MUDA Case: ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಮ್ಯಾಚ್ ಫಿಕ್ಸಾ?: ಆರ್.ಅಶೋಕ್
ಸಿಎಂ ಕಚೇರಿಯೇ ತನಿಖೆಯ ಸಮಯ ನಿಗದಿಪಡಿಸಿತ್ತೇ?: ವಿಪಕ್ಷ ನಾಯಕ ಪ್ರಶ್ನೆ
Team Udayavani, Nov 7, 2024, 7:15 AM IST
ಬೆಂಗಳೂರು: ಆರೋಪಿಯೊಬ್ಬನನ್ನು ಎಷ್ಟು ಸಮಯ ವಿಚಾರಣೆ ಮಾಡಬೇಕು ಎಂಬುದು ತನಿಖಾಧಿಕಾರಿಯ ವಿವೇಚನೆ ಮತ್ತು ಸ್ವಾತಂತ್ರ್ಯ. ಆದರೆ, ಮುಡಾ ನಿವೇಶನ ಹಂಚಿಕೆ ಪ್ರಕರಣದ ವಿಚಾರಣೆಗೆ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಪ್ರವಾಸ ಕಾರ್ಯಕ್ರಮಗಳ ಪಟ್ಟಿಯಲ್ಲಿ ಲೋಕಾಯುಕ್ತ ತನಿಖೆಯ ಟೈಮ್ ಟೇಬಲ್ ಅನ್ನೂ ಹಾಕಿದ್ದು, ಇದೇನು ಮ್ಯಾಚ್ ಫಿಕ್ಸಿಂಗಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತನಿಖಾಧಿಕಾರಿ ವಿಚಾರಣೆಯನ್ನು ಎಷ್ಟು ಗಂಟೆಗೆ ಮುಗಿಸುತ್ತಾರೆ ಎಂಬುದು ಮುಖ್ಯಮಂತ್ರಿ ಕಚೇರಿಗೆ ಹೇಗೆ ಗೊತಾಗುತ್ತದೆ? ಮೈಸೂರಿಗೆ ಬೆಳಗ್ಗೆ 10 ಗಂಟೆಗೆ ತಲುಪುವ ಸಿಎಂ, ಮಧ್ಯಾಹ್ನ 12 ಗಂಟೆಗೆ ಚನ್ನಪಟ್ಟಣ ಪ್ರಚಾರಕ್ಕಾಗಿ ಮೈಸೂರಿನಿಂದ ಹೊರಡುವ ಬಗ್ಗೆ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಹಾಕಿದ್ದಾರೆ. ಅಂದರೆ, ತನಿಖೆಯ ಸಮಯವನ್ನೂ ಸಿಎಂ ಕಚೇರಿಯೇ ನಿಗದಿಪಡಿಸಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
ಯಾವುದೇ ಪ್ರಕರಣದಲ್ಲಿ ಮೊದಲ ಆರೋಪಿಯಿಂದ ತನಿಖೆ ಆರಂಭಿಸುತ್ತಾರೋ ಅಥವಾ ಕೊನೆಯ ಆರೋಪಿಯಿಂದ ತನಿಖೆ ಮಾಡುತ್ತಾರೋ? ಮುಡಾ ನಿವೇಶನ ಹಂಚಿಕೆ ಪ್ರಕರಣದ ಮೊದಲ ಆರೋಪಿ ಸಿದ್ದರಾಮಯ್ಯರನ್ನು ಕೊನೆಗೆ ಕರೆಸಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆಗೆ ಕೋರಿದ್ದರಿಂದ ಎ1 ಸಿದ್ದರಾಮಯ್ಯ ತನಿಖೆ ನಡೆದಿದೆ. ಇಲ್ಲದಿದ್ದರೆ, ಅದೂ ಆಗುತ್ತಿರಲಿಲ್ಲ ಎಂದು ದೂರಿದರು.
ಕಳೆದ 16 ತಿಂಗಳ @INCKarnataka ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಇವತ್ತು ಅವರ ತೆರೆದ ಪುಸ್ತಕ ಪುಟಗಳು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ. @siddaramaiah ನವರೇ, ನೇಮಕ ಮಾಡಿರುವ ಪೊಲೀಸ್… pic.twitter.com/iYgoM8DvbF
— BJP Karnataka (@BJP4Karnataka) November 6, 2024
ಪುಸ್ತಕ ತೆರೆದರೆ ಲೂಟಿ ಬಿಟ್ಟರೆ ಬೇರೇನೂ ಇಲ್ಲ :
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ಕಳೆದ 16 ತಿಂಗಳ ಇವರ ಪುಸ್ತಕ ತೆರೆದರೆ ಬರೀ ಲೂಟಿಯ ಕಪ್ಪುಚುಕ್ಕಿಗಳಿದ್ದು, ಒಂದೂ ಬಿಳಿ ಚುಕ್ಕಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ನಿವೇಶನ ಲೂಟಿ ಮಾಡಿ ತಾವೇ ನೇಮಿಸಿದ ಪೊಲೀಸ್ ಅಧಿಕಾರಿ ಮುಂದೆ ತನಿಖೆಗೆ ಕುಳಿತುಕೊಳ್ಳಲು ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ಪುಸ್ತಕದಲ್ಲಿ ನಾವು ತೆರೆದ ಪುಟದಲ್ಲೆಲ್ಲ ಮುಡಾ ಹಗರಣ, ಅಬಕಾರಿ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳೇ ತುಂಬಿವೆ. ಸಿದ್ದರಾಮಯ್ಯನವರು 62 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡುವುದಾಗಿ ಹೇಳಿದ್ದರು. ಬಳಿಕ 14 ಸೈಟ್ ಹಾಗೆ ಏಕೆ ವಾಪಸ್ ಕೊಟ್ಟರು? ವಾಲ್ಮೀಕಿ ನಿಗಮದ ಹಗರಣ ಸಂಬಂಧ ನಾಗೇಂದ್ರ ಪತ್ರಿಕಾಗೋಷ್ಠಿ ಮಾಡಿ ನಾನು ನಿರಪರಾಧಿ ಎಂದಿದ್ದರು. ಯಾಕೆ ಅವರು ಜೈಲಿಗೆ ಹೋದರು? ಎಂದು ಕೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್ ಸಿಂಹ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
FIR Petition: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Dandeli: ಸಂಡೇ ಮಾರ್ಕೆಟ್ ಬಳಿ ಸರಣಿ ಕಳ್ಳತನ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
CCTV Footage: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ… ಯುವತಿ ಬದುಕುಳಿದಿದ್ದೇ ಪವಾಡ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.