Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

ರಾಜ-ಮಹಾರಾಜರು ಉಪಯೋಗಿಸುತ್ತಿದ್ದ ಕತ್ತಿ, ಬಂದೂಕುಗಳನ್ನೂ ಪೂಜಿಸಿರುತ್ತಾರೆ.

Team Udayavani, Oct 5, 2024, 12:08 PM IST

Mysore Dasara: ನೆನಪುಗಳ ಹಂದರ ನಮ್ಮೂರ ದಸರಾ- ಅರಮನೆ ನಗರಿ ಮೈಸೂರಿನ ಬೀದಿಯಿಂದ…

ಹಿಂದೂ ಧರ್ಮದಲ್ಲಿ ದೇವಿಯನ್ನು ಆರಾಧಿಸುವ ಬಹು ಮುಖ್ಯ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ನವದುರ್ಗೆಯರನ್ನು ಪೂಜಿಸಿ, ಹತ್ತನೆಯ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಶರನ್ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಪಶಕ್ಕೆ ದುರ್ಗೋತ್ಸವ ಎಂದು ಸಹ ಹೇಳಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ದಸರಾ ಎಂದು ಕರೆಯುತ್ತೇವೆ. ಹಿಂದೂ ಪಂಚಾಂಗದ ಆಶ್ವಯುಜ ಶುದ್ಧ ಪ್ರತಿಪದೆಯ ದಿನ ಆರಂಭವಾಗುವ ನವರಾತ್ರಿಗೆ ಹಲವು ಹಿನ್ನೆಲೆಗಳಿವೆ.

ತ್ರೇತಾಯುಗದಲ್ಲಿ ರಾಮನು ರಾವಣನನ್ನು ಸಂಹಾರ ಮಾಡಿದ್ದು ವಿಜಯದಶಮಿಯ ದಿನ ಎನ್ನಲಾಗುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸ ಮಾಡುವಾಗ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಮುಚ್ಚಿ ಇಟ್ಟಿದ್ದರು. ದಶಮಿಯ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದ್ದರಿಂದ ಅದನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಹೀಗೆ ಧರ್ಮ ಅಧರ್ಮವನ್ನು ಸೋಲಿಸಿದ ಸಂಕೇತ ನವರಾತ್ರಿ/ ವಿಜಯದಶಮಿ. ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರಾಯಿತು. ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬ ಇತಿಹಾಸದ ಉಲ್ಲೇಖವಿದೆ.
ದಸರಾ ಎಂದೊಡನೆ ಎಲ್ಲರಿಗೂ ನೆನಪಾಗುವುದು ಮೈಸೂರು. ಮೈಸೂರಿನ ದಸರಾ ಉತ್ಸವ ಜಗತ್ಪ್ರ ಸಿದ್ಧ. ಅದು ನನ್ನೂರು ಎಂಬ ಹೆಮ್ಮೆ ನನ್ನದು.

ಜತೆಗೆ ಮೈಸೂರು ಅರಮನೆಯ ಐದು ನಿಮಿಷದ ಕಾಲ್ನಡಿಗೆಯ ಹಾದಿಯಲ್ಲಿ ನಮ್ಮ ಸೂರು ದಸರೆ ಬಂತೆಂದರೆ, ರಸ್ತೆಗಳೆಲ್ಲ ಝಗಮಗಿಸುವ ಬೆಳಕಿನಿಂದ ಕಂಗೊಳಿಸುತ್ತದೆ. ಮನೆಯ ಸುತ್ತ-ಮುತ್ತಲಿರುವ ಎಲ್ಲ ದೇವಿಯ ದೇವಸ್ಥಾನಗಳಲ್ಲಿ ನಿತ್ಯವೂ ವಿಶೇಷ ಪೂಜೆಗಳು. ದುರ್ಗಾಷ್ಟಮಿಯ ದಿನ ಎಲ್ಲರಿಗೂ ಅನ್ನಸಂತರ್ಪಣೆ, ಹತ್ತು ದಿನಗಳ ಉತ್ಸವ, ಪ್ರತೀ ರವಿವಾರ ಸಂಜೆ ಏಳರಿಂದ ಎಂಟು ಗಂಟೆ ಒಂದು ತಾಸು ಅರಮನೆಯು ಪೂರ್ಣ ದೀಪಗಳಿಂದ ಕಂಗೊಳಿಸುವುದು ರೂಢಿ. ಆದರೆ ನವರಾತ್ರಿಯಲ್ಲಿ ಪ್ರತೀ ದಿನವೂ ಅರಮನೆಯು ದೀಪಾಲಂಕೃತವಾಗುತ್ತದೆ.

ನವರಾತ್ರಿಯಲ್ಲಿ ಪ್ರತೀ ದಿನವೂ ಅರಮನೆಯ ಆವರಣದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುತ್ತದೆ. ಪ್ರಖ್ಯಾತ ಹಿನ್ನಲೆ ಗಾಯಕರು, ಹಲವಾರು ಚಿತ್ರ ನಟ-ನಟಿಯರು ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುತ್ತಾರೆ. ಸಾಮಾನ್ಯರಿಗೆ ಅವರನ್ನು ನೋಡುವುದೊಂದು ಸಂಭ್ರಮ. ಅಲ್ಲೇ ಅರಮನೆಯ ಪಕ್ಕದಲ್ಲಿರುವ ದಸರಾ ವಸ್ತು ಪ್ರದರ್ಶನವು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ.

ಮೈಸೂರಿನ ಗೊಂಬೆ ಮನೆಯಲ್ಲಿ ಹಲವಾರು ತರಹದ ಗೊಂಬೆಗಳು ಜೋಡಿಸಿದ್ದು, ಮಕ್ಕಳಷ್ಟೇ ಅಲ್ಲದೆ ದೊಡ್ಡವರನ್ನೂ ಸೆಳೆಯುತ್ತದೆ. ಹಲವೆಡೆ ರಂಗೋಲಿ, ಕುಸ್ತಿ ಸ್ಪರ್ಧೆ ಹಾಗೂ ಸಾಕು ನಾಯಿಗಳನ್ನು ಅಂದವಾಗಿ ಸಿಂಗರಿಸಿ ಪ್ರದರ್ಶನ ಮಾಡುವುದು, ಫ‌ಲಪುಷ್ಪ ಪ್ರದರ್ಶನ, ಹೀಗೆ ಹಲವಾರು ಕಾರ್ಯಕ್ರಮಗಳು ನೇಪಥ್ಯದಲ್ಲಿ ನಡೆಯುತ್ತಾ ಮೈಸೂರಿಗಷ್ಟೇ ಅಲ್ಲದೆ ಬೇರೆ ನಗರಗಳ ಜನರನ್ನೂ ಕೈಬೀಸಿ ಕರೆಯುತ್ತದೆ.

ಇವು ನವರಾತ್ರಿ ಪ್ರಾರಂಭವಾದ ಅನಂತರದ ಸಂಭ್ರಮವಾದರೆ ದಸರೆಗೂ ಮೊದಲು ತಿಂಗಳುಗಳ ಮೊದಲು ಅರಮನೆಗೆ ಕರೆತರುವ ಗಜಪಡೆಗಳ ತರಬೇತಿ, ತಾಲೀಮು ಮತ್ತೂಂದು ರೀತಿಯ ಸೊಗಸು. ಕಾಡಿನಿಂದ ನಾಡಿನ ಜನಜಂಗುಳಿಗೆ ಆನೆಗಳನ್ನು ಒಗ್ಗಿಸಲು ಅಂಬಾರಿ ಆನೆಗಳನ್ನು ಕರೆತಂದು ಮುಖ್ಯ ರಸ್ತೆಗಳಲ್ಲಿ ಅದನ್ನು ದಿನವೂ ಸುತ್ತಾಡಿಸುತ್ತಾರೆ. ಬಾಲ್ಯದಲ್ಲಿ ಚಿಕ್ಕಮಕ್ಕಳ ಹಿಂಡೂ ಅವುಗಳೊಂದಿಗೆ ಹೋಗಿ ಖುಷಿ ಪಡುತ್ತಿದ್ದೆವು.

ಈ ಸಮಯದಲ್ಲಿ ಅರಮನೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರೂ ಹೆಚ್ಚು. ಚಿನ್ನದ ಸಿಂಹಾಸನವನ್ನು ದಸರೆಯ ವೇಳೆ ಸಾರ್ವಜನಿಕ ವೀಕ್ಷಣೆಗಾಗಿಯೂ ತೆರೆದಿರುವುದೊಂದು ವಿಶೇಷ. ಅರಮನೆಯ ಆವರಣದಲ್ಲಿ ಗಜಪಡೆಗೆ ಹಲವಾರು ತರಬೇತಿಗಳನ್ನೂ ನೀಡುತ್ತಾರೆ. ಗುಂಡಿನ ಶಬ್ದಕ್ಕೆ ಅವು ಗಾಬರಿಯಾಗಬಾರದೆಂದು ಹಲವು ಬಾರಿ ಗುಂಡನ್ನು ಹಾರಿಸಿ ಅದರ ಶಬ್ದಕ್ಕೆ ಹೊಂದುವಂತೆ ಮಾಡುತ್ತಾರೆ.

ಹತ್ತನೆಯ ದಿನ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿಯನ್ನು ನೋಡಲು ಲಕ್ಷಾಂತರ ಜನ ಕಿಕ್ಕಿರಿದು ಸೇರಿರುತ್ತಾರೆ. ಮೈಸೂರು ಆವರಣದೊಳಗಿಂದ ಪ್ರಾರಂಭವಾಗುವ ದಸರ ಉತ್ಸವ ಮುಖ್ಯ ಬೀದಿಗಳಲ್ಲಿ ಹಾದು ಸಂಜೆಯ ವೇಳೆಗೆ ಬನ್ನಿಮಂಟಪವನ್ನು ತಲುಪುತ್ತದೆ. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಅಂದು ಒಬ್ಬರಿಗೊಬ್ಬರು ಬನ್ನಿ ಎಲೆಗಳನ್ನು ನೀಡಿ, ಬನ್ನಿ ಬಂಗಾರವಾಗಲಿ ಎನ್ನುವುದು ವಾಡಿಕೆ. ಸಂಜೆ ಪೊಲೀಸರಿಂದ ನಡೆಯುವ “ಪಂಜಿನ ಕವಾಯತು’ ಮೈನವಿರೇಳಿಸುತ್ತದೆ.

ದಸರೆಯ ಪ್ರೊಸೆಷನ್‌ನಲ್ಲಿ ಹಲವಾರು ಮುಖ್ಯ ಪರಿಕಲ್ಪನೆಗಳ ಟ್ಯಾಬ್ಲೋಗಳನ್ನು ಮಾಡಿ ಮೆರವಣಿಗೆ ಮಾಡುವುದು ಜನರಿಗೆ ಉತ್ತಮ ಸಂದೇಶಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ನೀರಿನ ಸಂರಕ್ಷಣೆ, ಕಾಡು ಪ್ರಾಣಿಗಳ ಹಿತ, ಹಸುರಿನ ಮಹತ್ವ, ವಿದ್ಯೆಯ ಆವಶ್ಯಕತೆ, ಸರಕಾರಿ ಶಾಲೆಗಳ ಉಳಿವು ಹೀಗೆ ಸಾಮಾಜಿಕ ಕಳಕಳಿಯುಳ್ಳ ವಿಷಯಗಳ ಮೇಲೆ ಟ್ಯಾಬ್ಲೋಗಳನ್ನು ಮಾಡಿರುತ್ತಾರೆ.

ವಿಜಯ ದಶಮಿಯ ದಿನ ಎಲ್ಲರೂ ಆಯುಧ ಪೂಜೆಯನ್ನೂ ಮಾಡುವುದು ಗಮನಾರ್ಹ. ಮನೆ-ಮನೆಗಳಲ್ಲಿ ತಾನು ದಿನ ನಿತ್ಯ ಬಳಸುವ ಆಯುಧಗಳು, ವಾಹನಗಳನ್ನು ಶುದ್ಧಗೊಳಿಸಿ ಪೂಜೆ ಮಾಡುತ್ತಾರೆ. ಜತೆಗೆ ಪುಸ್ತಕಗಳನ್ನು ಇಟ್ಟು ತಾಯಿ ಸರಸ್ವತಿಯನ್ನು ಆರಾಧಿಸುತ್ತಾರೆ. ಅರಮನೆಯಲ್ಲೂ ರಾಜ-ಮಹಾರಾಜರು ಉಪಯೋಗಿಸುತ್ತಿದ್ದ ಕತ್ತಿ, ಬಂದೂಕುಗಳನ್ನೂ ಪೂಜಿಸಿರುತ್ತಾರೆ. ಈ ನವರಾತ್ರಿಯ ವೈಭೋಗ ಹೇಳಿದಷ್ಟು ಕಡಿಮೆಯೇ.

ಪ್ರಸ್ತುತ ನನ್ನ ವಾಸ ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ. ಇಲ್ಲಿ ಸಮಾನ ಆಸಕ್ತಿಯುಳ್ಳವರು ಒಂದುಗೂಡಿ ಹಲವಾರು ಸಮುದಾಯಗಳನ್ನು ಮಾಡಿಕೊಂಡಿದ್ದಾರೆ. ಸಾವಿರ ಮೈಲಿಗಳಾಚೆ ಇರುವ ನಮಗೆ ಅದು ಅನಿವಾರ್ಯವೂ ಕೂಡ. ನಮ್ಮ ಸ್ನೇಹಿತರ ಬಳಗವೊಂದು ನವರಾತ್ರಿಯ ಸಮಯದಲ್ಲಿ ಲಲಿತಾ ಸಹಸ್ರನಾಮ ಪಾರಾಯಣವನ್ನು ರೂಢಿಸಿಕೊಂಡಿದ್ದೇವೆ.

ಆರೋಹಣಂ ಎಂಬ ಹೆಸರಿನಡಿಯಲ್ಲಿ ಹಲವರು ಸೇರಿ ಚಿತ್ರಕಲೆ, ರಂಗೋಲಿ, ಪಾರಾಯಣ, ನೃತ್ಯ, ಸಂಗೀತಗಳನ್ನು ಆಸಕ್ತರಿಂದ ರೆಕಾರ್ಡ್‌ ಮಾಡಿಸಿ ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಹಂಚಿ ಸಂಭ್ರಮಿಸುತ್ತೇವೆ. ದುರ್ಗಾ ಪೂಜೆ, ಕನ್ಯಾ ಪೂಜೆಯನ್ನು ವಿಶೇಷವಾಗಿ ಆಚರಿಸುವವರು ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ದಸರಾ ಮೇಳಗಳನ್ನೂ ನಡೆಸುತ್ತಾರೆ. ರಾಮಲೀಲಾ ನಾಟಕಗಳನ್ನು ಮಾಡಿಸುವುದು ಮತ್ತು ವಿವೇಷವಾಗಿ ಎತ್ತರದ ರಾವಣನ ಪುತ್ತಳಿ ನಿರ್ಮಿಸಿ, ದಹನ ಮಾಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಗುತ್ತದೆ.

ನೆನಪುಗಳ ಹಂದರಕ್ಕೆ ಇಲ್ಲೂ ಬೆಳಕಿನಿಂದ ಮೂಲಗಳನ್ನು ಕಟ್ಟಿಕೊಳ್ಳುವುದು ಬಹು ಮುಖ್ಯ. ನಮ್ಮ ಸಂಪ್ರದಾಯ, ಹಬ್ಬ ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೂ ಪ್ರವಹಿಸುವಲ್ಲಿ ಸಮುದಾಯಗಳ ಪಾತ್ರ ಹಿರಿದು. ಸಾಗರದಾಚೆಗೂ ಸಂಘರ್ಷಗಳನ್ನು ಸೃಷ್ಟಿಸುವ ಸಣ್ಣ ಮನಸ್ಥಿತಿಗಳನ್ನು ಬದಿಗೊತ್ತಿ, ಒಟ್ಟುಗೂಡಿ ಉನ್ನತಿ ಮತ್ತು ನವದುರ್ಗೆಯರ ಆಶೀರ್ವಾದ ಪಡೆವ ಧನ್ಯತೆಯನ್ನು ಅನುಭವಿಸಬೇಕಿದೆ.

*ಶೋಭಾ ಚೌಹಾಣ, ಫ್ರಾಂಕ್‌ಫ‌ರ್ಟ್‌

 

ಟಾಪ್ ನ್ಯೂಸ್

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.