ನಗರಸಭೆಗೆ ನೂತನ ಕಟ್ಟಡ ಭಾಗ್ಯ :ಹಳೆಯ ತಾಲೂಕು ಕಚೇರಿ ಕಟ್ಟಡದ ಜಾಗದಲ್ಲಿ ನಿರ್ಮಿಸಲು ಪ್ರಸ್ತಾವ
Team Udayavani, Mar 12, 2022, 2:57 PM IST
ಉಡುಪಿ : ಪಾರ್ಕಿಂಗ್ ಸಹಿತ ಹಲವು ಕಾರಣಗಳಿಂದ ಇಕ್ಕಟ್ಟಿನಿಂದ ಕೂಡಿರುವ ಉಡುಪಿ ನಗರಸಭೆ ಆಡಳಿತ ಕಚೇರಿಯನ್ನು ಹಳೆ ತಾಲೂಕು ಕಚೇರಿ ಜಾಗದಲ್ಲಿ ನೂತ ನ ವಾ ಗಿ ನಿರ್ಮಿಸಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೆ ಸಿದ್ಧತೆ ನಡೆಯುತ್ತಿದ್ದು ಹಲವು ವರ್ಷಗಳ ಬೇಡಿಕೆಗೆ ಕಾಲ ಕೂಡಿ ಬಂದಿದೆ. ಕಂದಾಯ ಸಂಬಂಧಿತ ಕೆಲಸ ಕಾರ್ಯಗಳು ಆರಂಭಿಕ ಹಂತದಲ್ಲಿ ನಡೆಯುತ್ತಿದ್ದು, ಇದು ಮುಗಿದೊಡನೆ ಕಟ್ಟಡ ನಿರ್ಮಾಣಕ್ಕೆ
ನೀಲ ನಕ್ಷೆ ತಯಾರಾಗಲಿದೆ.
96 ಸೆಂಟ್ಸ್ ನಗರಸಭೆಗೆ
ಹಳೆ ತಾಲೂಕು ಕಚೇರಿ ಜಾಗ ಪ್ರಸ್ತುತ ನಿರುಪಯುಕ್ತವಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿತ್ತು. ಜನಪ್ರತಿನಿಧಿಗಳ ಬೇಡಿಕೆಯಂತೆ ನಗರಸಭೆ ಹೊಸ ಕಟ್ಟಡ ಕಟ್ಟಲು ಜಾಗದ ಮಂಜೂರಾತಿಗಾಗಿ ಕಂದಾಯ ಸಚಿವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆಯನ್ನು ಕೊಡಿಸುವ ಭರವಸೆ ಸಚಿವರು ನೀಡಿದ್ದು, ಇಲ್ಲಿನ 96 ಸೆಂಟ್ಸ್ ಜಾಗ ನಗರಸಭೆಗೆ ಸಿಗಲಿದೆ.
ವಿಶಾಲ ವಾಣಿಜ್ಯ ಸಂಕೀರ್ಣ ಕಟ್ಟಡ
ಇಲ್ಲಿರುವ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಕೆಡವಿ 96 ಸೆಂಟ್ಸ್ ಭೂಮಿಯಲ್ಲಿ ವ್ಯವಸ್ಥಿತ, ವಿಶಾಲವಾಗಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತದೆ. ನಗರಸಭೆ ಕಟ್ಟಡದ ಜತೆಗೆ ಆದಾಯವು ದೊರೆಯುವಂತೆ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆ, ಆಡಳಿತ ಕಚೇರಿ ಕಟ್ಟಡ, ಕಾನ್ಫರೆನ್ಸ್ ಹಾಲ್, ಮೀಟಿಂಗ್ ಹಾಲ್‌ಗಳು ಸುಸಜ್ಜಿತವಾಗಿ ನಿರ್ಮಾಣವಾಗಲಿವೆ.
ನಗರಸಭೆ ಹಿನ್ನೋಟ
1935ರಲ್ಲಿ ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಂದಿದ್ದು ಶೆಮ್ನಾಡ್ ಅವರು ಮೊದಲ ಪೌರಾಯುಕ್ತರಾಗಿದ್ದರು. 1960ರ ದಶಕದಲ್ಲಿ ಇದು ಪುರಸಭೆ ಆಯಿತು. 1970ರ ದಶ ಕ ದಲ್ಲಿ ಕೆ. ಎಂ. ಮಾರ್ಗದಲ್ಲಿರುವ ಈಗಿನ ಕಟ್ಟಡವನ್ನು ಅಂದಿನ ದಿಲ್ಲಿ ಮಹಾಪೌರರಾಗಿದ್ದ ಕೇದಾರ್‌ನಾಥ್ ಸಾಹನಿ ಉದ್ಘಾಟಿಸಿದ್ದರು. ಇದಕ್ಕೂ ಹಿಂದೆ ಮಿತ್ರ ನರ್ಸಿಂಗ್ ಹೋಂ ಬಳಿ ನಗರಸಭೆ ಆಡಳಿತ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
1995ರಲ್ಲಿ ಪುರ ಸಭೆಗೆ ತಾಗಿಕೊಂಡ ಐದು ಗ್ರಾ.ಪಂ. ವ್ಯಾಪ್ತಿ ಯನ್ನು ಸೇರಿಸಿ ನಗರ ಮುನ್ಸಿಪಲ್ ಕೌನ್ಸಿಲ… (ನಗರಸಭೆ) ಆಗಿ ಮೇಲ್ದ ರ್ಜೆಗೆ ಏರಿ ಸ ಲಾ ಯಿ ತು.
ಶೀಘ್ರ ಸ್ಥಳಾಂತರ
ನಗರಸಭೆ ಆಡಳಿತ ಕಚೇರಿಯನ್ನು ಮುಂದಿನ ದಿನಗಳಲ್ಲಿ ವಿಶಾಲ, ವ್ಯವಸ್ಥಿತವಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುವುದು. ಹಳೆ ತಾಲೂಕು ಕಚೇರಿ ಕಂದಾಯ ಇಲಾಖೆ ಜಾಗವನ್ನು ನಗರಸಭೆಗೆ ಪಡೆದುಕೊಂಡು ಕಟ್ಟಡ ನಿರ್ಮಿಸಲಾಗುವುದು. ಇದಕ್ಕೆ ಕಂದಾಯ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಈಗಾಗಲೇ ತಯಾರಿ ಕೆಲಸಗಳು ನಡೆಯುತ್ತಿದೆ.- ಸುಮಿತ್ರಾ ಎಸ್. ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ವ್ಯವಸ್ಥಿತ ಕಟ್ಟಡ ನಿರ್ಮಾಣ
ನಗರಸಭೆ ಕಚೇರಿ ನೂತನ ಕಟ್ಟಡ ಯೋಜನೆಗಾಗಿ ಪೂರ್ವ ತಯಾರಿ ಕೆಲಸಗಳು ನಡೆಯುತ್ತಿದೆ. ಹಳೆ ತಾಲೂಕು ಕಚೇರಿಯ ಕಟ್ಟಡ, ಭೂಮಿ ಕಂದಾಯ ಇಲಾಖೆಯದ್ದಾಗಿರುವುದರಿಂದ ಮೌಲ್ಯಮಾಪನ ನಡೆಯಬೇಕಿದೆ. ಈ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಹಂತಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಾಣವಾಗಲಿದೆ.
– ಯಶವಂತ್, ಎಇಇ, ಉಡುಪಿ ನಗರಸಭೆ
– ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನ. 14-20: ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.