ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಮರದ ಎಲೆ ಕತ್ತರಿಸಲು ಯೋಜನೆ: ಮುನಿರತ್ನ
Team Udayavani, Dec 13, 2022, 5:55 AM IST
ಮಂಗಳೂರು: ಎಲೆಚುಕ್ಕಿ ರೋಗ ಬಂದಿರುವ ಎಲ್ಲ ಅಡಿಕೆ ಮರಗಳ ಎಲೆಗಳನ್ನು ಕತ್ತರಿಸುವುದು ಹಾಗೂ ಅವುಗಳಿಗೆ ಕ್ರಿಮಿನಾಶಕ ಸಿಂಪಡಿಸುವುದು, ಕತ್ತರಿಸಿದ ಎಲೆಗಳನ್ನು ಸುಡುವುದು. ಹೀಗೊಂದು ಅಭಿಯಾನ ನಡೆಸಲು ತೋಟಗಾರಿಕೆ ಸಚಿವ ಮುನಿರತ್ನ ಮುಂದಾಗಿದ್ದಾರೆ.
ಸೋಮವಾರ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಾನು ರೋಗಬಾಧಿತ ತೋಟಗಳ ಪರಿಶೀಲನೆ ಮಾಡುವಾಗ ಕೃಷಿಕರೊಬ್ಬರು ಇದೇ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿರುವುದು ತಿಳಿಯಿತು. ಅವರ ಸಲಹೆಯಂತೆ ಎಲ್ಲರೂ ಇದನ್ನು ಪಾಲಿಸಿದರೆ ಮಾತ್ರ ಇದು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
7 ಜಿಲ್ಲೆಗಳ 42,504 ಹೆಕ್ಟೇರ್‌ನಲ್ಲಿ ರೋಗ
ರಾಜ್ಯದ 7 ಜಿಲ್ಲೆಗಳಲ್ಲಿ ಅಂದಾಜು 42,504 ಹೆಕ್ಟೇರ್ ಪ್ರದೇಶದಲ್ಲಿ ರೋಗವಿರುವುದು ಕಂಡುಬಂದಿದೆ. ಶಿಲೀಂಧ್ರದಿಂದ ಬರುವ ರೋಗ ಇದಾಗಿದೆ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಎಲೆಗಳನ್ನು ಕತ್ತರಿಸಬೇಕು, ಆ ಬಳಿಕ ಅವುಗಳನ್ನು ಸುಡಬೇಕು, ಅನಂತರ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು. ಕೀಟನಾಶಕಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಎಂದು ತಿಳಿಸಲಾಗುವುದು, ಅಷ್ಟೇ ಹಾಕಬೇಕು. ಇದಕ್ಕೆ ಬೇಕಾದ ಸಂಸ್ಥೆಯನ್ನೂ ನಾವು ಅಂತಿಮಗೊಳಿಸುತ್ತೇವೆ. ಎಲ್ಲ ರೈತರೂ ಇದನ್ನು ಪಾಲಿಸಬೇಕು ಎಂದರು.
ದೋಟಿ, ಏಣಿ ಉಚಿತ
ಇದಕ್ಕೆ ಬೇಕಾದ ದೋಟಿ, ಏಣಿಯನ್ನು ಉಚಿತವಾಗಿ ಒದಗಿಸಲಾಗುವುದು. ಪ್ರಸ್ತುತ ಕೀಟನಾಶಕ ಸಿಂಪಡಣೆಗೆ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 15 ಕೋಟಿ ರೂ.ಗೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಮುಂದಿರಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ರೋಗಬಾಧೆಗೊಳಗಾದ ತೋಟ, ಅಲ್ಲಿಗೆ ಅಗತ್ಯವಿರುವ ಕೀಟನಾಶಕದ ಪ್ರಮಾಣ ಇತ್ಯಾದಿ ವಿವರವಿರುವ ವರದಿಯನ್ನು ಅಧಿಕಾರಿಗಳಿಂದ ಇದೇ ತಿಂಗಳ 25ರೊಳಗೆ ತರಿಸಿಕೊಳ್ಳಲಾಗುವುದು, ಆ ಬಳಿಕ ಎಲೆ ಕತ್ತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಸಮಾಲೋಚನ ಸಭೆ
ನಾನು ಇಲ್ಲಿಂದ ಚಿಕ್ಕಮಗಳೂರಿನ ರೋಗಬಾಧಿತ ತೋಟಗಳಿಗೆ ಭೇಟಿ ನೀಡುತ್ತೇನೆ. ಬಳಿಕ ಈ ಕುರಿತು ಸಭೆ ನಡೆಸಲಿದ್ದು, ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ. ತ್ರಿಪುರದಲ್ಲಿ ಕೂಡ ಈ ರೋಗ ಬಂದಿದೆ, ಆದರೆ ಹೆಚ್ಚು ಅಡಿಕೆ ಬೆಳೆಯುವ ಆಂಧ್ರದಲ್ಲಿ ಕಂಡುಬಂದಿಲ್ಲ ಎಂದರು.
ಸದ್ಯ ರೋಗಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ರೋಗ ತಗ್ಗಿಲ್ಲ, ಹೆಚ್ಚುತ್ತಲೇ ಇದೆ ಎಂದು ರೈತರು ತಿಳಿಸಿದ್ದಾರೆ. ತಜ್ಞರು ಇದುವರೆಗೆ ಇದಕ್ಕೆ ಸಮರ್ಪಕವಾಗಿ ಯಾವ ಔಷಧ ಸಿಂಪಡಣೆ ಮಾಡಬೇಕೆಂಬ ಬಗ್ಗೆಯೂ ಸಲಹೆ ಕೊಟ್ಟಿಲ್ಲ ಎಂದರು. ಇಸ್ರೇಲ್‌ಗೆ ಪ್ರವಾಸಗೈಯುತ್ತಿದ್ದು ಅಲ್ಲಿನ ತಜ್ಞರೊಂದಿಗೆ ಅಡಿಕೆಯ ಎಲೆಚುಕ್ಕಿ ರೋಗದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದೂ ತಿಳಿಸಿದರು.
ಪರಿಹಾರ ಪರಿಷ್ಕರಣೆ
ಅಡಿಕೆ ಹಾಗೂ ತೆಂಗಿನ ಮರಕ್ಕೆ ಪರಿಹಾರ ರೂಪದಲ್ಲಿ ಕೊಡುವ ಮೊತ್ತ 50 ವರ್ಷ ಹಳೆಯದಾಗಿದ್ದು, ತೀರಾ ಅತ್ಯಲ್ಪವಾಗಿರುವುದರಿಂದ ಅದನ್ನು ಪರಿಷ್ಕರಿಸುವ ವಿಚಾರ ಚರ್ಚೆಯಲ್ಲಿದೆ ಎಂದರು.
ತೋಟಗಾರಿಕೆ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ನಾಗರಾಜ್ ಎಚ್.ಎಂ., ಜಂಟಿ ನಿರ್ದೇಶಕ ಸಸ್ಯಸಂರಕ್ಷಣೆ ಕದಿರೇಗೌಡ, ದ.ಕ. ಉಪನಿರ್ದೇಶಕ ಎಚ್.ಆರ್. ನಾಯಕ್, ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.