MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
ಅಧಿಕಾರಿಗಳು, ಸಿಬಂದಿ ಜತೆ ತುರ್ತು ಸಭೆ, ಕೋರ್ಟ್‌ನಿಂದ ನೀಡಿರುವ ದಾಖಲೆ, ಪ್ರಕರಣದ ದೂರಿನಲ್ಲಿರುವ ದಾಖಲೆಗಳ ಪರಿಶೀಲನೆ
Team Udayavani, Sep 29, 2024, 7:50 AM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಮೈಸೂರು ಲೋಕಾಯುಕ್ತ ಪೊಲೀಸರು ಈ ಸಂಬಂಧ ತನಿಖೆಗಾಗಿ 4 ತಂಡ ರಚನೆ ಮಾಡಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್‌ಪಿ ಎಸ್. ಮಾಲತೇಶ್ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿದೆ ಎಂದು ಮೂಲ ಗಳು ತಿಳಿ ಸಿವೆ. ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿ ಜತೆ ಗೆ ಶನಿವಾರ ತುರ್ತು ಸಭೆ ನಡೆಸಿದ ಎಸ್‌ಪಿ ಉದೇಶ್, ಪ್ರಕ ರಣ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದರು.
ಕೋರ್ಟ್‌ನಿಂದ ನೀಡಿರುವ ದಾಖಲೆಗಳು ಹಾಗೂ ದೂರಿನಲ್ಲಿ ಅಡಕವಾಗಿರುವ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಮುಂದಿನ ಒಂದೆರಡು ದಿನಗಳ ಕಾಲ ದಾಖಲೆಗಳ ಸಂಪೂರ್ಣ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ.
ಯಾವ್ಯಾವ ವಿಚಾರಗಳ ತನಿಖೆ
ಮುಡಾ ನಿವೇ ಶನ ಹಂಚಿಕೆ ಪ್ರಕ ರಣ ಸಂಬಂಧ ಮೈಸೂರು ತಾಲೂಕು ಕೆಸರೆಯ ಸರ್ವೇ ನಂ. 462ರಲ್ಲಿ 3.16 ಎಕರೆ ಜಮೀನಿನ ಇದುವರೆಗಿನ ಬೆಳವಣಿಗೆಯ ಬಗ್ಗೆ ತನಿಖಾ ತಂಡ ಕೂಲಂಕಷವಾಗಿ ತನಿಖೆ ನಡೆಸಲಿದೆ. 1992ರಲ್ಲಿ ಮುಡಾದಿಂದ ಜಮೀನು ವಶಕ್ಕೆ ಪಡೆದಿರುವ ಪ್ರಕ್ರಿಯೆ, 1998ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟಿದ್ದು, 2003ರಲ್ಲಿ ಮೂಲ ಖಾತೆದಾರನ ಹೆಸರಿಗೆ ಜಮೀನು ಪರ ಭಾರೆ, 2004ರಲ್ಲಿ ಜಮೀನು ಖರೀದಿ ಮಾಡಿದ ಸಿದ್ದರಾಮಯ್ಯ ಪತ್ನಿಯ ಸಹೋದರ ಮಲ್ಲಿಕಾರ್ಜುನಸ್ವಾಮಿ, 2005ರಲ್ಲಿ ಕೃಷಿ ಭೂಮಿ ಯಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ, 2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಯಿಂದ ಸಿದ್ದರಾಮಯ್ಯ ಪತ್ನಿಗೆ ದಾನದ ಮೂಲಕ ಜಮೀನು ನೀಡಿದ್ದನ್ನು ಪರಿಶೀಲಿಸಲಿದೆ.
2021ರಲ್ಲಿ ಪಾರ್ವತಿ ಅವರಿಗೆ ಬದಲಿ 14 ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಿ ರುವ ಬಗ್ಗೆ ತನಿಖೆಯಾಗಲಿದೆ. ಹಾಗೆಯೇ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿದ್ದರಾಮಯ್ಯ ಅವರ ಪಾತ್ರ ಹಾಗೂ ಅವರ ಕುಟುಂಬದ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.
ತನಿಖಾಧಿಕಾರಿಗಳ ಕಾರ್ಯವೈಖರಿ
1. ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಬಹುದು
2. ದಸ್ತಗಿರಿ ಮಾಡದೇ ತನಿಖೆ ನಡೆಸಬಹುದು
3. ಸಾಕ್ಷÂನಾಶ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಅವರನ್ನು ಬಂಧಿಸಬಹುದು
4. ತನಿಖೆ ಸಂದರ್ಭದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಬಹುದು, ಬಂಧಿಸದೆಯೂ ಇರಬಹುದು
5. ಆರೋಪಿಗಳನ್ನು ದಸ್ತಗಿರಿ ಮಾಡುವುದು ವಿಳಂಬವಾಗಬಹದು, ಒಂದು ವೇಳೆ ದಸ್ತಗಿರಿಯಾದರೆ ಸಿಆ ರ್ ಪಿಸಿ 439 ಅಡಿ ಜಾಮೀನು ಅರ್ಜಿ ಹಾಕಬೇಕಾಗುತ್ತದೆ. ಈ ವೇಳೆ ಪಿಪಿ ತಕರಾರು ಸಲ್ಲಿಸಿದರೆ ಜಾಮೀನು ವಿಳಂಬವಾಗಬಹುದು.
ಸಿದ್ದುಗೆ ಇರುವ ಸವಾಲುಗಳು
1. ದಸರಾ ಪ್ರಯುಕ್ತ ನ್ಯಾಯಾಲಯಗಳು ಅ. 2ರಿಂದ 13ರ ವರೆಗೆ ರಜೆ ಇರುವುದು
2. ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ತುರ್ತು ಆದೇಶ ನಿರಾಕರಿಸುವ ಸಾಧ್ಯತೆ ಹೆಚ್ಚು
ತನಿಖಾಧಿಕಾರಿಗಳ ಮುಂದಿನ ನಡೆ ಏನು?
1. ಎಫ್ಐಆರ್ ಅನಂತರ ಆರೋಪಿಗಳಿಗೆ ತನಿಖಾಧಿಕಾರಿ ನೋಟಿಸ್ ಕೊಡಬೇಕು
2. ಸಿಆರ್‌ಪಿಸಿ 41ಅಡಿ ನೋಟಿಸ್ ಜಾರಿ ಮಾಡಬೇಕು
3. ಮುಡಾದಲ್ಲಿ ಮೂಲದಾಖಲೆಗಳನ್ನು ವಶಪಡಿಸಿಕೊಳ್ಳುವುದು
4. ಆರೋಪಿಗಳಿಂದ ದಾಖಲೆಗಳನ್ನು ವಶಪಡಿಸಿಕೊಳ್ಳುವುದು
5. ಆಯಾ ಸಂದರ್ಭದಲ್ಲಿದ್ದ ಮುಡಾ ಅಧಿಕಾರಿಗಳನ್ನು ಪತ್ತೆ ಹಚ್ಚುವುದು
6. ಆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದು
7. ಹೆಚ್ಚುವರಿ ಆರೋಪಿಗಳು
ಕಂಡುಬಂದರೆ ಅವರನ್ನು ಪ್ರಕರಣಕ್ಕೆ ಸೇರಿಸುವುದು
8. ಅನಂತರ ದಾಖಲೆಗಳ ಪೋರ್ಜರಿಯಾಗಿದ್ದರೆ ಅಂತಹ ದಾಖಲೆಗಳನ್ನು ಎಫ್ಎಸ್‌ಎಲ್ ವರದಿ ಕೋರುವುದು
ಸಿದ್ದರಾಮಯ್ಯ ಅವರ ಮುಂದಿನ ಆಯ್ಕೆಗಳು
1. ಸಿಆರ್‌ಪಿಸಿ 438 ಅಡಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕುವುದು
2. ಜಾಮೀನು ಜತೆಗೆ 482ರ ಅಡಿ ಪ್ರಕರಣ ರದ್ದತಿ ಕೋರಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಹಾಗೂ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದು
3. ಎಫ್ಐಆರ್ ಮಾಡಿರುವುದನ್ನು ಪ್ರಶ್ನೆ ಮಾಡುವುದು
4. ನ್ಯಾಯಾಲಯದ ಆದೇಶವನ್ನೇ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದು
5. ಹೈಕೋರ್ಟ್ ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.