರ್ಯೋನ್ಮುಖನಾಗು ಎಂದು ಉಪದೇಶ ಮಾಡು ತ್ತಾಳೆ. ಒಂದು ಉಂಗುರ ಕೊಟ್ಟು ಇದರಲ್ಲಿ ಇರುವ ಶ್ಲೋಕವನ್ನು ಅಗತ್ಯ ಬಿದ್ದಾಗ ಬಳಸಿಕೋ ಎಂದು ಉಂಗುರದಲ್ಲಿ ಬರೆದು ಕೊಡುತ್ತಾಳೆ. ಆ ಶ್ಲೋಕ “ಸಂಗಃ ಸರ್ವಾತ್ಮನಾ ತ್ಯಜಃ ಸಚೇತ್‌ ತ್ಯಕು¤ಂ ನ ಶಕ್ಯತೇ ಣ ಸದಿºಸ್ಸಃ ಕರ್ತವ್ಯಃ ಸತಾಂ ಸಂಗೋ ಹಿ ಭೇಷಜಮ್‌’ ಎಂದಾಗಿರುತ್ತದೆ. ಅಲರ್ಕ ಉತ್ತಮ ರಾಜನಾಗಿ ಯಶಸ್ವಿಯಾಗಿ ರಾಜ್ಯ ಭಾರ ಮಾಡು ತ್ತಾನೆ. ವರ್ಷಗಳು ಕಳೆದಂತೆ ಅಲರ್ಕನಿಗೆ ಸತ್ಯದ ಸಾಕ್ಷಾತ್ಕಾರವಾಗಿ ರಾಜ್ಯಾಡಳಿತದಲ್ಲಿ ಪರಮ ವಿರಕ್ತ ನಾಗಿ ದತ್ತಾತ್ರೇಯನ ಶಿಷ್ಯನಾಗುತ್ತಾನೆ.

ಮದಾಲಸಾ ತನ್ನ ನಾಲ್ಕೂ ಗಂಡು ಮಕ್ಕಳಿಗೆ ತಾನೇ ಗುರುವಾಗಿ ಹಲವು ವಿದ್ಯೆ ಕಲಿಸಿ ಒಬ್ಬ ರಾಜ ಹೊಂದಿರಬೇಕಾದ ಕೌಶಲಗಳಲ್ಲಿ ತರಬೇತಿ ನೀಡಿ ರಾಜ್ಯವನ್ನಾಳಲು ಸಜ್ಜುಗೊಳಿಸುತ್ತಾಳೆ. ಮಕ್ಕಳಿಗೆ ವಿದ್ಯೆ ಕಲಿಸುವ, ಅಧ್ಯಾತ್ಮ ಬೋಧಿಸುವ ಜವಾಬ್ದಾರಿಯನ್ನು ಮದುವೆಗೆ ಮೊದಲೇ ಋತಧ್ವಜನಿಂದ ಕೇಳಿ ಪಡೆದಿರುತ್ತಾಳೆ. ಕಳೆದ ಒಂದೂಕಾಲು ವರ್ಷಗ ಳಿಂದ ಮನೆಯಲ್ಲೇ ಬಂಧಿ ಯಾಗಿ ಆನ್‌ಲೈನ್‌ ತರಗತಿ ಗಳಿಗೆ ಅಂಟಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಮಕ್ಕಳಿಗಾಗಿದೆ. ತಾಯಂ ದಿರಿಗೆ ಅವರು ಕಲಿತರೋ ಬಿಟ್ಟರೋ ಎಂದು ಸದಾ ಕಾಲ ಮಕ್ಕಳ ಹಿಂದೆ ಬೀಳು ವಂತಾಗಿದೆ. ನಾನು ಆಟವಾ ಡಲು ಹೊರಗೆ ಹೋಗದೇ ಗೆಳೆಯರೊಂದಿಗೆ ಆಡದೇ ಈವತ್ತಿಗೆ ಐವತ್ತೆಂಟು ದಿನ ಗಳಾದವು, ಇಂದಿಗೆ ಐವ ತೊಂಬತ್ತು ದಿನಗಳಾದವು ಎಂದು ಪ್ರತೀ ದಿನ ದಿನಗಳನ್ನು ಎಣಿಸುವಾಗ ಮಕ್ಕಳು ಮುಖ ಸಣ್ಣ ಮಾಡುತ್ತಾರೆ. ಮಕ್ಕಳು ಹಾಗೆ ಹೇಳಿದಾಗ ನಮಗೆ ಸಂಕಟವಾದರೂ ತೋರ್ಪಡಿಸು ವಂತಿಲ್ಲ. ಮದಾಲಸಾ ಹೇಳಿದಂತೆ “ಸಂಗಃ ಸರ್ವಾ ತ್ಮನಾ ತ್ಯಜ್ಯಃ .’ ನೀನಾಯಿತು ನಿನ್ನ ಕೆಲಸವಾಯಿತು. ಈ ಎಕ್ಸ್‌ಕ್ಲೂಸಿವ್‌ ಜೀವನವನ್ನು ಅನುಭವಿಸಬೇಕು. ಯಾರಿಗೂ ಅಂಟಿಕೊಳ್ಳದ ಜೀವನ ನಡೆಸಬೇಕು ಎಂದು ನಾವೂ ಹೇಳಿ ಕೈ ತೊಳೆದು ಕೊಳ್ಳಬೇಕಾಗು ತ್ತದೆ. ಮನೆ ಸ್ವಲ್ಪ ವಿಶಾಲವಾಗಿದ್ದರೆ ಹೊರಾಂಗಣದ ಆಟಗಳನ್ನೂ ಮನೆಯಲ್ಲೇ ನಾವೂ ಅವರೊಂದಿಗೆ ಸೇರಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಬಹುದು.

ಒಳಾಂಗಣದ ಆಟಗಳಾದ ಚೆಸ್‌, ಪಗಡೆ, ಕಡ್ಡಿ ಆಟ ಹಾವುಏಣಿ ಚನ್ನೆಮಣೆ ಎಲ್ಲವೂ ಹೆಚ್ಚಿನ ಮನೆ ಗಳಲ್ಲಿ ಕೊರೊನಾ ಮೊದಲ ಅಲೆಯಲ್ಲೇ ಆಡಿ ಆಡಿ ಕೊಚ್ಚಿ ಹೋಗಿರುವುದರಿಂದ ಈಗ ಬೇರೆ ಆಟಗಳು ಬೇಕು. ಅದೆಷ್ಟು ಮಜಾ ಕೊಡುವ ಒಳಾಂಗಣ ಆಟ ಆಡಿದರೂ ಕ್ರಿಕೆಟ್‌ ಆಡಿದಷ್ಟು ತೃಪ್ತಿ ಮಕ್ಕಳಿಗೆ ಸಿಗುವು ದಿಲ್ಲವಂತೆ. ಇದು ನಾನು ನನ್ನಂತೇ ಅನೇಕ ಅಮ್ಮಂದಿ ರನ್ನು ಕೇಳಿ ಖಚಿತಪಡಿಸಿಕೊಂಡ ಸತ್ಯ. ಹಾಗಾಗಿ ಮನೆಯ ಒಂದು ಕೋಣೆಯನ್ನು ಕ್ರಿಕೆಟ್‌ ಸ್ಟೇಡಿಯಂ ಆಗಿಸಬೇಕು. ಮನೆಯ ಲೈಟು ಟೀವಿಗಳಿಗೆ ತಾಗ ದಂತೆ ಎಚ್ಚರ ವಹಿಸಿ ನಿಧಾನವಾಗಿ ಬೌಲಿಂಗ್‌, ಬ್ಯಾಟಿಂಗಿಗೆ ವ್ಯವಸ್ಥೆ ಮಾಡಿಕೊಡಬೇಕು. ಯೂಟ್ಯೂಬ್‌ ನಿಂದ ಸ್ಟೇಡಿಯಂ ಹಾಹಾಕಾರದ ಹಿನ್ನೆಲೆ ಸಂಗೀತ ಹುಡುಕಿ ಹಾಕಿಕೊಂಡರೆ, ಅಪ್ಪನೋ ಅಮ್ಮನೋ ಕಾಮೆಂಟರಿ ಹೇಳಿದರೆ ನಮ್ಮ ಮನೆಗಳೂ ಕೂಡ ಯಾವ ಇಂಟರ್‌ನ್ಯಾಶನಲ್‌ ಸ್ಟೇಡಿಯಂಗೂ ಕಡಿಮೆ ಎಂದೆನಿಸುವುದಿಲ್ಲ. ಆಟ ಮುಗಿದ ಮೇಲೆ ಗೆದ್ದವ ರ್ಯಾರು? ಸೋತವರು ಸೋತಿದ್ದು ಹೇಗೆ? ಎಂದು ಕನ್ನಡದಲ್ಲೋ ಇಂಗ್ಲಿಷ್‌ನಲ್ಲೋ ಒಂದರ್ಧ ಪುಟ ಪತ್ರಿಕಾ ವರದಿ ಬರೆಯಲು ಹೇಳಿದರೆ ಮತ್ತರ್ಧ ಗಂಟೆ ಅಲ್ಲಿ ಕಳೆದಿರುತ್ತದೆ. ಮಕ್ಕಳ ಸ್ವಂತ ವಾಕ್ಯ ರಚನೆಯ ಸಾಮರ್ಥ್ಯ ಕೂಡ ಹೆಚ್ಚುತ್ತದೆ.

ಶಾಲೆ ಕನಸೆಂಬಂತೆ ಆಗಿರುವ ಈ ದಿನಗಳಲ್ಲಿ, ತನ್ನ ನಾಲ್ಕು ಮಕ್ಕಳಿಗೂ ಮನೆಯನ್ನೇ ಪಾಠಶಾಲೆಯನ್ನಾಗಿ ಮಾಡಿಕೊಂಡ ಮದಾಲಸಾ ತುಂಬಾ ನೆನಪಾಗುತ್ತಾಳೆ ಮತ್ತು ಮಾದರಿಯಾಗುತ್ತಾಳೆ. ಈಗ ನಾವು ಅಮ್ಮಂದಿರು ಮಕ್ಕಳ ಕ್ಲಾಸ್‌ ವರ್ಕ್‌, ಹೋಂ ವರ್ಕ್‌, ಪಾಠದ ತುದಿಯ ಚಟುವಟಿಕೆಗಳು ಪ್ರಾಜೆಕ್ಟ್ ವರ್ಕ್‌ ಎಂದು ಇಡೀ ದಿನ ತಲೆ ಕೆಡಿಸಿಕೊಳ್ಳುತ್ತೇವೆ. ಶಾಲೆಯಲ್ಲಿ ಮಾಡಬೇಕಾದ್ದೆಲ್ಲವನ್ನು ನಾವೇ ಬರೆಯಿಸಿ, ತಪ್ಪುಗಳನ್ನು ತಿದ್ದಿ ಬರೆಯಿಸಿ, ಕೊಂಬು ಇಳಿ ತಲೆಕಟ್ಟು ಎಲ್ಲವನ್ನೂ ಹದವಾಗಿ ಹಾಕಿಸಿ ಯಾವ ವಿಷಯ ಯಾವ ಗ್ರೂಪ್‌ ಎಂದು ಹುಡುಕಿ ಪೋಸ್ಟ್‌ ಮಾಡುವಷ್ಟರಲ್ಲಿ ನಮ್ಮ ತಾಳ್ಮೆ ಕೈ ಜಾರಿ ಹೋಗಿರುತ್ತದೆ. ಗುಂಪಿನಲ್ಲಿ ಹೋಂ ವರ್ಕ್‌, ಕ್ಲಾಸ್‌ವರ್ಕ್‌ ಪೋಸ್ಟ್‌ ಮಾಡುವವರಲ್ಲಿ ನಾವೇ ಕೊನೆಯ ವರಾದರಂತೂ ಉತ್ಸಾಹ ಮತ್ತೂ ಇಳಿದು “ನಾವ್ಯಾವಾಗ ಬರವಣಿಗೆಯಲ್ಲಿ ಚುರುಕಾ ಗುವುದು?’ ಎಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮನಸ್ಸಿನಲ್ಲಿ ಮೂಡುತ್ತದೆ. ಇಡೀ ದಿನದಲ್ಲಿ ಇಷ್ಟೆಲ್ಲ ಬರವಣಿಗೆ, ಆಟಗಳ ಮಧ್ಯೆಯೂ ಮಕ್ಕಳಿಗೆ ಕೆಲವು ನಿಮಿಷಗಳು ಕಳೆಯಲು ಬಾಕಿ ಉಳಿಯುತ್ತದೆ. ಅವರು ಕರೆಯುವ ಆಟಗಳಿಗೆ ಸಮಯ ಮಾಡಿ ಕೊಳ್ಳಲೇ ಬೇಕು. ನಮ್ಮ ಮನೆಯಲ್ಲಿ ಅನೇಕ ಹಳೆಯ ಆಟಗಳೆಲ್ಲ ಬೇಸರ ಬಂದಿರುವುದರಿಂದ ಮಕ್ಕಳು ಹೊಸ ಆಟ ಹುಡುಕುತ್ತಾರೆ. ಇತ್ತೀಚೆಗೆ ಹೆಚ್ಚಾಗಿ ಚಕ್ರವರ್ತಿ ಅಶೋಕ ಸಾಮ್ರಾಟ್‌, ವೀರ್‌ ಶಿವಾಜಿ ಯಂತಹ ಐತಿಹಾಸಿಕ ಧಾರಾವಾಹಿಗಳನ್ನು ನೋಡು ವುದರಿಂದ ಅದೇ ಸಾಮ್ರಾಜ್ಯದ ಆಟ ಆಡಲು ಆಸಕ್ತಿ ತೋರಿಸುತ್ತಾರೆ.

ನಮ್ಮ ಮನೆಯ ಕೋಣೆಗಳೆಲ್ಲ ಒಂದೊಂದು ಸಾಮ್ರಾಜ್ಯ. ಕೋಟೆ ಭೇದಿಸಿ ಯುದ್ದಕ್ಕೆ ಆಹ್ವಾನ ನೀಡಿ ಸಾಮ್ರಾಜ್ಯ ವಶಪಡಿಸಿಕೊಳ್ಳುವ ಆಟವನ್ನು ಬಹಳ ರಚನಾತ್ಮಕವಾಗಿ ಆಡುತ್ತಾರೆ. ನಾನಂತೂ ರಾಜಮಾತೆಯಾಗಿ ಮನಸಾರೆ ತೃಪ್ತಿ ಪಟ್ಟಿದ್ದೇನೆ. ಆಡುವುದು ಆಟವಾದರೂ ಇಂತಹ ಆಟಗಳಲ್ಲಿ ಇಸ್ವಿ ನೆನಪಿಟ್ಟುಕೊಳ್ಳುವ ಗೋಜಿಲ್ಲದೇ ಮಕ್ಕಳಿಗೆ ಇತಿಹಾಸದ ಅರಿವು ಮತ್ತು ಚಿಕ್ಕ ಮಕ್ಕಳಿ ಗಾದರೆ ಅವರ ಶಬ್ದಕೋಶವೂ ಬೆಳೆಯುತ್ತದೆ. ಇನ್ನು ಕೊರೊನಾ ಮೂರನೆಯ ಅಲೆ ಬಂದರೆ ಆ ದಿನಗಳಿಗಾಗಿ ಮತ್ತೂ ಹೊಸ ಹೊಸ ಆಟಗಳನ್ನು ಹುಡುಕಿಕೊಳ್ಳಬೇಕು. ಒಟ್ಟಿನಲ್ಲಿ ಇಡೀ ದಿನ ಮಕ್ಕಳ ಹಿಂದೆಯೇ ಇರುವಂತೆ ಆದರೂ ಅಪ್ಪ ಅಮ್ಮನ ಸಾಂಗತ್ಯ ಮುಂದೊಂದು ದಿನ ಮಕ್ಕಳ ಜೀವನದಲ್ಲಿ ಒಳ್ಳೆಯ ಫಲ ಕೊಟ್ಟೇ ಕೊಡುತ್ತದೆ ಎಂಬ ನಂಬಿಕೆ ನಮಗಿದ್ದರೆ ಅಷ್ಟೇ ಸಾಕು.

ಮೂರು ಹೊತ್ತೂ ಮಕ್ಕಳ ಕಲಿಕೆ, ಊಟ ತಿಂಡಿ, ಅವರನ್ನು ಖುಷಿಯಾಗಿಡುವುದು ಹೇಗೆ ಎಂದು ಚಿಂತಿಸುವ ಅಮ್ಮಂದಿರ ಮನಃಸ್ಥಿತಿಗೆ “ಮದಾಲಸಾ ಕಾಂಪ್ಲೆಕ್ಸ್‌’ ಎಂದು ಕರೆಯಬಹುದು. ತಾಯಂದಿರಲ್ಲಿ ಸಹಜವಾಗಿಯೇ ಬರುವ ಈ ಪ್ರಜ್ಞೆ ಇಂದಿನ ದಿನಗ ಳಲ್ಲಿ ಹೆಚ್ಚೆಚ್ಚು ಜಾಗ್ರತವಾಗಬೇಕಾಗಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಒಂದೊಂದು ಮನೆಯ ವಾತಾ ವರಣವೂ ವಿಭಿನ್ನವಾಗಿರುತ್ತದೆ. ಆದರೆ ನಾವೆಲ್ಲರೂ ಮದಾಲಸಾಳಂತೆ ಸ್ವಲ್ಪವೂ ಶಕ್ತಿ ಕುಂದದೇ, ನಮ್ಮ ನಮ್ಮ ಅಂತಃಶಕ್ತಿ, ಮನೋಬಲ ಹೆಚ್ಚಿಸಿಕೊಳ್ಳುವ ಮಾರ್ಗ ಹುಡುಕಿಕೊಂಡು ಸಮಾಜದ ದೃಷ್ಟಿ ಯಿಂದಲೂ, ಮಕ್ಕಳ ಹಿತದೃಷ್ಟಿಯಿಂದಲೂ “ದಿ ಬೆಸ್ಟ್‌’ ಅಮ್ಮನಾಗಲು ಪ್ರಯತ್ನಿಸೋಣ.

– ವಿದ್ಯಾ ದತ್ತಾತ್ರಿ

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ ಪಟ್ಟ…ಟ್ರಂಪ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.