![ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ](https://www.udayavani.com/wp-content/uploads/2025/02/marathon-1-415x264.jpg)
![ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ](https://www.udayavani.com/wp-content/uploads/2025/02/marathon-1-415x264.jpg)
Team Udayavani, Oct 23, 2024, 12:41 AM IST
ಮೂಲ್ಕಿ: ಇಲ್ಲಿನ ಅಕ್ಕಸಾಲಿಗರ ಕೇರಿಯ ಮನೆಯೊಂದರಲ್ಲಿ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದ ಮರುದಿನವೇ ಮತ್ತೊಂದು ಚಿರತೆ ಅಲ್ಲಲ್ಲಿ ಸಂಚರಿಸುತ್ತಿರುವ ಬಗ್ಗೆ ಸುದ್ದಿಯಾಗಿದೆ.
ಅಕ್ಕಸಾಲಿಗರ ಕೇರಿಯಲ್ಲಿರುವ ಮೂಲ್ಕಿಯ ಗೀತಾ ಜುವೆಲ್ಲರ್ಸ್ ಮಾಲಕ ನಾಗರಾಜ ಆಚಾರ್ಯ ಅವರ ಮನೆಯ ಆವರಣದ ಒಳಗೆ ಸಂಜೆ 6.30ರ ವೇಳೆಗೆ ಬಂದಿದ್ದ ಚಿರತೆ ಕಾರು ನಿಲ್ಲಿಸುವ ಜಾಗದಲ್ಲಿದ್ದ ಬೆಕ್ಕೊಂದನ್ನು ಹಿಡಿದುಕೊಂಡು ಹೋಗಿರುವುದು ಅವರ ಸಿಸಿಟಿವಿ ದೃಶ್ಯಗಳಿಂದ ದೃಢವಾಗಿದೆ. ಮರುದಿನ ಕೊಯ್ನಾರ್ ಪರಿಸರ ಮತ್ತು ವಿಜಯ ಕಾಲೇಜು ರಸ್ತೆಯ ಯೂನಿಯನ್ ಕ್ಲಬ್ ಬಳಿಯ ರಸ್ತೆಯಲ್ಲಿ ಚಿರತೆಯನ್ನು ಕಂಡಿರುವ ಬಗ್ಗೆ ಸ್ಥಳೀಯರು ಉದಯವಾಣಿಗೆ ತಿಳಿಸಿದ್ದಾರೆ.
ಮೂಲ್ಕಿ ಕೊಯ್ನಾರು, ಅಕ್ಕಸಾಲಿಗರ ಕೇರಿ ಹಾಗೂ ವಿಜಯ ಕಾಲೇಜು ರಸ್ತೆ ಸಮೀಪದ ನಿವಾಸಿಗಳು ರಾತ್ರಿಯಾಗುವಷ್ಟರಲ್ಲಿ ಮನೆ ಸೇರಿಕೊಳ್ಳುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ. ನಾಗರಾಜ ಅಚಾರ್ಯಅವರ ಮನೆಯ ಕಾಂಪೌಂಡ್ ಬಳಿ ಅರಣ್ಯ ಇಲಾಖೆಯನ್ನು ಸೆರೆ ಹಿಡಿಯಲು ಗೂಡು ಇರಿಸಿದೆ.
ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ನಡೆಸುವ ಮೂಲಕ ವಿನೂತನ ಪ್ರತಿಭಟನೆ
Stock Market: ಕಾರ್ಪೋರೇಟ್ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ
Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ
Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?
Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ
You seem to have an Ad Blocker on.
To continue reading, please turn it off or whitelist Udayavani.