ಹೈದರಾಬಾದ್ ಬೌಲಿಂಗಿಗೆ ಹೆದರಿದ ಮುಂಬೈ
Team Udayavani, Nov 3, 2020, 11:48 PM IST
ಶಾರ್ಜಾ: ಪ್ಲೇ ಆಫ್ ಹಂತಕ್ಕೇರುವ ಕನಸಿನೊಂದಿಗೆ ಆಡಲಿಳಿದ ಸನ್‌ರೈಸರ್ ಹೈದರಾಬಾದ್ ತನ್ನ ಬಿಗು ಬೌಲಿಂಗ್ ದಾಳಿಯ ಮೂಲಕ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 149 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಅಮೋಘ ಆಟದ ಮೂಲಕ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿರುವ ಮತ್ತು ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಮುಂಬೈಯ ಆರಂಭ ತೀರಾ ನಿಧಾನಗತಿಯಿಂದ ಕೂಡಿತ್ತು. ನಾಯಕ ರೋಹಿತ್ ಶರ್ಮ (4) ಔಟಾದರೆ. ಡಿ ಕಾಕ್ ಸತತ ಸಿಕ್ಸರ್, ಬೌಂಡರಿ ಸಿಡಿಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಇವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ ಸಂದೀಪ್ ಶರ್ಮ ಇವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಡಿ ಕಾಕ್ 13 ಎಸೆತಗಳಿಂದ 25 ರನ್ ಗಳಿಸಿದರು. ಆರಂಭಿಕರ ಎರಡೂ ವಿಕೆಟ್ ಸಂದೀಪ್ ಪಾಲಾದವು. ಪವರ್ ಪ್ಲೇ ವೇಳೆ ಮುಂಬೈ ಜೋಶ್ ತೋರಲೇ ಇಲ್ಲ. ಎರಡು ವಿಕೆಟಿಗೆ 48 ರನ್ ಮಾಡಿ ಸಂಕಷ್ಟಕ್ಕೆ ಸಿಲುಕಿತು.
ಸೂರ್ಯ-ಇಶಾನ್ ಆಸರೆ
ಆರಂಭಿಕ ವಿಕೆಟ್‌ಗಳೆರಡು ಬೇಗನೆ ಕಳೆದುಕೊಂಡು ಅಪಾಯದಂಚಿನಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಎಚ್ಚರಿಕೆಯ ಆಟವಾಡುವ ಮೂಲಕ ಆಸರೆಯಾಗಿ ನಿಂತರು. ಓವರ್‌ಗೆ ಒಂದರಂತೆ ಸಿಕ್ಸರ್ ಮತ್ತು ಬೌಂಡರಿ ಬಾರಿಸುತ್ತ 10 ಓವರ್ ವೇಳೆ ತಂಡದ ಮೊತ್ತವನ್ನು 80 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ 12ನೇ ಓವರ್ ಎಸೆಯಲು ಬಂದ ಶಾಬಾಜ್ ನದೀಮ್ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗಿಗೆ ಮುಂದಾದ ಸೂರ್ಯಕುಮಾರ್ ಅವರನ್ನು ಸ್ಟಂಪ್ಡ್ ಬಲೆಗೆ ಬೀಳಿಸಿದರೆ, ಡೇಂಜರಸ್ ಬ್ಯಾಟ್ಸ್‌ಮನ್ ಕೃಣಾಲ್ ಪಾಂಡ್ಯರನ್ನು ಖಾತೆ ತೆರೆಯುವ ಮುನ್ನವೇ ಔಟ್ ಮಾಡುವ ಮೂಲಕ ಒಂದೇ ಓವರ್‌ನಲ್ಲಿ ಎರಡು ದೊಡ್ಡ ವಿಕೆಟ್ ಬೇಟೆಯಾಡಿದರು. ಅನಂತರದಲ್ಲಿ ಕ್ರೀಸ್‌ಗಿಳಿದ ಸೌರಬ್ ತಿವಾರಿಯೂ ರಶೀದ್ ಖಾನ್ ಗೂಗ್ಲಿ ಬಲೆಗೆ ಬಿದ್ದರು. ಅಲ್ಲಿಗೆ ಹೈದರಾಬಾದ್ ಕೈ ಮೇಲಾಯಿತು.
ಸೂರ್ಯಕುಮಾರ್ 29 ಎಸೆತಗಳಿಂದ 36 ರನ್ ಗಳಿಸಿದರು. ಸಿಡಿಸಿದ್ದು 5 ಬೌಂಡರಿ. ಇಶಾನ್ ಕಿಶನ್ ಗಳಿಕೆ 33 (ಒಂದು ಬೌಂಡರಿ, 2 ಸಿಕ್ಸರ್). 15 ಓವರ್ ಮುಕ್ತಾಯಕ್ಕೆ ತಂಡದ ಮೊತ್ತ ನೂರರ ಗಡಿ ದಾಟಲು ಪರದಾಡುತ್ತಿತ್ತು ಈ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ಪೊಲಾರ್ಡ್ 25 ಎಸೆತಗಳಿಂದ 41 ರನ್ ಪೇರಿಸುವ ಜತೆಗೆ ತಂಡದ ಮೊತ್ತವನ್ನು 150ರ ಸನಿಹಕ್ಕೆ ಏರಿಸುವಲ್ಲಿ ಸಹಕಾರಿಯಾದರು.
ಹೈದರಾಬಾದ್ ಪರ ಸಂದೀಪ್ ಶರ್ಮ 3, ಶಾಬಾಜ್ ನದೀಮ್ ಮತ್ತು ಜಾಸನ್ ಹೋಲ್ಡರ್ ತಲಾ 2 ವಿಕೆಟ್ ಕಿತ್ತು ಮಿಂಚಿದರು.
ರೋಹಿತ್ ಆಗಮನ ಸ್ನಾಯು ಸೆಳೆದಿಂದ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮ ಈ ಪಂದ್ಯದ ಮೂಲಕ ಮತ್ತೆ ಆಡಲಿಳಿದರು. ಮುಂಬೈ ತಂಡ ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನಕ್ಕೆ ಪ್ಯಾಟಿನ್ಸನ್ ಹಾಗೂ ಧವಳ್ ಕುಲಕರ್ಣಿ ಅವಕಾಶ ಪಡೆದರು. ಹೈದರಾಬಾದ್ ಒಂದು ಬದಲಾವಣೆ ಮಾಡಿಕೊಂಡಿತು. ಅಭಿಷೇಕ್ ಶರ್ಮ ಬದಲು ಪ್ರಿಯಂ ಗರ್ಗ್ ಅವರನ್ನು ಆಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.