Mysore: ಸುತ್ತೂರು-ಶಿಲ್ಲಾಂಗ್ ನಡುವೆ ಶಾಶ್ವತ ಸಂಬಂಧ: ರಾಜ್ಯಪಾಲ ಸಿ.ಎಚ್.ವಿಜಯಶಂಕರ್
ಡಾ| ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 109ನೇ ಜಯಂತಿ ಕಾರ್ಯಕ್ರಮ
Team Udayavani, Aug 26, 2024, 1:46 AM IST
ಮೈಸೂರು: ಮೈಸೂರು-ಮೇಘಾಲಯದ ಸಂಬಂಧ ಕೇವಲ ನಾನು ರಾಜ್ಯಪಾಲನಾಗಿರುವ ಅವಧಿಗೆ ಸೀಮಿತವಾಗಬಾರದು. ಅದಕ್ಕಾಗಿ ಸುತ್ತೂರು ಮತ್ತು ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಡುವೆ ಶಾಶ್ವತ ಸಂಬಂಧ ಬೆಳೆಯಬೇಕು. ಈ ಸಂಬಂಧ ಬೆಸೆಯಲು ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹೇಳಿದರು.
ನಗರದ ಸುತ್ತೂರು ಶಾಖಾ ಮಠದ ಆವರಣದಲ್ಲಿ ರವಿವಾರ ನಡೆದ ಡಾ| ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 109ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಶಿಕ್ಷಣದ ಜವಾಬ್ದಾರಿ
ಮೇಘಾಲಯ ಬೆಟ್ಟ-ಗುಡ್ಡಗಳಿಂದ ಕೂಡಿರುವ ರಾಜ್ಯವಾಗಿದೆ. ಅಲ್ಲಿ ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಹಾಗೂ ಅವರ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ದೊರೆಕಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೈಸೂರಿನಲ್ಲಿ ಸುತ್ತೂರು ಮಠವು ಈ ಭಾಗದ ಜನರಿಗೆ ಶ್ರೇಷ್ಠ ಮಟ್ಟದ ಶಿಕ್ಷಣ ಸೌಲಭ್ಯ ನೀಡಿದೆ.
ಇದೇ ಸೌಲಭ್ಯವನ್ನು ಮೇಘಾಲಯಕ್ಕೂ ವಿಸ್ತರಣೆ ಮಾಡಬೇಕು. ಅದಕ್ಕಾಗಿ ತಾವು ಅಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು. ಅದಕ್ಕೂ ಮೊದಲು ಶ್ರೀಗಳು ಶಿಲ್ಲಾಂಗ್‌ನ ರಾಜಭವನಕ್ಕೆ ಬರಬೇಕು ಎಂದು ವಿಜಯಶಂಕರ್ ಅವರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಆಹ್ವಾನಿಸಿದರು.
ಮೇಘಾಲಯ ರಾಜಭವನದಲ್ಲಿ ಮಾಂಸ, ಮದ್ಯ ನಿಷೇಧ
ಮೇಘಾಲಯ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡು ರಾಜಭವನ ಪ್ರವೇಶ ಮಾಡಿದ ಮರುದಿನವೇ ಉನ್ನತ ಅಧಿಕಾರಿಗಳ ಸಭೆ ನಡೆಸಿ, ರಾಜಭವನ ದೇವಸ್ಥಾನವಿದ್ದಂತೆ. ಅದರ ಪಾವಿತ್ರ್ಯತೆ ಕಾಪಾಡಬೇಕು. ಇದಕ್ಕಾಗಿ ರಾಜಭವನದ ಆವರಣದಲ್ಲಿ ಮಾಂಸಾಹಾರ ಹಾಗೂ ಮದ್ಯಪಾನ ಸೇವಿಸಬಾರದು ಎಂದು ನಿರ್ಣಯ ಮಾಡಿ, ಮಾಂಸ ಹಾಗೂ ಮದ್ಯವನ್ನು ನಿಷೇಧಿಸಲಾಗಿದೆ. ಹಿಂದೆ ಹೇಗಿತ್ತೋ ಗೊತ್ತಿಲ್ಲ, ಮುಂದೆ ಏನಾಗುತ್ತಧ್ದೋ ಗೊತ್ತಿಲ್ಲ. ಆದರೆ ನಾನು ರಾಜಭವನದಲ್ಲಿ ಇರುವ ತನಕ ಇದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ವಿಜಯಶಂಕರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.