Mudhola: ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ; ಬೃಹತ್‌ ಪ್ರತಿಭಟನೆ, ಬಂದ್‌

ಸ್ಥಳಕ್ಕೆ ಡಿಸಿ ಭೇಟಿ,  ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಆ.14ರಂದು ಸಭೆ, ಪ್ರತಿಭಟನೆ ಹಿಂಪಡೆದ‌ ರೈತರು

Team Udayavani, Aug 12, 2024, 7:02 PM IST

Mudhola

ಮುಧೋಳ (ಬಾಗಲಕೋಟೆ ಜಿಲ್ಲೆ): ಘಟಪ್ರಭಾ ನದಿ‌ ಪ್ರವಾಹಕ್ಕೆ ಹಾನಿಗೊಳಗಾದ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ನಡೆದ ಸ್ವಯಂ ಪ್ರೇರಿತ ಬಂದ್‌, ಪ್ರತಿಭಟನೆ ಯಶಸ್ವಿಯಾಯಿತು.

ಬೆಳಗ್ಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ  ಪ್ರತಿಭಟನಾ ಮೆರವಣಿಗೆ ಯಾದವಾಡ ವೃತ್ತಕ್ಕೆ ಆಗಮಿಸಿ ಜಮಖಂಡಿ-ಧಾರವಾಡ ರಾಜ್ಯ ಹೆದ್ದಾರಿ ಸಂಪರ್ಕ‌ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.  ಈ ವೇಳೆ ಮಾತನಾಡಿದ ಬಸವಂತ ಕಾಂಬಳೆ, ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು. ಪ್ರವಾಹದಿಂದ  ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಎನ್‌ಡಿಆರ್‌ ಎಫ್‌   ಹಾಗೂ ಎಸ್‌ಡಿಆರ್‌ಎಫ್‌ ಪರಿಹಾರ ಪರಿಷ್ಕರಿಸಿ ಹೆಚ್ಚಿನ ಪರಿಹಾರ ಒದಗಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದೆ. ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಬೆಳಕು ಚೆಲ್ಲುವ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಸರ್ಕಾರ ಕೂಡಲೇ ನಮ್ಮ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ‌ ನಮ್ಮ ಹೋರಾಟ ಉಗ್ರರೂಪ‌ ಪಡೆಯಲಿದೆ ಎಂದು ಎಚ್ಚರಿಸಿದರು.

ರೈತ ಮುಖಂಡ ದುಂಡಪ್ಪ ಲಿಂಗರಡ್ಡಿ ಮಾತನಾಡಿ, ಮುಧೋಳ ತಾಲೂಕಿನಲ್ಲಿ‌ ಘಟಪ್ರಭಾ ಪ್ರವಾಹದಿಂದ ಪ್ರತಿವರ್ಷ ಬೆಳೆಹಾನಿಯುಂಟಾಗುತ್ತಿದೆ. ಸರ್ಕಾರ ನಮ್ಮ ತಾಲೂಕಿನ ಪ್ರವಾಹಪೀಡಿತ ಹಳ್ಳಿಗಳ ಮುಳುಗಡೆ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರವಾಹದಲ್ಲಿ ಹಾನಿಯಾದ ಕಬ್ಬು ಬೆಳೆಗೆ ಎಕರೆಗೆ 1 ಲಕ್ಷ ರೂ. ಹಾಗೂ ಇತರೆ ಬೆಳೆಗೆ 50ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ವೆಂಕಣ್ಣ ಮಳಲಿ‌ ಮಾತನಾಡಿದರು.

ಜಿಲ್ಲಾಧಿಕಾರಿ ಭೇಟಿ; ಸರ್ವೇ ನಡೆಸಲು ಸೂಚನೆ: 
ರೈತರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ರೈತರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ಶಾಶ್ವತ ಪರಿಹಾರಕ್ಕಾಗಿ ಮುಂದಿಟ್ಟರುವ ನಿಮ್ಮ‌ ಬೇಡಿಕೆ ಪರಿಗಣಿಸಿ ಮುಧೋಳ ತಾಲೂಕಿನ 34 ಹಳ್ಳಿಗಳ ಕುರಿತು ಸರ್ವೇ ನಡೆಸಿ ಯಾವ ಗ್ರಾಮಗಳು ಸ್ಥಳಾಂತರಕ್ಕೆ ಅರ್ಹವಾಗಿವೆ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ಕೊಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ಪರಿಹಾರ ಪರಿಷ್ಕರಣೆ ಕಾರ್ಯ ಸರ್ಕಾರದ ಮಟ್ಟದಲ್ಲಾಗಬೇಕು. ಆದರೂ ನಿಮ್ಮ ಬೇಡಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಉಸ್ತುವಾರಿ ಸಚಿವರಿಗೆ ದೂರವಾಣಿ ಕರೆ: 
ಜಿಲ್ಲಾಧಿಕಾರಿಗಳ‌‌ ಮಾತಿಗೆ ತೃಪ್ತರಾಗದ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮೊಂದಿಗೆ ಮಾತನಾಡಬೇಕು ಸಭೆ ನಡೆಸಿ‌ ನಮ್ಮ ಸಮಸ್ಯೆ ಆಲಿಸಬೇಕು ಎಂದು ಪಟ್ಟು‌ಹಿಡಿದರು. ಈ ವೇಳೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೊಂದಿಗೆ ದೂರವಾಣಿ‌ ಮೂಲಕ‌ ಮಾತನಾಡಿ‌ ರೈತರ ಬೇಡಿಕೆ ಬಗ್ಗೆ ಮನವರಿಕೆ‌ ಮಾಡಿಕೊಟ್ಟರು.
ಸಚಿವರು ಆ.14ರಂದು ರೈತರೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು. ಸಚಿವರ ಮಾತಿಗೆ ಒಪ್ಪಿಗೆ ನೀಡಿದ ಹೋರಾಟಗಾರರು ಆ.14ರವರೆಗೆ ಹೋರಾಟ ಮುಂದೂಡಿದರು.

ಸ್ವಯಂಪ್ರೇರಿತ ಬಂದ್ :
ನೆರೆ ಸಂತ್ರಸ್ತರ  ಪ್ರತಿಭಟನೆ ಹಿನ್ನೆಲೆ ನಗರದ ವ್ಯಾಪಾರಿಗಳು‌ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಂದ್‌ ಮಾಡಿ‌  ಬೆಂಬಲ‌ ವ್ಯಕ್ತಪಡಿಸಿದರು. ರೈತರು ಹಾಗೂ ನೆರೆ ಸಂತ್ರಸ್ತರೊಂದಿಗೆ ವಿವಿಧ ಸಂಘಟನೆಗಳ‌ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಪಶು ವೈದ್ಯಾಧಿಕಾರಿ ವಿರುದ್ಧ ಆಕ್ರೋಶ :
ಜಿಲ್ಲಾಧಿಕಾರಿಗಳು ರೈತರ ಸಮಸ್ಯೆ ಆಲಿಸುವಾಗ ತಾಲೂಕು ಪಶು ವೈದ್ಯಾಧಿಕಾರಿ‌ ಗೋವಿಂದ ರಾಠೋಡ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಜಾನುವಾರುಗಳಿಗೆ ಸೂಕ್ತ ಮೇವು ನೀಡುವುದಿಲ್ಲ. ಹಲವಾರು ವರ್ಷಗಳಿಂದ ಮುಧೋಳದಲ್ಲಿಯೇ ಠಿಕಾಣಿ ಹೂಡಿರುವ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವೇ ಕ್ರಮಕ್ಕೆ‌ ಮುಂದಾಗುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ರಸ್ತೆಯಲ್ಲಿಯೇ ಅಡುಗೆ ತಯಾರಿ:
ಪ್ರತಿಭಟನೆಯಲ್ಲಿ‌ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹೋರಾಟಗಾರರಿಗೆ ರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಊಟಕ್ಕೆ‌ ಬಡಿಸಲಾಯಿತು. ನೂರಾರು ರೈತರು ಪ್ರತಿಭಟನಾ ಸ್ಥಳದಲ್ಲಿಯೇ ಊಟ ಮಾಡಿ ಮರಳಿ‌ ಪ್ರತಿಭಟನೆಯಲ್ಲಿ‌ ಪಾಲ್ಗೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ವಿನೋದ ಹತ್ತಳ್ಳಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಇದ್ದರು. ಸುಭಾಷ ಶಿರಬೂರ, ಹನಮಂತ ಅಡವಿ, ದುಂಡಪ್ಪ ಲಿಗರಡ್ಡಿ, ದುಂಡಪ್ಪ ಯರಗಟ್ಟಿ, ನಾಗಪ್ಪ ಅಂಬಿ, ಸದಪ್ಪ ತೇಲಿ, ಯಲ್ಲಪ್ಪ‌ ಲೋಗಾವಿ, ಮುತ್ತಪ್ಪ‌ ಕೋಮಾರ, ಸಂಗಣ್ಣ ಕಾತರಕಿ, ಪರಶು ನಿಗಡೆ, ಬಂಡು ಘಾಟಗೆ ಸೇರಿದಂತೆ ಇತರರು ಹೋರಾಟದಲ್ಲಿ‌ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.