MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ
ಸಂಸದ ಕ್ಯಾ| ಬ್ರಿಜೇಶ್ ಚೌಟರ ಮನವಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಂದನೆ
Team Udayavani, Sep 18, 2024, 7:15 AM IST
ಮಂಗಳೂರು: ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಪಿಎಲ್ ಕಂಪೆನಿ ಆರಂಭಿಸಲು ಜಮೀನು ಬಿಟ್ಟುಕೊಟ್ಟು ಪಿಡಿಎಫ್ (ಭೂಮಿ ಕಳೆದುಕೊಂಡ ಕುಟುಂಬಸ್ಥರು) ಆಧಾರದಲ್ಲಿ ಉದ್ಯೋಗ ಪಡೆದಿದ್ದ115 ಮಂದಿ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಮುಂದುವರಿಸುವುದಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಸೂಚನೆ ಮೇರೆಗೆ ಜಿಎಂಪಿಎಲ್ ಕಂಪೆನಿ ಒಪ್ಪಿದೆ. ಆ ಮೂಲಕ ಬಹುದಿನಗಳಿಂದ ಬಾಕಿಯಾಗಿದ್ದ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಸಮಸ್ಯೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಬಗೆಹರಿಸಿದ್ದಾರೆ.
ಈ ಸಂಬಂಧ ಸಂಸದರಿಗೆ ಅಧಿಕೃತವಾಗಿ ಪತ್ರ ಬರೆದಿರುವ ಗೈಲ್ ಇಂಡಿಯಾದ ನಿರ್ದೇಶಕ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಶ್ ಗುಪ್ತಾ, ಜಿಎಂಪಿಎಲ್‌ಗೆ ಜೆಬಿಎಫ್‌ಪಿಎಲ್ ಪಿಡಿಎಫ್ ಸಮಸ್ಯೆ ಬಗ್ಗೆ ಮನವಿ ಬಂದಿದ್ದು, ಅದನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುತ್ತಿದೆ. ಸೆ.30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಪೆಟ್ರೋಲಿಯಂ ಸಚಿವಾಲಯ ತಮ್ಮ ಮನವಿ ಪರಿಗಣಿಸಿ ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿರುವುದಕ್ಕೆ ಕ್ಯಾ| ಚೌಟ ಹರ್ಷ ವ್ಯಕ್ತಪಡಿಸಿದ್ದು, ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
“ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್)ದ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಸಮಸ್ಯೆಗೆ ಸ್ಪಂದಿಸಿ ಜಿಎಂಪಿಎಲ್ ಮೂಲಕ ಅದನ್ನು ಬಗೆಹರಿಸುತ್ತಿರುವುದಾಗಿ ಪತ್ರ ಬಂದಿದೆ. ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವಂತೆ ಕಳೆದ ತಿಂಗಳು ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಸಚಿವರು, ನಮ್ಮ ಮನವಿಗೆ ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್, ಗೈಲ್ ಸಿಎಂಡಿ ಸಂದೀಪ್ ಗುಪ್ತಾ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಶ್ ಗುಪ್ತಾ ಅವರೊಂದಿಗೆ ಸಭೆ ನಡೆಸಿದ್ದರು ಎಂದು ಕ್ಯಾ| ಚೌಟ ತಿಳಿಸಿದ್ದಾರೆ.
ಏನಿದು ಸಮಸ್ಯೆ? ಗೈಲ್ ಇಂಡಿಯಾವು ಜೆಬಿಎಫ್
ಪೆಟ್ರೋಕೆಮಿಕಲ್ಸ್‌ನ ಪಿಟಿಎ ಸ್ಥಾವರವನ್ನು ಸ್ವಾಧೀನ ಪಡಿಸಿ ಕೊಂಡಿದ್ದು, ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ… ಅನ್ನು ಸ್ಥಾಪಿಸಿತ್ತು. ಆದರೆ ಮೂಲ ಗುತ್ತಿಗೆಯ ಭಾಗವಾಗಿ, ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನ 115 ಸ್ಥಳಾಂತರಗೊಂಡ ಕುಟುಂಬಗಳಿಗೆ ಪೂರ್ಣಾವಧಿಯ ಉದ್ಯೋಗದ ಭರವಸೆ ನೀಡಿತ್ತು. ಆದರೆ ಜಿಎಂಪಿಎಲ್ ಪ್ರಾಜೆಕ್ಟ್ ಡಿಸ್‌ಪ್ಲೇಸ್ಡ್ ಫ್ಯಾಮಿಲೀಸ್ (ಪಿಡಿಎಫ್)ಗೆ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್‌ನ ಉದ್ಯೋಗಸ್ಥರು ಅತಂತ್ರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
Mangaluru: ಪಿಲಿಕುಳ ಕಂಬಳ; ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ
BJP Protest: ರೈತರ ಜಮೀನು ವಕ್ಫ್ ಖಾತೆಗೆ ಭೂಪರಿವರ್ತನೆ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.