MUDA Scam: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಿತೂರಿ: ಆರೋಪ
Team Udayavani, Aug 18, 2024, 1:03 AM IST
ಮಂಗಳೂರು: ಮುಡಾ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾ ಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿ ರುವುದು ವ್ಯವಸ್ಥಿತ ಪಿತೂರಿ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.
ಜಿಲ್ಲಾ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾ ಧ್ಯಕ್ಷ ಮಂಜುನಾಥ ಭಂಡಾರಿ, ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಕಳಂಕ. ರಾಜ್ಯಪಾಲರ ಗೌರವಯುತ ಹುದ್ದೆಗೆ ಅವಮಾನ. ಕೇಂದ್ರ ಸರಕಾರವು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಂಚ ಗ್ಯಾರಂಟಿಗಳನ್ನು ಜಾರಿಗೊ ಳಿಸಿ ಜನಪ್ರಿಯವಾಗಿರುವ ಕಾಂಗ್ರೆಸ್ ಸರಕಾರವನ್ನು ಸಹಿಸಲಾಗದ ಬಿಜೆಪಿ ಹಲವು ರೀತಿಯಲ್ಲಿ ಕಳಂಕ ತರಲು ಯತ್ನಿಸಿ ವಿಫಲವಾಗಿ ಈಗ ರಾಜ್ಯಪಾಲ ರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ ಪ್ರಜಾ ಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆ ಎಂದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ರಾಜ್ಯಪಾಲರು ನಿರ್ಧಾರ ಕೈಗೊಂ ಡಿದ್ದಾರೆ. ಮುಡಾ ಪ್ರಕರಣದ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋ ಗ ತನಿಖೆ ನಡೆಸುತ್ತಿದೆ. ಆದರೂ ಪ್ರಾಸಿಕ್ಯೂಷನ್‌ಗೆ ಅನುಮತಿಸಲಾಗಿದೆ. ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಯಾವ ಪಕ್ಷಗಳೂ ಅಧಿ ಕಾರದಲ್ಲಿರಬಾರದು ಎಂಬುದೇ ಇದರ ಉದ್ದೇಶ ಎಂದು ಟೀಕಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ ಮೊದಲಾದವರ ವಿರುದ್ಧ ಪ್ರಾಸಿ ಕ್ಯೂಷನ್‌ಗೆ ಲೋಕಾಯುಕ್ತರು ರಾಜ್ಯ ಪಾಲರಿಂದ ಅನುಮತಿ ಕೇಳಿದ್ದರೂ ನೀಡಲಿಲ್ಲ. ಈಗ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಸಿಎಂ ಪರ ನಿಲ್ಲುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಇದೊಂದು ಪಿತೂರಿ ಹಾಗೂ ದ್ವೇಷದ ರಾಜಕಾರಣ. ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆ ತರುವ ಯತ್ನ. ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಮುಡಾ ನಿವೇಶನ ಹಂಚಿಕೆ ಮಾಡಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಇದ ರಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲೆ ಯಲ್ಲೂ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿರುವ ಕುರಿತು ಪ್ರಶ್ನಿಸಿದಾಗ, ಅವರಿಂದಲೇ ಸ್ಪಷ್ಟೀಕರಣ ಕೇಳಿ ಎಂದರು. ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಸಿಎಂ ಮುಗಿಸುವ ಷಡ್ಯಂತ್ರ: ದಿನೇಶ್
ತಪ್ಪೇ ಮಾಡದ ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸುವ ಎಲ್ಲ ಕುತಂತ್ರಗಳೂ ವಿಫಲವಾಗಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ಷಡ್ಯಂತ್ರ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ಮೋದಿ ಸರಕಾರ ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ಇದು ರಾಜ್ಯಪಾಲರು ಎಷ್ಟು ಕೆಳ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದರು.
ಇದಕ್ಕೆಲ್ಲ ಸಿಎಂ ಅವರು ಜಗ್ಗುವುದಿಲ್ಲ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಜನರೂ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಹಿಂದೆ ಮಾಜಿ ಸಿಎಂ ಯಡಿಯೂ ರಪ್ಪ ವಿರುದ್ಧ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿತ್ತು. ಆದರೂ ಗವರ್ನರ್ ಆಗ ಬಹ ಳಷ್ಟು ಪರಾಮರ್ಶೆ ಮಾಡಿ ಪ್ರಾಸಿ ಕ್ಯೂಷನ್ ಅನುಮತಿ ಕೊಟ್ಟಿ ದ್ದರು. ಯಡಿಯೂರಪ್ಪರಿಗೂ ಸಿದ್ದರಾಮ ಯ್ಯರಿಗೂ ಹೋಲಿಕೆ ಮಾಡಲಾಗದು. ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಅವರು ಹಲವು ಕೇಸ್‌ಗಳಲ್ಲಿ ಇದ್ದಾರೆ ಎಂದರು.
ಆಪರೇಷನ್ ಕಮಲಕ್ಕೆ ತಂತ್ರ: ಸೊರಕೆ ಆರೋಪ
ಉಡುಪಿ: ಆಪರೇಶನ್ ಕಮಲ ಮಾಡುವ ಪಿತೂರಿಯಿಂದ ಬಿಜೆಪಿಗರು ಸಿಎಂ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಭದ್ರ ಸರಕಾರವನ್ನು ಶಿಥಿಲಗೊಳಿಸುವ ಪ್ರಯತ್ನ ಕೇಂದ್ರದಿಂದ ಆಗುತ್ತಿದೆ. ಹಿಂದುಳಿದ, ಶೋಷಿತ, ಅಲ್ಪಸಂಖ್ಯಾಕರು ಸಿಎಂ ಸಿದ್ದರಾಮಯ್ಯ ಅವರ ಹಿಂದೆ ಇದ್ದಾರೆ. ಸಿಎಂ ಮೇಲೆ ಯಾವುದೇ ತಂತ್ರಗಾರಿಕೆ ನಡೆಯದು. ಅವರು ಎಂದೂ ಅಕ್ರಮ ರಾಜಕೀಯದಲ್ಲಿ ತೊಡಗಿದವರಲ್ಲ. ಈ ವಿಷಯದಲ್ಲಿ ಸಿಎಂ ಹಾಗೂ ಅವರ ಪತ್ನಿಯ ಹಸ್ತಕ್ಷೇಪ ಇಲ್ಲ ಎಂದರು.
ಎಚ್.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ್ ರೆಡ್ಡಿಯವರ ಪ್ರಕರಣ ಯಾವ ಕಾರಣಕ್ಕೆ ಬಾಕಿ ಇದೆ? ದೇಶದಲ್ಲಿ ಎಲ್ಲೂ ಆಗದ ಪ್ರತಿಭಟನೆ ರಾಜ್ಯದಲ್ಲಿ ನಡೆಯುತ್ತದೆ. ಕಾಂಗ್ರೆಸ್‌ನಿಂದ 136 ಶಾಸಕರು ಗೆದ್ದಿದ್ದರೂ ಬಿಜೆಪಿಗರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಸಿಎಂ ಅವರನ್ನು ಪ್ರಶ್ನಿಸುವ ನೈತಿಕತೆ ಸುನಿಲ್ ಕುಮಾರ್ ಅವರಿಗೆ ಇಲ್ಲ. ಪರಶುರಾಮನ ಸೃಷ್ಟಿ ವಿಚಾರದಲ್ಲಿ ದೇವರಿಗೆ ಅವಮಾನ ಆಗಿದೆ ಎಂದರು.
ರಾಜ್ಯಪಾಲರ ನಡೆ ಖಂಡನೀಯ: ಕೆ. ಅಭಯಚಂದ್ರ
ಮೂಡುಬಿದಿರೆ: ರಾಜ್ಯಪಾಲರ ನಡೆಯನ್ನು ಖಂಡಿಸಿರುವ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ. ಅಭಯಚಂದ್ರ, ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರ ಯೋಜನೆಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದ ರಾಜ್ಯಪಾಲರು ಈಗ ಕೇಂದ್ರ ಸರಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ. 2023ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಇರುವಾಗ ಮುಡಾ ಸಿದ್ದರಾ ಮಯ್ಯನವರ ಪತ್ನಿಗೆ ಬದಲಿ ನಿವೇಶನ ನೀಡಿತ್ತು. ಇದರಲ್ಲಿ ಸಿಎಂ ಪಾತ್ರ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.