ಶತಮಾನಗಳ ಹಿಂದೆಯೇ ಮೊಸಾಯಿಕ್ ಬಳಕೆ! ರೋಮ್‌ನ ದ್ರಾಕ್ಷಿತೋಟದಲ್ಲಿ ಸಿಕ್ಕಿತು ಪುರಾವೆ
Team Udayavani, Jul 25, 2020, 7:36 PM IST
ರೋಮ್: ಪ್ರಾಚೀನ ಕಾಲದಲ್ಲೇ ನೆಲಕ್ಕೆ ಮೊಸಾಯಿಕ್ ಹಾಕಲಾಗುತ್ತಿತ್ತೇ? ಯಾವ ತಂತ್ರಜ್ಞಾನಗಳನ್ನು ಬಳಸಿ ಮೊಸಾಯಿಕ್ ತಯಾರಿಸಿರಬಹುದು, ಹೇಗೆ? ಎಲ್ಲಿ? ಎಂಬ ಕುತೂಹಲ ನಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರವಾಗಿ ಇಟಲಿಯ ಪುರಾತತ್ವ ತಜ್ಞರು ರೋಮ್‌ನಲ್ಲಿರುವ ವೆರೋನಾದ ಉತ್ತರದ ನೆಗ್ರಾನ್ ಪಟ್ಟಣದಲ್ಲಿ ಮೊಸೈಕ್‌ನ ಅವಶೇಷಗಳೇ ಸಿಕ್ಕಿವೆ.
ನೆಗ್ರಾನ್‌ನ ದ್ರಾಕ್ಷಿ ತೋಟದಲ್ಲಿ ಅಗೆಯುವಾಗ ಮೊದಲಿಗೆ ಚಿಕ್ಕ ಮೊಸಾಯಿಕ್ ಚೂರುಗಳು ಸಿಕ್ಕವು. ಅನಂತರ ಪುರಾತ್ತತ್ವ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಈ ಬಗ್ಗೆ ಅದೇ ಜಾಗದಲ್ಲಿ ಇನ್ನಷ್ಟು ದೂರ ಅಗೆದಾಗ ಅವರಿಗೆ ಆಶ್ಚರ್ಯ ಉಂಟಾಗಿತ್ತು. ನೆಲದಲ್ಲಿ ಸಮತಟ್ಟಾಗಿ ಮೊಸಾಯಿಕ್ ಗಳನ್ನು ಜೋಡಿಸಿಡಲಾಗಿತ್ತು. ಆ ಮೊಸಾಯಿಕ್ ಗಳೂ ಕೂಡಾ ಸುಂದರ ಚಿತ್ರಗಳನ್ನು ಒಳಗೊಂಡಿದ್ದು, ವರ್ಣರಂಜಿತ ವಿವರಣೆಗಳನ್ನು ಒಳಗೊಂಡಿದೆ. ಶತಮಾನದಷ್ಟು ಹಳೆಯದೆನ್ನಬಹುದಾದ ಈ ಮೊಸಾಯಿಕ್ ಗಳನ್ನು ಸಂಪೂರ್ಣವಾಗಿ ಸಂರಕ್ಷಿಸಿಡಲಾಗಿದೆ.
ಶತಮಾನಗಳ ಹಿಂದೆಯೇ ಮೊಸಾಯಿಕ್ ಗಳ ಬಳಕೆ ಇತ್ತೇ?
ಹೌದೆನ್ನುತ್ತಾರೆ ಇಲ್ಲಿನ ಪುರಾತತ್ವ ವಿದ್ವಾಂಸರು. ಈ ಮೊಸಾಯಿಕ್‌ಗಳು ಶತಮಾನಕ್ಕಿಂತಲೂ ಹೆಚ್ಚು ಹಳೆಯದಾಗಿದೆ ಅನ್ನುವುದರಲ್ಲಿ ಸಂಶಯವಿಲ್ಲ. ರೋಮ್‌ನಲ್ಲಿದ್ದ ಪ್ರಾಚೀನರ ಮನೆಗಳಲ್ಲಿ ಮೊಸಾಯಿಕ್‌ಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಇವು ಇಲ್ಲೇ ತಯಾರಾಗಿದೆ ಎನ್ನುವುದಕ್ಕೆ ನಿಖರ ಉತ್ತರ ಹೇಳಲಾಗದು. ಪ್ರಾಚೀನ ನಿರ್ಮಾಣದ ನಿಖರ ವಿಸ್ತರಣೆ ಮತ್ತು ಅಂತಹ ಸ್ಥಳವನ್ನು ಗುರುತಿಸುವುದು ತಂಡದ ಉದ್ದೇಶವಾಗಿತ್ತು ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.