Mumbai: ಬಾಯ್‌ಫ್ರೆಂಡ್ ಮಾಂಸಾಹಾರ ತಿನ್ನಬೇಡ ಎಂದಿದ್ದಕ್ಕೆ ಪೈಲಟ್ ಆತ್ಮಹ*ತ್ಯೆ!
ದಿಲ್ಲಿ ಮೂಲದ ಪ್ರೇಮಿಯ ಬಂಧಿಸಿದ ಮುಂಬೈ ಪೊಲೀಸರು, ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನವೆಂದು ಯುವತಿ ಕುಟುಂಬದ ಆರೋಪ
Team Udayavani, Nov 27, 2024, 10:46 PM IST
ಮುಂಬೈ: ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ (25 ವರ್ಷ) ಅಂಧೇರಿಯ ಮರೋಲ್‌ನಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್‌ಫ್ರೆಂಡ್, ದಿಲ್ಲಿ ಮೂಲದ 27 ವರ್ಷದ ಆದಿತ್ಯ ಪಂಡಿತ್‌ನನ್ನು ಪೊವೈ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ ಅಂಧೇರಿ (ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್‌ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ಸೃಷ್ಟಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಆಗಿದ್ದೇನು?:
ಪೊಲೀಸರ ಮಾಹಿತಿ ಪ್ರಕಾರ, ಆದಿತ್ಯ ಪಂಡಿತ್ ಮಾಂಸಾಹಾರ ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಸಾಕಷ್ಟು ಚರ್ಚೆಯಾಗಿ ಆಕೆಯ ಅರ್ಧದಾರಿಯಲ್ಲೇ ಬಿಟ್ಟು ಆದಿತ್ಯ ಮನೆ ಕಡೆಗೆ ತೆರಳಿದ್ದಾನೆ. ಬಳಿಕ ಸೃಷ್ಟಿ ರವಿವಾರ ಸಂಜೆ ಕೆಲಸದ ಅವಧಿ ಮುಗಿಸಿ ವಾಪಸ್ ಬಂದ ಮೇಲೂ ಆಕೆಯ ಮನೆಯಲ್ಲಿ ಜಗಳವಾಡಿದ್ದಾರೆ. ಬಳಿಕ ಆದಿತ್ಯ ಸೋಮವಾರ ಬೆಳಗ್ಗೆ 1 ಗಂಟೆಗೆ ದಿಲ್ಲಿಗೆ ಮರಳಲು ಆಕೆಯ ಬಿಟ್ಟು ತೆರಳಿದ್ದಾನೆ. ಬಳಿಕ ಸೃಷ್ಟಿ ಆದಿತ್ಯನಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಆದಿತ್ಯ ಆ ಕೂಡಲೇ ಹೊರಟು ಆಕೆಯ ಮನೆಗೆ ಧಾವಿಸಿದ್ದಾಗ ಆಕೆಯ ಮನೆ ಬಾಗಿಲು ಬೀಗ ಹಾಕಿತ್ತು. ನಕಲಿ ಕೀ ಬಳಸಿ ಒಳ ಹೋಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಆಕೆ ಜೀವಂತವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಆಕೆಯ ಕುಟುಂಬಸ್ಥರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ಗಾಗಿ ತರಬೇತಿ ಪಡೆಯುತ್ತಿರುವಾಗ ಆದಿತ್ಯ ಮತ್ತು ಸೃಷ್ಟಿ ದೆಹಲಿಯಲ್ಲಿ ಭೇಟಿಯಾಗಿದ್ದರು. ತರಬೇತಿಯ ನಂತರ, ಸೃಷ್ಟಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆದಿತ್ಯ ಪಂಡಿತ್ ಪೈಲಟ್ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದಿತ್ಯ ಪಂಡಿತ್ ಸೃಷ್ಟಿಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋರಖ್‌ಪುರ ಮೂಲದ ಸೃಷ್ಟಿ ತುಲಿ ಅವರ ಕುಟುಂಬ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.