![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 2, 2022, 3:31 PM IST
ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ ಬಳಿ ಇರುವ ಅಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು ಅದು ಕೊಲೆ ಎಂದು ಪಾಲಕರು ಆರೋಪಿಸಿದ್ದಾರೆ.
ಯುವಕನನ್ನು ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾದ ಮೌನೇಶ ಬಸವರಾಜ ಬಡಿಗೇರ (22) ಎಂದು ಗುರ್ತಿಸಲಾಗಿದೆ.
ಯುವಕನ ಮೈಮೇಲೆ ಚೂಪಾದ ವಸ್ತುವಿನಿಂದ ಅಲ್ಲಲ್ಲಿ ಚುಚ್ಚಿದ ಗಾಯಗಳು ಕಂಡು ಬಂದಿದ್ದು ಕೊಲೆ ಆರೋಪಕ್ಕೆ ಪುಷ್ಠಿ ನೀಡಿದಂತಾಗಿದೆ.
ಶವ ದೊರೆತ ಸ್ಥಳಕ್ಕೆ ಸಿಪಿಐ ಆನಂದ ವಾಗ್ಮೋಡೆ, ಮುದ್ದೇಬಿಹಾಳ ಪಿಎಸೈ ರೇಣುಕಾ ಜಕನೂರ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತ ಯುವಕ ಮೌನೇಶ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಬಸವರಾಜ ಬಡಿಗೇರ ಜ.30 ರಂದು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಗನ ಶವ ಪತ್ತೇಯಾದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪಾಲಕರು ತಮ್ಮ ಮಗ ಮೌನೇಶನೊಂದಿಗೆ ತಾಳಿಕೋಟೆ ಪಟ್ಟಣದ ಕಾಳಮ್ಮನ ಗುಡಿಯ ಪೂಜಾರಿಯೊಬ್ಬನ ಮಗಳು ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಇದೇ ವಿಷಯವಾಗಿ ಹಲವು ಬಾರಿ ಜಗಳ ಆಗಿತ್ತು. ಆಕೆಯ ಪಾಲಕರು ನಮ್ಮ ಮಗನಿಗೆ ಹಲವು ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆಕೆಯ ಬಲವಂತಕ್ಕೆ ನನ್ನ ಮಗ ಬಲಿಯಾಗಿದ್ದ. ಇತ್ತೀಚೆಗೆ ಆಕೆಯ ಸಹವಾಸದಿಂದ ದೂರ ಇರಲು ಆತ ಬೆಂಗಳೂರಿಗೆ ಹೋಗಿದ್ದ. ಇದೀಗ ಶವವಾಗಿ ದೊರೆತಿದ್ದಾನೆ. ಆಕೆಯ ಕಡೆಯವರೇ ಈ ಕೊಲೆ ಮಾಡಿದ್ದಾರೆ. ನಮಗೂ ಫೋನ್ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ನಮಗೆ ಪೊಲೀಸ್ ಭದ್ರತೆ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಸುರತ್ಕಲ್ : ಯುವಕನ ಮೇಲೆ ಗುಂಪಿನಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.