![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 2, 2024, 6:22 AM IST
ಬೆಂಗಳೂರು: ಮುಡಾ ನಿವೇಶನಗಳನ್ನು ವಾಪಸ್ ನೀಡಿದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿರುವ ಸಚಿವರು, ಆ ಮೂಲಕ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪತ್ನಿ ನಿವೇಶನ ವಾಪಸ್ ಮಾಡಿರು ವುದು ಸಿದ್ದರಾಮಯ್ಯ ಅವರಿಗೂ ಅಚ್ಚರಿ ತಂದಿದೆ. ಒಬ್ಬ ಗೃಹಿಣಿಯಾಗಿ ಅವರ ಮನಸ್ಸಿಗೆ ಘಾಸಿಯಾಗಿದೆ. ಅವರ ನಿರ್ಧಾರ ಮೆಚ್ಚುವಂತಹದ್ದು ಎಂದರು.
ಸಿಎಂ ವಿರುದ್ಧ ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಹಾಗಾಗಿ ಪಕ್ಷ, ಶಾಸಕರು, ಸಚಿವರು ಸಿಎಂ ಜತೆಗಿದ್ದಾರೆ. ರಾಜೀನಾಮೆ ನೀಡು ಪ್ರಮೇಯವೇ ಇಲ್ಲ. ಸತ್ಯ ಏನು ಎಂಬುದು ಜನರಿಗೆ ಗೊತ್ತಾಗಿದೆ. ಅನಾರೋಗ್ಯ ರಾಜಕೀಯ ರಾಜ್ಯದಲ್ಲಿ ನಡೆದಿದೆ ಎಂದು ಹೇಳಿದರು.
ತಪ್ಪು ಮಾಡಿದ್ದೇವೆ ಅಂದಿದ್ದಾರಾ?
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಮುಡಾ ವಿಚಾರದಲ್ಲಿ ತಪ್ಪು ಮಾಡಿ ದ್ದೇವೆ. ನಿವೇಶನ ವಾಪಸ್ ತೆಗೆದು
ಕೊಳ್ಳಿ ಎಂದು ಎಲ್ಲಿಯಾದರೂ ಸಿದ್ದರಾಮಯ್ಯ ಅವರ ಪತ್ನಿ ಹೇಳಿದ್ದಾರಾ? ಇಲ್ಲ, ತಮ್ಮ ಪತಿ 40 ವರ್ಷ ರಾಜಕಾರಣದಲ್ಲಿದ್ದಾರೆ. ಅವರ ಮೇಲೆ ಎಲ್ಲಿಯೂ ಕಪ್ಪುಚುಕ್ಕೆ ಇಲ್ಲ. ಹಾಗಾಗಿ ನಿವೇಶನ ವಾಪಸ್ ನೀಡುತ್ತಿರುವುದಾಗಿ ಹೇಳಿದ್ದಾರೆ. ಸೂಕ್ತ ನಿರ್ಧಾರ ಎಂದರು.
ಸಿದ್ದರಾಮಯ್ಯ ಪತ್ನಿ ಸಾಧ್ವಿ. ಇಲ್ಲಿಯವರೆಗೆ ಎಲ್ಲಿಯೂ ಕಾಣಿಸಿಕೊಂಡವರಲ್ಲ. ಈ ಬೆಳವಣಿಗೆಗಳನ್ನು ನೋಡಿ ಮನಸ್ಸಿಗೆ ಘಾಸಿ ಆಗಿರಬಹುದು. ಪ್ರಾಮಾಣಿಕ ಜನ ಸೇವೆ ಮಾಡಿದ ತಮ್ಮ ಪತಿ ವಿರುದ್ಧ ಈ ಕ್ಷುಲ್ಲಕ ಕಾರಣಕ್ಕೆ ಇಷ್ಟೆಲ್ಲಾ ಆಗಿದೆ ಎಂಬುದನ್ನು ನೋಡಿ ವಾಪಸ್ ಕೊಟ್ಟಿರಬಹುದು ಎಂದ ಅವರು, ನೆಲದ ಕಾನೂನಿನ ಮೇಲೆ ಗೌರವವಿದೆ. ಕಾನೂನು ಸಲಹೆ ಪಡೆದು, ಮುಂದಿನ ಹೆಜ್ಜೆ ಇಡುತ್ತೇವೆ. ಎಫ್ಐಆರ್ ರದ್ದು ಮಾಡಬೇಕು ಎನ್ನುವುದು ಸೇರಿದಂತೆ ಒಟ್ಟಾರೆ ಪ್ರಕರಣದ ವಿಚಾರದಲ್ಲಿ ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಗೃಹ ಸಚಿವ ಡಾ| ಜಿ. ಪರಮೇಶ್ವರ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ನಡೆಯುತ್ತಿರುವ ಬೆಳವಣಿಗೆಗಳಿಗೆ ಬೇಸರಗೊಂಡು ಸಿಎಂ ಪತ್ನಿ ನಿವೇಶನ ವಾಪಸ್ ಮಾಡ್ತಿದ್ದಾರೆ. ಕಾನೂನಾತ್ಮಕವಾಗಿ ಏನು ಬೆಳವಣಿಗೆ ಆಗಲಿದೆ ಅಂತ ನೋಡೋಣ. ಏನೇ ಮಾಡಿದರೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಾರೆ ಎಂದರು.
ಇ.ಡಿ.ಗೆ ಲಗಾಮು ಹಾಕಲು ಸಿಎಂ ಭೇಟಿ: ಸಚಿವ ಪಾಟೀಲ್
ಜಾರಿ ನಿರ್ದೇಶನಾಲಯ ಮುಡಾ ಪ್ರಕರಣದ ತನಿಖೆಗೆ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ್, ಇ.ಡಿ.ಗೆ ಲಗಾಮು ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ಅದನ್ನು ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು. ಇದೇ ವಿಚಾರಕ್ಕೆ ಸಿಎಂ ಭೇಟಿ ಮಾಡಿದ್ದೇನೆ ಎಂದರು.
ಮುಡಾಕ್ಕೆ ಸೇರಿದ 387 ಕೋಟಿ ಹಣ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ ನಡೆಸಿದರೆ ಅದು ದೇಶದ ದುರಂತ ಆಗುತ್ತದೆ. ಯಾಕೆಂದರೆ ಸರಕಾರದ ಒಂದು ಇಲಾಖೆಯ ಹಣ ಮತ್ತೂಂದು ಇಲಾಖೆಗೆ ಬಳಸಲು ಇ.ಡಿ.ಯ ಅನುಮತಿ ಬೇಕಿಲ್ಲ. ಅದು ಸರಕಾರದ ಜವಾಬ್ದಾರಿ ಹಾಗೂ ಅದರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.