ಬಾರ್ಸಿಲೋನಾ ಓಪನ್: ನಡಾಲ್‌ಗೆ 12ನೇ ಪ್ರಶಸ್ತಿ
Team Udayavani, Apr 27, 2021, 12:05 AM IST
ಬಾರ್ಸಿಲೋನಾ: ರಫೆಲ್ ನಡಾಲ್ 2021ನೇ ಸಾಲಿನ ಬಾರ್ಸಿಲೋನಾ ಓಪನ್ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ತಮ್ಮ ಬಾರ್ಸಿಲೋನಾ ಕಿರೀಟಗಳ ದಾಖಲೆಯನ್ನು 12ಕ್ಕೆ ವಿಸ್ತರಿಸಿದ್ದಾರೆ.
3 ಸೆಟ್‌ಗಳ ಜಿದ್ದಾಜಿದ್ದಿ ಫೈನಲ್‌ನಲ್ಲಿ ರಫೆಲ್ ನಡಾಲ್ ಗ್ರೀಕ್‌ನ ಸ್ಟೆಫನೋಸ್ ಸಿಸಿಪಸ್ ಅವರನ್ನು 6-4, 6-7 (8-6), 7-5 ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಕಾದಾಟ 3 ಗಂಟೆ, 38 ನಿಮಿಷಗಳ ತನಕ ಸಾಗಿತು.
ಅಂತಿಮ ಸೆಟ್‌ನ 10ನೇ ಗೇಮ್ ವೇಳೆ ನಡಾಲ್ ಸೋಲಿನ ಅಪಾಯಕ್ಕೆ ಸಿಲುಕಿದ್ದರು. ಆದರೆ ಚೇತರಿಸಿ ಕೊಂಡು 3 ನೇರ ಗೇಮ್ ಗೆಲ್ಲುವುದರೊಂದಿಗೆ ಮೇಲುಗೈ ಸಾಧಿಸಿದರು. ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿ ಯನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಸಿಪಸ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
ಇದನ್ನೂ ಓದಿ :ಪಂಜಾಬ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿ ಏರಿದ ಕೆಕೆಆರ್
ಇದು 2021ರ ಟೆನಿಸ್ ಋತುವಿನಲ್ಲಿ ನಡಾಲ್ ಪಾಲಾದ ಮೊದಲ ಪ್ರಶಸ್ತಿ. ಈ ಸಾಧನೆಯಿಂದ ಅವರು ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮರಳಿ ದ್ವಿತೀಯ ಸ್ಥಾನಕ್ಕೆ ಏರಿದರು. ರಶ್ಯದ ಡ್ಯಾನಿಲ್ ಮೆಡ್ವಡೇವ್ ಮೂರಕ್ಕಿಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.