Ayodhya Temple: ಭಗವಾನ್ ಶ್ರೀರಾಮನ ವಿಗ್ರಹ ರಚನೆಯಲ್ಲಿ ಮುಸ್ಲಿಂ ಶಿಲ್ಪಿಗಳ ಕೈಚಳಕ
ನಾಗೇಂದ್ರ ತ್ರಾಸಿ, Dec 14, 2023, 1:46 PM IST
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬೃಹತ್ ರಾಮಮಂದಿರದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೇ ರಾಮಮಂದಿರ ಉದ್ಘಾಟನಾ ಸಮಾರಂಭ, ವಿಗ್ರಹ ಸ್ಥಾಪನೆಯ ರೂಪರೇಷೆ ಸಿದ್ಧಗೊಂಡಿದ್ದು, ಅಯೋಧ್ಯೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಏತನ್ಮಧ್ಯೆ ಪಶ್ಚಿಮಬಂಗಾಳದ ಉತ್ತರ 24 ಪರಾಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಅಯೋಧ್ಯೆ ದೇವಾಲಯದ ಅಲಂಕಾರಕ್ಕಾಗಿ ಭಗವಾನ್ ಶ್ರೀರಾಮನ ವಿಗ್ರಹ ರಚನೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.
ಯಾರೀವರು?
ಮೊಹಮ್ಮದ್ ಜಮಾಲುದ್ಧೀನ್ ಮತ್ತು ಅವರ ಮಗ ಬಿಟ್ಟು ಅಯೋಧ್ಯೆ ರಾಮಮಂದಿರದ ಸಂಕೀರ್ಣವನ್ನು ಅಲಂಕರಿಸುವ ಭವ್ಯವಾದ ಶ್ರೀರಾಮನ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ರಾಮರಾಜ್ಯದ ನೆನಪನ್ನು ಮರುಕಳಿಸುವ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನ ಭರದಿಂದ ಸಾಗಿದೆ. ಭಗವಾನ್ ರಾಮಲಲ್ಲಾನ ವಿಗ್ರಹ ಸ್ಥಾಪನೆಯ ಗರ್ಭಗುಡಿಗೆ ನೇಪಾಳದಿಂದ ತಂದ ಪವಿತ್ರ ಸಾಲಿಗ್ರಾಮ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಮತ್ತೊಂದೆಡೆ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಡೀ ಅಯೋಧ್ಯಾ ನಗರವನ್ನು ಅಲಂಕರಿಸುವ ಕಾರ್ಯ ನಡೆಯುತ್ತಿದೆ. ವಿದ್ಯುದೀಪಗಳಿಂದ ಅಲಂಕಾರಗೊಳ್ಳಲಿರುವ ರಸ್ತೆಯ ಸ್ಥಳಗಳಲ್ಲಿ ಭಗವಾನ್ ಶ್ರೀರಾಮನ ವಿಗ್ರಹಗಳನ್ನು ಇಡಲು ಸಿದ್ಧತೆ ನಡೆಯುತ್ತಿದೆ.
ಕುತೂಹಲಕಾರಿ ಅಂಶ ಎಂಬಂತೆ ಈ ಅಲಂಕಾರಿಕ ಶ್ರೀರಾಮನ ವಿಗ್ರಹಗಳು ಅಯೋಧ್ಯೆಯಿಂದ ದೂರದಲ್ಲಿರುವ ಪಶ್ಚಿಮಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. 24 ಪರಗಣದಲ್ಲಿನ ದತ್ತಪುಕುರ್ ಎಂಬಲ್ಲಿ ಭಗವಾನ್ ಶ್ರೀರಾಮನ ಬೃಹತ್ ಗಾತ್ರದ ಫೈಬರ್ ಮೂರ್ತಿಗಳನ್ನು ಜಮಾಲುದ್ದೀನ್ ಮತ್ತು ಪುತ್ರ ಬಿಟ್ಟು ತಯಾರಿಸುತ್ತಿದ್ದಾರೆ. ಮಳೆ ಹಾಗೂ ಬಿಸಿಲಿನ ತಾಪಮಾನವನ್ನು ತಡೆದುಕೊಂಡು ಗಮನಾರ್ಹ ಬಾಳಿಕೆಗೆ ಈ ವಿಗ್ರಹ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮಣ್ಣಿನ ಮೂರ್ತಿಗಿಂತ ಈ ಫೈಬರ್ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಮುಖವಾಗಿ ಪ್ರತಿಕೂಲ ಹವಾಮಾನ ತಡೆದುಕೊಳ್ಳಬಲ್ಲ ಈ ಫೈಬರ್ ಮೂರ್ತಿಯನ್ನು ಹೊರಾಂಗಣದಲ್ಲಿ ಹೆಚ್ಚಾಗಿ ಇಡಲು ಬಳಸಿಕೊಳ್ಳಲಾಗುತ್ತದೆ.
ಇತ್ತೀಚೆಗೆ ಫೈಬರ್ ಶ್ರೀರಾಮನ ವಿಗ್ರಹವನ್ನು ತಯಾರಿಸಿಕೊಡಬೇಕೆಂಬ ಆರ್ಡರ್ ಅಯೋಧ್ಯೆಯಿಂದ ತಮಗೆ ಬಂದಿರುವುದಾಗಿ ಜಮಾಲುದ್ದೀನ್ ಪುತ್ರ ಬಿಟ್ಟು ತಿಳಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ವರ್ಕ್ ಶಾಪ್ ಮಣ್ಣಿನ ವಿಗ್ರಹಕ್ಕೆ ಹೆಸರುವಾಸಿಯಾಗಿತ್ತು. ಆದರೆ ಫೈಬರ್ ವಿಗ್ರಹದ ಬೇಡಿಕೆ ಹೆಚ್ಚಾಗಿದ್ದರಿಂದ ಅದಕ್ಕೆ ಹೆಚ್ಚು ಒತ್ತು ನೀಡಿ ವಿಗ್ರಹ ತಯಾರಿಸುತ್ತಿದ್ದಾರಂತೆ. ಬೃಹತ್ ಗಾತ್ರದ ವಿಗ್ರಹ ತಯಾರಿಕೆಗೆ ಅಂದಾಜು 2.8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಕರಕುಶಲ ಕೆಲಸದ ಸಂಬಳವೂ ಸೇರಿರುತ್ತದೆ.
ಸುಮಾರು 30ರಿಂದ 35 ಜನರು ಈ ಬೃಹತ್ ಶ್ರೀರಾಮನ ವಿಗ್ರಹ ತಯಾರಿಯಲ್ಲಿ ತೊಡಗಿಕೊಂಡಿದ್ದು, ಸುಮಾರು ಒಂದೂವರೆ ತಿಂಗಳು ಕಾಲ ವಿಗ್ರಹ ತಯಾರಿಸಲು ಬೇಕಾಗಿದ್ದು, ನಂತರ ಈ ವಿಗ್ರಹಗಳನ್ನು ಉತ್ತರ 24 ಪರಗಣದಿಂದ ಅಯೋಧ್ಯೆಗೆ ಸಾಗಿಸಲು 45 ದಿನಗಳ ಅಗತ್ಯವಿದೆ ಎಂದು ಯುವಶಿಲ್ಪಿ ಬಿಟ್ಟು ತಿಳಿಸಿದ್ದಾರೆ.
ವಿಗ್ರಹ ತಯಾರಿ ಬಗ್ಗೆ ಪ್ರಶ್ನಿಸಿದಾಗ ಜಮಾಲುದ್ದೀನ್ ಹೇಳಿದ್ದಿಷ್ಟು: ಧರ್ಮ ಎಂಬುದು ನಮ್ಮ ವೈಯಕ್ತಿಕ ವಿಚಾರ. ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಆದರೆ ಇದರಲ್ಲಿ ನಮ್ಮ ಸಂದೇಶ ಸಿಂಪಲ್ಲಾಗಿದೆ…ಕೋಮುವಾದದ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಬೇಕಾಗಿದೆ. ಆ ನಿಟ್ಟಿನಲ್ಲಿ ಭಗವಾನ್ ಶ್ರೀರಾಮನ ವಿಗ್ರಹ ತಯಾರಿ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ನಾನೊಬ್ಬ ಕಲಾವಿದ ಎಂಬ ಸಂದೇಶದೊಂದಿಗೆ ಭ್ರಾತೃತ್ವ ಸಂಸ್ಕೃತಿ ಬೆಳೆಯಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.